| ಕೀರ್ತಿನಾರಾಯಣ ಸಿ. ಬೆಂಗಳೂರು
ವೈಯಕ್ತಿಕ ಬಳಕೆಗಾಗಿ ಇಬ್ಬರು ಹೋಗಲು ದ್ವಿಚಕ್ರ ವಾಹನವಾಗಿ ಬಳಸುವುದಕ್ಕೆ ಅವಕಾಶ! ಜೀವನೋಪಾಯಕ್ಕಾದರೆ ಬಾಡಿಗೆ ರೂಪದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಹಾಗೂ ಗೂಡ್ಸ್ ಸಾಗಿಸುವ ವಾಹನವಾಗಿಸಿಕೊಳ್ಳಲು ಅನುಮತಿ… ಆಟೋ ರಿಕ್ಷಾ ಅಥವಾ ಗೂಡ್ಸ್ ವಾಹನವನ್ನು ಮೂರು ರೀತಿ ಬಳಸಲು ಅನುಮತಿ ನೀಡುವಂತಹ ನಿಯಮಾವಳಿ ಇದೇ ಮೊದಲ ಬಾರಿಗೆ ದೇಶದಲ್ಲಿ ಜಾರಿಗೆ ಬಂದಿದೆ. ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ, ‘ಹೊಸ ವಾಹನ ವರ್ಗ’ ಸೇರ್ಪಡೆ ಮಾಡಿದ್ದು, ಈಗಾಗಲೇ ಕರ್ನಾಟಕದಲ್ಲೂ ನೋಂದಣಿ ಶುರುವಾಗಿದೆ.
ಕೇಂದ್ರ ಮೋಟಾರು ವಾಹನಗಳು (8ನೇ ತಿದ್ದುಪಡಿ) ನಿಯಮ 2024 ಜಾರಿಗೊಳಿಸಲಾಗಿದೆ. ಇದಕ್ಕೆ ಎಲ್2-5, ಎಲ್2-5ಎಂ ಹಾಗೂ ಎಲ್2-5ಎನ್ ಎಂದು ಶೀರ್ಷಿಕೆ ಕೊಡಲಾಗಿದೆ. ಎಲ್2-5 ಎಂದರೆ ದ್ವಿಚ್ರಕ ವಾಹನ, ಎಲ್2-5ಎಂ ಎಂದರೆ ಪ್ರಯಾಣಿಕರ ಸಾಗಿಸುವ ವಾಹನ, ಎಲ್2-5ಎನ್ ಎಂದರೆ ಗೂಡ್ಸ್ ವಾಹನ ಎಂದು ವ್ಯಾಖ್ಯಾನಿಸಲಾಗಿದೆ. ಎಲ್ಲದಕ್ಕೂ ಒಂದೇ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ದ್ವಿಚಕ್ರ ವಾಹನಕ್ಕೆ 3 ಚಕ್ರದ ವಾಹನದ (ಮಾಡ್ಯೂಲ್) ಸಂಯೋಜನೆಯೊಂದಿಗೆ ಬಳಸಬಹುದಾಗಿದೆ. ಕೇಂದ್ರ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಹೊಸ ವಾಹನ ವರ್ಗ ನಿಯಮದಡಿ ನೋಂದಣಿ ಮಾಡುವಂತೆ ಎಲ್ಲ ರಾಜ್ಯಗಳ ಸಾರಿಗೆ ಇಲಾಖೆಗಳಿಗೆ ಸೂಚನೆ ಕೊಟ್ಟಿದೆ. ಈಗಾಗಲೇ ಕೆಲ ಪ್ರತಿಷ್ಠಿತ ಕಂಪನಿಗಳು ಬೈಕ್ ಕಂ ಆಟೋ ಆಗಿ ಬಳಸುವಂತಹ ವಾಹನಗಳ ತಯಾರಿಕೆ ಆರಂಭಿಸಿ ಮಾರುಕಟ್ಟೆಗೆ ಬಿಟ್ಟಿವೆ.

ಬಡ ಕುಟುಂಬಕ್ಕೆ ಅನುಕೂಲ:ಬೈಕ್ ಕಂ ಆಟೋ ವಾಹನ ತಯಾರಿಕೆ ಸಂಬಂಧಿಸಿದ ಸಂಶೋಧನೆಗಳು ಜಾಗತಿಕ ಮಟ್ಟದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿತ್ತು. ಕೆಲ ಕಂಪನಿಗಳು ತಯಾರಿಸಿದ ವಾಹನಗಳ ಸುರಕ್ಷತೆಯ ಪರೀಕ್ಷೆ ನಡೆದಿದೆ. ಅದರಲ್ಲಿ ಕೆಲವು ಪಾಸ್ ಆಗಿ ಸಂಚಾರಕ್ಕೆ ಯೋಗ್ಯ ಎಂಬ ವರದಿ ಬಂದಿದೆ. ಇದೀಗ ಕೇಂದ್ರ ಸರ್ಕಾರ ಅಧಿಕೃತವಾಗಿ ನಿಯಮವನ್ನು ರೂಪಿಸಿ, ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ವಾಹನಗಳ ದರ ಮುಂಬರುವ ದಿನಗಳಲ್ಲಿ ಇನ್ನಷ್ಟು ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬರೀ ಮೂರು ನಿಮಿಷ ಸಾಕು!:ಬೇಕೆಂದಾಗ ಬೈಕ್ ಹಾಗೂ ಆಟೋ ಆಗಿ ಪರಿವರ್ತಿಸುವ ಇಂತಹ ವೈಶಿಷ್ಟ್ಯತೆ ಹೊಂದಿರುವ ವಾಹನ ಭಾರತದಲ್ಲಿ ಇದೇ ಮೊದಲ ಬಾರಿ ತಯಾರಿಸಲಾಗಿದೆ. ದ್ವಿಚಕ್ರ ವಾಹನದಿಂದ ಮೂರು ಚಕ್ರದ ವಾಹನವಾಗಿ ಹಾಗೂ ಮೂರು ಚಕ್ರದ ವಾಹನದಿಂದ ದ್ವಿಚಕ್ರ ವಾಹನವಾಗಿ ಬದಲಾವಣೆ ಮಾಡಲು ವಾಹನ ಸವಾರರಿಗೆ ಕೇವಲ 3 ನಿಮಿಷ ಸಾಕಾಗುತ್ತದೆ. ದೆಹಲಿ ಸೇರಿದಂತೆ ಈಗಾಗಲೇ ಹಲವು ರಾಜ್ಯಗಳಲ್ಲಿ ವಾಹನ ಮಾರಾಟ ಹಾಗೂ ನೋಂದಣಿ ಪ್ರಕ್ರಿಯೆಗಳು ಆರಂಭವಾಗಿವೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಪರಿಸರ ಮಾಲಿನ್ಯ ತಗ್ಗಿಸಲು ಈ ವಿಶೇಷ ವಾಹನಗಳು ಬಹಳಷ್ಟು ಪ್ರಯೋಜನವಾಗುತ್ತಿದೆ. ಇಂತಹ ವಾಹನಗಳು ವಿದೇಶಗಳಲ್ಲೂ ಕಾರ್ಯ ನಿರ್ವಹಿಸುತ್ತಿವೆ. ನಗರ ಪ್ರದೇಶಗಳಿಗೆ ಈ ವಾಹನ ಹೆಚ್ಚು ಹೊಂದುತ್ತದೆ.
.ಬೈಕ್, ಆಟೋ ಎರಡನ್ನೂ ಖರೀದಿಸಲು ಸಾಧ್ಯವಾಗದೇ ಇರುವ ಬಡವರಿಗೆ ಪ್ರಯೋಜನ
.ಇಬ್ಬರೇ ಹೋಗಲು ಬೈಕ್ ಆಗಿ ಮೂವರು ಪ್ರಯಾಣಿಸಲು ಆಟೋ ಆಗಿ ಬಳಸಬಹುದು
.ಜೀವನೋಪಾಯಕ್ಕೆ ಹಣ ಗಳಿಸಲು ಆಟೋ ಆಗಿಯೂ ಬಳಸಲು ಅನುಮತಿ ನೀಡಲಾಗಿದೆ
.ಇನ್ಮುಂದೆ ಜನರು ಎರಡೆರಡು ವಾಹನಗಳಿಗೆ ಬಂಡವಾಳ ಹೂಡುವ ಅಗತ್ಯವಿರುವುದಿಲ್ಲ
.ಆರ್​ಟಿಒ ರಿಜಿಸ್ಟ್ರೇಷನ್ ವೇಳೆ ಒಂದೇ ಸಂಖ್ಯೆ ಕೊಡುವುದರಿಂದ ಹೆಚ್ಚಿನ ಶುಲ್ಕ ಹೊರೆ ಬೀಲಲ್ಲ
.ದ್ವಿಚಕ್ರಕ್ಕೆ ತ್ರಿಚಕ್ರ ವಾಹನದ ಮಾಡ್ಯೂಲ್ ಜೋಡಣೆ ಆಗಲಿದೆ, ಬೇಕಾದಾಗ ಬೇರ್ಪಡಿಸಬಹುದು
ಮೋಟಾರು ವಾಹನ ಕಾಯ್ದೆಗೆ ಕೇಂದ್ರದ ತಿದ್ದುಪಡಿ
ಹೊಸ ವಾಹನ ವರ್ಗ ನೋಂದಣಿಗೆ ಅವಕಾಶ
ಮಾರುಕಟ್ಟೆಗೆ ಬರ್ತಿದೆ ಬೈಕ್ ಕಂ ಆಟೋ ವಾಹನ
ಕರ್ನಾಟಕದಲ್ಲೂ ವಾಹನಗಳ ನೋಂದಣಿ ಆರಂಭ
.ಮೂರು ರೀತಿ ಬಳಸಬಹುದಾದ ವಾಹನಕ್ಕೆ ಒಂದೇ ನೋಂದಣಿ ಸಂಖ್ಯೆಯನ್ನು ಕೊಡಬೇಕು
.ನೋಂದಣಿ ಸಂಖ್ಯೆ ಮುಂದೆ ಹಾಗೂ ಹಿಂದೆ 200/100 ಎಂಎಂ ಅಳತೆಯಲ್ಲಿ ಹಾಕಬೇಕು
.ವಾಹನ ತಯಾರಿಕೆಯ ವರ್ಷ, ತಿಂಗಳು, ಇನ್ನಿತರ ವಿವರಗಳನ್ನು ಕಡ್ಡಾಯವಾಗಿ ಹಾಕಬೇಕು
ಜು.6ರಂದು ಅರ್ಜುನ ಆನೆ ಸಮಾಧಿಗೆ ಶಂಕುಸ್ಥಾಪನೆ: ಸಚಿವ ಈಶ್ವರ ಖಂಡ್ರೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × 4 =
Remember me
