ಬೆಂಗಳೂರು: ರಾಜ್ಯ ರಾಜಧಾನಿಯ ಹಲವಾರು ಪೆಟ್ರೋಲ್ ಬಂಕ್‌ಗಳಲ್ಲಿ ಈಗಾಗಲೇ ‘ನೋ ಮಾಸ್ಕ್ ನೋ ಪೆಟ್ರೋಲ್’ ಎಂಬ ಫಲಕವನ್ನು ನೇತು ಹಾಕಿದ್ದಾರೆ ಅವುಗಳ ಮಾಲೀಕರು.
ಅತಿ ಹೆಚ್ಚು ಕರೊನಾ ಸೋಂಕಿತರು ಪತ್ತೆಯಾಗಿರುವ ಬೆಂಗಳೂರಿನ 39 ವಾರ್ಡ್‌ಗಳನ್ನು ‘ರೆಡ್ ಅಲರ್ಟ್ ಏರಿಯಾ’ (ಹಾಟ್‌ಸ್ಪಾಟ್) ಎಂದು ಬಿಬಿಎಂಪಿ ಗುರುತಿಸಿದ್ದು ಅಲ್ಲಿ ಈ ಬೋರ್ಡ್‌ಗಳು ಕಂಡುಬರುತ್ತಿವೆ.ಈ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ ಬಂದರೆ ಮಾತ್ರ ಗ್ರಾಹಕರ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕಲು ಬಂಕ್ ಮಾಲೀಕರು ನಿರ್ಧರಿಸಿದ್ದಾರೆ.
ಅಜಾದ್‌ನಗರ ವಾರ್ಡ್, ರಾಧಾಕೃಷ್ಣ ಟೆಂಪಲ್ ವಾರ್ಡ್, ಜೆ.ಪಿ. ನಗರ, ಸಿಂಗಸಂದ್ರ, ಅರಮನೆನಗರ, ಶಾಕಾಂಬರಿನಗರ, ಹೊರಮಾವು, ವಸಂತನಗರ ಮತ್ತಿತರ ರೆಡ್ ಅಲರ್ಟ್ ವಾರ್ಡ್‌ಗಳಲ್ಲಿ 58 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಹೀಗಾಗಿ ಸುತ್ತಲಿನ ಪೆಟ್ರೋಲ್ ಬಂಕ್‌ಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಎಂದು ಪೆಟ್ರೋಲ್ ಡೀಲರ್ಸ್‌ ಅಸೋಸಿಯೇಷನ್ ಸೂಚನೆ ನೀಡಿದೆ.
‘ಮಾಸ್ಕ್ ಧರಿಸಿದರೆ ಮಾತ್ರ ಪೆಟ್ರೋಲ್’ ಎಂಬ ಫಲಕವನ್ನು ರೆಡ್ ಅಲರ್ಟ್ ಏರಿಯಾಗಳಲ್ಲಿನ ಬಂಕ್‌ಗಳ ಮೇಲೆ ಅಂಟಿಸಲಾಗಿದೆ. ಜತೆಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬಂಕ್‌ನ ಸಿಬ್ಬಂದಿ ಗ್ರಾಹಕರಿಗೆ ಅರಿವು ಮೂಡಿಸುತ್ತಿದ್ದಾರೆ.
FACT CHECK |ನಿದ್ರಿಸುತ್ತಿದ್ದ ಶವಾಗಾರದ ಸಿಬ್ಬಂದಿ ಮೃತಪಟ್ಟಿದ್ದಾನೆ ಎಂದು ತಿಳಿದು ಜೀವಂತ ಸಂಸ್ಕಾರ ಮಾಡಿದ ಘಟನೆ ನಿಜವೇ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
