ರಾಯಚೂರು:ವ್ಯಕ್ತಿಯೊಬ್ಬರ ಶವಸಂಸ್ಕಾರಕ್ಕೆಂದು ಹೋಗಿದ್ದವನೊಬ್ಬ ಐದು ದಿನಗಳ ಬಳಿಕ ಶವವಾಗಿ ಪತ್ತೆಯಾದಂಥ ಪ್ರಕರಣವೊಂದು ವರದಿಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಇಂಥದ್ದು ದುರಂತ ನಡೆದಿದೆ. ಜೆಸ್ಕಾಂ ಸಿಬ್ಬಂದಿ ಈಶ್ವರ (30) ಶವವಾಗಿ ಪತ್ತೆಯಾದ ವ್ಯಕ್ತಿ.
ಈಶ್ವರ ಮೂಲತಃ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದ ವ್ಯಕ್ತಿ. ಈತ ಮಾ. 21ರಂದು ಯರಗುಂಟಿ ಗ್ರಾಮದಲ್ಲಿದ್ದ ಶವಸಂಸ್ಕಾರಕ್ಕೆಂದು ಹೋಗಿದ್ದ. ಅಲ್ಲಿಂದ ಮರಳುವಾಗ ಕೃಷ್ಣ ಬಲದಂಡೆ ಕಾಲುವೆಗೆ ಸ್ನಾನಕ್ಕೆ ತೆರಳಿದ್ದ.
ಇದನ್ನೂ ಓದಿ:ಗಂಡನ ಕತ್ತನ್ನು ಕತ್ತರಿಸಿದ ಹೆಂಡತಿ; ರುಂಡ ಚೀಲದಲ್ಲಿರಿಸಿ ದೇವಸ್ಥಾನದಲ್ಲಿಟ್ಟಳು!
ಆದರೆ ಸ್ನಾನ ಮಾಡುವಾಗ ನೀರಿನ ರಭಸಕ್ಕೆ ಈಶ್ವರ ಕೊಚ್ಚಿ ಹೋಗಿದ್ದು, ಎಷ್ಟೇ ಹುಡುಕಾಡಿದರೂ ದೇಹ ಸಿಕ್ಕಿರಲಿಲ್ಲ. ಈಶ್ವರನ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಲಿಂಗಸುಗೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಇಂದು ದೇವದುರ್ಗ ತಾಲ್ಲೂಕಿನ ಸೋಮನಮರಡಿಯ ಕಾಲುವೆ ಗೇಟ್​​ನಲ್ಲಿ ಶವ ಪತ್ತೆಯಾಗಿದೆ.
ರೈಲ್ವೇ ಹಳಿ ಮೇಲೆ ಅಂತ್ಯವಾದ ಪ್ರೀತಿ; ಪ್ರೇಮಿಸುತ್ತಿದ್ದ ಜೋಡಿಯ ಆತ್ಮಹತ್ಯೆ

ರಾಮ್​ಗೋಪಾಲ್ ವರ್ಮಾ ಜತೆ ಅಂಡರ್​ವರ್ಲ್ಡ್​​ನಲ್ಲಿ ಉಪೇಂದ್ರ; ಯಾರದು ‘R’?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − three =
Remember me
