ಬೆಂಗಳೂರು :ಕರೊನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಾಗಿರುವ ಆಕ್ಸಿಜನ್ ಸಿಲಿಂಡರ್​ಗಳನ್ನು ಹತ್ತು ಪಟ್ಟು ಹಣ ಪಡೆದು ಮಾರುತ್ತಿದ್ದ ಗ್ಯಾಸ್​ ಕಂಪೆನಿಯ ಸಿಬ್ಬಂದಿಯನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಒಂದು 47 ಲೀಟರ್ ಆಕ್ಸಿಜನ್ ಸಿಲಿಂಡರ್​ಗೆ ಸರ್ಕಾರ ನಿಗದಿಪಡಿಸಿರುವ ಬೆಲೆ 300 ರೂ.ಗಳಾದರೆ, 3,000 ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ನಗರದ ಹೊರವಲಯದ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಸೀಗಾ ಗ್ಯಾಸಸ್ ಪ್ರೈ. ಲಿಮಿಟೆಡ್​ ಕಂಪೆನಿಯ ಕಛೇರಿ ಮೇಲೆ ಇಂದು ನಗರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ರೇಡ್​ ನಡೆಸಿದರು. ಆಗ ಕಂಪೆನಿಯ ವಿಭಾಗ ಮುಖ್ಯಸ್ಥ ರವಿಕುಮಾರ್​(36) ಎಂಬುವ, ಎರಡು ಆಕ್ಸಿಜನ್​ ಸಿಲಿಂಡರ್​ಗಳನ್ನು 6000 ರೂ.ಗಳಿಗೆ ಮಾರುತ್ತಿದ್ದು, ರೆಡ್​ ಹ್ಯಾಂಡೆಡ್​ ಆಗಿ ಸಿಕ್ಕಿಬಿದ್ದಿದ್ದಾನೆ.
ಪೀಣ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 420, ಡ್ರಗ್​ ಪ್ರೈಸ್​ ಕಂಟ್ರೋಲ್ ಆರ್ಡರ್​ನ ಸೆಕ್ಷನ್ 27 ಮತ್ತು ಇಸಿ ಕಾಯ್ದೆಯ ಸೆಕ್ಷನ್​ 3, 7 ರಡಿ ಮೊಕದ್ದಮೆ ದಾಖಲಿಸಲಾಗಿದೆ.
ಬಾಬಾ ರಾಮದೇವ್​ರ ಕೊರೊನಿಲ್​​ ಬಗ್ಗೆ ಹೆಚ್ಚಿದ ಗೂಗಲ್ ಸರ್ಚ್​ !

ಖಾಸಗಿ ಲ್ಯಾಬ್‌ಗಳ ಸ್ಯಾಂಪಲ್​​ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಪರೀಕ್ಷೆ ! ಸಿಕ್ಕಿಬಿದ್ದರು ನಾಲ್ವರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 6 =
Remember me
