ಕಾಸರಗೋಡು:ಅಶ್ವಿನಿನಗರದ ಆಸ್ಪತ್ರೆ ವಠಾರದಲ್ಲಿ ಶನಿವಾರ ಗುಂಪೊಂದು ಚೆಮ್ನಾಡ್ ನಿವಾಸಿ ಮಹಮ್ಮದ್ ರಫೀಕ್(48) ಎಂಬುವನನ್ನು ಹಾಡಹಗಲೇ ಥಳಿಸಿ ಕೊಲೆ ಮಾಡಿದೆ.
ಮಗುವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಗೆ ರಫೀಕ್ ಕಿರುಕುಳ ನೀಡಿದ. ಇದನ್ನು ವಿರೋಧಿಸಿದ ಆಕೆ ಆತನನ್ನು ಪಕ್ಕಕ್ಕೆ ತಳ್ಳಿದ್ದರು. ಈ ವಿಚಾರವಾಗಿ ರಫೀಕ್ ಹಾಗೂ ತಂಡವೊಂದರ ನಡುವೆ ವಾಗ್ವಾದ ನಡೆದಿತ್ತು. ಇದಾದ ಕೆಲ ಹೊತ್ತಿನಲ್ಲೇ ಆಸ್ಪತ್ರೆ ವಠಾರದ ಮೆಡಿಕಲ್ ಶಾಪ್ ಬಳಿಗೆ ಬಂದ ತಂಡ ಮಹಮ್ಮದ್ ರಫೀಕ್‌ನನ್ನು ಯದ್ವಾತದ್ವಾ ಥಳಿಸಿದೆ. ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ರಫೀಕ್‌ನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅಷ್ಟರಲ್ಲೇ ಆತ ಮೃತಪಟ್ಟಿದ್ದ.
ಸಾವು ಹೇಗೆ ಸಂಭವಿಸಿತು ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದಷ್ಟೇ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿವೈಎಸ್‌ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.
ಅಮೆರಿಕದ ಹೊಸ ಅಧ್ಯಕ್ಷ ಜೋ ಬಿಡೆನ್- ಉದ್ಯಮಿ ಅಶೋಕ್ ಖೇಣಿ ಸ್ನೇಹಿತರು!

ಮತಾಂತರಗೊಂಡು ಮದುವೆಯಾದವಳಿಗೆ ಪತಿಯಿಂದಲೂ ಕಿರುಕುಳ, ಸ್ನೇಹಿತನಿಂದಲೂ ತೊಂದರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − two =
Remember me
