ಬೆಂಗಳೂರು:ಸತತವಾಗಿ ಏರುತ್ತಲೇ ಇರುವ ತೈಲ ಬೆಲೆ ಈಗಾಗಲೇ ಕರೊನಾ-ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿರುವ ಸಂತ್ರಸ್ತರನ್ನು ಮತ್ತಷ್ಟು ಸಂಕಟಕ್ಕೀಡು ಮಾಡಿದ್ದು, ಇದೀಗ ಪೆಟ್ರೋಲ್ ಬೆಲೆ ಶತಕ ಬಾರಿಸಿದ್ದು, ಸಾರ್ವಜನಿಕರು ಮತ್ತಷ್ಟು ಆತಂಕಕ್ಕೆ ಒಳಗಾಗುವಂತಾಗಿದೆ. ರಾಜ್ಯದ ಕೆಲವೆಡೆ ಇದು ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ.
ರಾಜ್ಯದ ಬಳ್ಳಾರಿ, ಉತ್ತರಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದು ಪೆಟ್ರೋಲ್​ ಬೆಲೆ ನೂರು ರೂಪಾಯಿಗೂ ಹೆಚ್ಚಾಗಿದೆ. ಉತ್ತರ ಕನ್ನಡದ ಶಿರಸಿಯಲ್ಲಿ ಪೆಟ್ರೋಲ್​ ದರ ಇಂದು ಒಂದು ಲೀಟರ್​​ಗೆ 100.22 ರೂ. ಇದ್ದು, ಬಳ್ಳಾರಿಯಲ್ಲಿ 100.08 ರೂ., ಚಿಕ್ಕಮಗಳೂರಿನಲ್ಲಿ 100.06 ರೂ. ಆಗಿದೆ. ಇನ್ನು ಬಳ್ಳಾರಿಯಲ್ಲಿ ಎಕ್ಸ್​ಪಿ ಪೆಟ್ರೋಲ್ ಬೆಲೆ 103.56 ರೂ. ಆಗಿದೆ.
ರಾಜ್ಯದ ಇತರ ಜಿಲ್ಲೆಗಳಲ್ಲೂ ಪೆಟ್ರೋಲ್ ಬೆಲೆ ನೂರರ ಗಡಿ ದಾಟುವ ಲಕ್ಷಣಗಳು ನಿಚ್ಚಳವಾಗಿವೆ. ಈಗಾಗಲೇ ಲಾಕ್​ಡೌನ್ ಹಿನ್ನೆಲೆಯಲ್ಲಿ ಜನರು ಒಂದೆಡೆ ದುಡಿಮೆ ಇಲ್ಲದೆ, ಇನ್ನೊಂದೆಡೆ ಅಗತ್ಯವಸ್ತುಗಳ ಬೆಲೆ ದುಬಾರಿ ಆಗಿರುವುದರಿಂದಾಗಿ ಭಾರಿ ಸಂಕಷ್ಟದಲ್ಲಿದ್ದಾರೆ. ಈ ನಡುವೆ ನೂರರ ಗಡಿ ದಾಟಿರುವ ಪೆಟ್ರೋಲ್ ಬೆಲೆ ಇನ್ನೂ ಹಲವಾರು ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆ ಇದ್ದು, ಜನರ ಮೇಲೆ ಬೆಲೆ ಏರಿಕೆಯ ನೂರೆಂಟು ಬರೆ ಬಿದ್ದರೂ ಅಚ್ಚರಿ ಇಲ್ಲ ಎಂಬಂತಾಗಿದೆ.
3 ದಿನಗಳ ಹಿಂದೆ ಅಪಹರಿಸಲಾಗಿದ್ದ ಬಾಲಕನ ಕೊಲೆ; ಸಂಬಂಧಿಯಿಂದಲೇ ಕೃತ್ಯ.. ಅಷ್ಟಕ್ಕೂ ಇಷ್ಟೆಲ್ಲ ಯಾಕೆ ಗೊತ್ತಾ?

ಕೊಲೆ ಆರೋಪದ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಪೊಲೀಸ್ ವಶಕ್ಕೆ!; ಕಾರು ಡಿಕ್ಕಿ ಹೊಡೆಸಿ ಕೊಲೆಗೈದ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − seven =
Remember me
