ಬೆಂಗಳೂರು:ಈ ಹಿಂದೆ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ 50 ಲಕ್ಷ ರೂ. ವಾರ್ಷಿಕ ಪ್ಯಾಕೇಜ್ ಪಡೆದು ಹೆಸರು ಮಾಡಿದ್ದ ಇದೀಗ ಅದೇ ವಿವಿಯ ಮತ್ತೊಬ್ಬ ವಿದ್ಯಾರ್ಥಿಗೆ 1.5 ಕೋಟಿ ರೂ. ಪ್ಯಾಕೇಜ್ ಸಿಕ್ಕಿದೆ.
ಆ ಮೂಲಕ ಪಿಇಎಸ್ ವಿವಿಯು ಪ್ಲೇಸ್‌ಮೆಂಟ್‌ನಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಭಾರೀ ಮೊತ್ತ ಪ್ಯಾಕೇಜ್ ಪಡೆದುಕೊಂಡ ಕೀರ್ತಿಗೆ ಸಾರಂಗ್ ರವೀಂದ್ರ ಪಾತ್ರರಾಗಿದ್ದಾರೆ. ಲಂಡನ್ ಮೂಲದ ಕನ್‌ಲ್ಫೆಕ್ಟ್ ಕಚೇರಿಗೆ ಸಾರಂಗ್ ಆಯ್ಕೆಯಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ವಿಭಾಗದ ಸಾರಂಗ್ ಈ ಹಿಂದೆ ಆ ಕಂಪನಿಯಲ್ಲೇ ಇಂಟರ್‌ಶಿಪ್ ಮಾಡಿದ್ದರು. ಆನಂತರ ಅವರನ್ನು ಕಂಪನಿಯು ಉತ್ತಮ ಪ್ಯಾಕೇಜ್ ನೀಡಿ ಹುದ್ದೆಗೆ ಆಯ್ಕೆ ಮಾಡಿಕೊಂಡಿದೆ.
ಕಂಪ್ಯೂಟರ್ ಸೈನ್ಸ್ ವಿಭಾಗದ ಮತ್ತೊರ್ವ ವಿದ್ಯಾರ್ಥಿನಿ ಜೀವನ ಹೆಗಡೆ ಅವರು ಗೂಗಲ್‌ನಲ್ಲಿ ಕ್ಲೌಡ್ ಕಸ್ಟಮರ್ ಇಂಜಿನಿಯರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಗೂಗಲ್ ಆಯೋಜಿಸಿದ್ದ ಜಾಗತಿಕ ಮಟ್ಟದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದರು. ಇದೇ ರೀತಿ ದೇಶ-ವಿದೇಶದಿಂದ ಅನೇಕರು ಭಾಗವಹಿಸಿದ್ದರು. ಇದರಲ್ಲಿ ಭಾರತದಿಂದ ಇಬ್ಬರು ಆಯ್ಕೆಯಾಗಿದ್ದು, ಜೀವನ ಹೆಗಡೆ ಕೂಡ ಒಬ್ಬರಾಗಿದ್ದಾರೆ. ಆನಂತರದಲ್ಲಿ ಗೂಗಲ್ ಅವರಿಗೆ ಪೂರ್ಣ ಕಾಲಿಕ ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿದೆ. ಪ್ಯಾಕೇಜ್ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿದ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ, ವಿದ್ಯಾರ್ಥಿಗಳು ಕರೊನಾದಂತಹ ಕಾಲದಲ್ಲಿ ಈ ಭಾರೀ ಪ್ರಮಾಣದ ಪ್ಯಾಕೇಜ್ ಪಡೆಯುವ ಮೂಲಕ ನಮ್ಮ ವಿವಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ನಮ್ಮಲ್ಲಿ ವ್ಯಾಸಂಗ ಮಾಡಿದ ಶೇ.80ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಇಂಟರ್‌ಶಿಪ್ ಪಡೆದುಕೊಂಡಿದ್ದಾರೆ. ಕರೊನಾದ ಕಾಲದಲ್ಲಿ 1,283 ವಿದ್ಯಾರ್ಥಿಗಳು ವರ್ಚುವಲ್ ಇಂಟರ್‌ಶಿಪ್ ಮಾಡಿದ್ದಾರೆ.
ದೇಶ ಹಾಗೂ ವಿದೇಶಗಳ 40ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಕ್ಯಾಂಪಸ್ ಸಂದರ್ಶನ ಮಾಡಿವೆ. ಇದರಲ್ಲಿ ಇಂಜಿನಿಯರಿಂಗ್ ವಿಭಾಗದ 1,377, ಮ್ಯಾನೆಜ್‌ಮೆಂಟ್ ವಿಭಾಗದ 165, ಕಾಮರ್ಸ್ ವಿಭಾಗದ 102 ಹಾಗೂ ಫಾರ್ಮಸಿ ವಿಭಾಗದಿಂದ 96 ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ಹೆಚ್ಚಿನ ಉದ್ಯೋಗಾವಕಾಶ ಪಡೆದಿದ್ದಾರೆ ಎಂದರು.
ಸ್ಪೋರ್ಟ್ ಮ್ಯಾನೆಜ್‌ಮೆಂಟ್ ಕೋರ್ಸ್: ಪಿಇಎಸ್ ವಿಶ್ವವಿದ್ಯಾಲಯವು ರಾಜ್ಯದಲೇ ಪ್ರಥಮ ಬಾರಿಗೆ ಪ್ರಸಕ್ತ ಸಾಲಿನಲ್ಲಿ ಮೂರು ವರ್ಷಗಳ ಸ್ಪೋರ್ಟ್ ಮ್ಯಾನೇಜ್‌ಮೆಂಟ್ ವಿಷಯ ಕುರಿತ ಬಿಬಿಎ ಕೋರ್ಸ್ ಆರಂಭಿಸುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ವೃತ್ತಿಕಂಡುಕೊಳ್ಳುವ ಆಸಕ್ತರಿಗೆ ಈ ಕೋರ್ಸ್ ಸಹಾಯವಾಗಲಿದೆ. ಈ ನೂತನ ಕೋರ್ಸ್ ಕ್ರೀಡಾ ತರಬೇತಿ, ಕ್ರೀಡಾ ಮೆಡಿಸನ್, ಡಾಟಾ ಸೈನ್ಸ್, ಸೈಕಾಲಜಿ, ಸ್ಪೋರ್ಟ್ ಮಾರ್ಕೆಟಿಂಗ್, ಉದ್ಯಮ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿದೆ.
ಅಪಘಾತಕ್ಕೀಡಾಗಿದ್ದ ಬಿಗ್​ಬಾಸ್ ಮಾಜಿ ಸ್ಪರ್ಧಿ ನಿಧನ; ಪ್ರಸಿದ್ಧ ವಿಮರ್ಶಕನನ್ನು ಕಳೆದುಕೊಂಡ ಸಿನಿಮಾ ರಂಗ

ಇಂದು ಬೇಬಿ ಶಾಮಿಲಿ ಬರ್ತ್​ ಡೇ: ಕನ್ನಡಿಗರ ಮನ ಗೆದ್ದಿದ್ದ ಪುಟಾಣಿಗೆ ಈಗೆಷ್ಟು ವಯಸ್ಸು?

‘ಫ್ಯಾಮಿಲಿ ಮ್ಯಾನ್​ನಿಂದಾಗಿ ಸಾವಿರಾರು ಸಂಬಂಧಗಳು ಬರ್ತಿವೆ’ ವೆಬ್ ಸೀರಿಸ್​ನ ಅನುಭವ ಹಂಚಿಕೊಂಡ ಆಶ್ಲೇಷ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × one =
Remember me
