ಹಾವೇರಿ:ಚುನಾವಣಾ ಕಾವು ಏರುತ್ತಿದ್ದಂತೆಯೇ ರಾಜಕೀಯ ನಾಯಕರುಗಳು ನಾನಾ ರೀತಿಯ ಆಮಿಷ ತೋರಿಸಿ ಜನರ ಬೆಂಬಲ ಪಡೆಯಲು ಪ್ರಯತ್ನಿಸುತ್ತಾರೆ. ಹಾವೇರಿಯ ಬ್ಯಾಡಗಿ ಕ್ಷೇತ್ರದಲ್ಲೂ ಅದೇ ರೀತಿ ಆಮಿಷ ತೋರಿಸಲಾಗುತ್ತಿದ್ದು ಇಲ್ಲಿ ಮಾತ್ರ ಜನರನ್ನು ಸೆಳೆಯಲು ಬಳಸುತ್ತಿರುವುದು ಪೆಟ್ರೋಲ್​! ಈ ವಿಶೇಷ ಎಕ್ಸ್​ಕ್ಲೂಸಿವ್​ ಮಾಹಿತಿ ಲಭಿಸಿರುವುದು ದಿಗ್ವಿಜಯ ನ್ಯೂಸ್​ಗೆ.

ಹಾವೇರಿಯ ಬ್ಯಾಡಗಿ ಕ್ಷೇತ್ರದಲ್ಲಿ ಬಿಜೆಪಿ ಎಸ್​ಟಿ ಮೋರ್ಚಾ ಸಮಾವೇಶದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪೆಟ್ರೋಲ್ ಆಮಿಷ ಒಡ್ಡಲಾಗಿದೆ. ಕಾರ್ಯಕರ್ತರಿಗೆ ಮೊದಲು ಟೋಕನ್​ ನೀಡಿ ನಂತರ ಪೆಟ್ರೋಲ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸೇರುವ ಪ್ರತಿಯೊಂದು ವಾಹನಕ್ಕೂ 100 ರೂಪಾಯಿಯ ಪೆಟ್ರೋಲ್ ನೀಡುವ ಆಮಿಷವನ್ನು ಒಡ್ಡಲಾಗಿದೆ.
ಆದರೆ ಇದಕ್ಕೆ ಒಂದೇ ಕೆಲಸವನ್ನು ನೀವು ಮಾಡಿಕೊಡಬೇಕು. ನಿಮ್ಮ ಬೈಕ್​ಗೆ ಬಿಜೆಪಿ ಭಾವುಟ ಕಟ್ಟಿರಬೇಕು. ಅಂತಹ ದ್ವಿಚಕ್ರ ವಾಹನಗಳಿಗೆ ಮಾತ್ರ ಟೋಕನ್ ಕಾರ್ಯಕರ್ತರು ನೀಡುತ್ತಿದ್ದಾರೆ. ಹೀಗಾಗಿ ಬ್ಯಾಡಗಿ- ಮೊಟ್ಟೆಬೆನ್ನೂರು ರಸ್ತೆಯ ಹೊರವಲಯದ ಬಂಕ್ ಬಳಿ ದ್ವಿಚಕ್ರ ವಾಹನಗಳು ಸಾಲುಗಟ್ಟಿ ನಿಂತಿವೆ.
ಈ ಸುದ್ದಿಯನ್ನು ವಿಡಿಯೋ ರೂಪದಲ್ಲಿ ಇಲ್ಲಿ ನೋಡಿ:

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಬರುತ್ತಿದ್ದು ರೋಡ್ ಶೋ‌ ಹಿನ್ನೆಲೆಯಲ್ಲಿ ಜನರನ್ನು ಸೆಳೆಯಲು ಈ ತಂತ್ರವನ್ನು ಬಳಸಲಾಗಿದೆ. ಅಂದಹಾಗೆ ಪೆಟ್ರೋಲ್ ಆಮಿಷ ಒಡ್ಡಿ ಜನರನ್ನು ಸೇರಿಸುತ್ತಿರುವುದು ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿಯ ಬೆಂಬಲಿಗರು. ಈ ರೋಡ್​ ಶೋ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಪ್ರಮುಖ ಬೀದಿಯಲ್ಲಿ ನಡೆಯಲಿದೆ.
ತೃತೀಯ ಲಿಂಗಿಗಳ ಆರ್ಥಿಕ ಅಭಿವೃದ್ಧಿ: ದೇಶದಲ್ಲಿ ಮೊದಲ ಟ್ರಾನ್ಸ್ ಟೀ ಸ್ಟಾಲ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
