ಹಾಸನ:ಪಿಜಿ (ಪೇಯಿಂಗ್​ ಗೆಸ್ಟ್) ಬಾಡಿಗೆ ನೀಡಿಲ್ಲ ಎಂದು ವಿದ್ಯಾರ್ಥಿನಿಯರಿಬ್ಬರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ ಇಲ್ಲಿನ ಕುವೆಂಪುನಗರ ಬಡಾವಣೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ನಗರದ ಎನ್.ಡಿ.ಆರ್.ಕೆ. ಕಾಲೇಜಿನಲ್ಲಿ ಬಿ ಫಾರ್ಮಸಿ ಓದುತ್ತಿದ್ದ ಮೈಸೂರು ಮೂಲದ ಯುವತಿಯರಿಬ್ಬರು ಕುವೆಂಪುನಗರ ಬಡಾವಣೆಯ ಪಿಜಿಯೊಂದರಲ್ಲಿ ಇದ್ದರು. ಯುಗಾದಿ ಹಬ್ಬಕ್ಕೆಂದು ಮೈಸೂರಿನ ಮನೆಗೆ ತೆರಳಿದಾಗ ಕರೊನಾ ಲಾಕ್​ಡೌನ್​ ಘೋಷಣೆಯಾಗಿತ್ತು. ಹಾಗಾಗಿ ಅವರು ಎರಡು ತಿಂಗಳಿನಿಂದ ಪಿಜಿಗೆ ಬಂದಿರಲಿಲ್ಲ. ಮೈಸೂರಿನ್ಲಲೇ ಉಳಿದುಕೊಂಡಿದ್ದರು.
ಇದನ್ನೂ ಓದಿರಿಕಲ್ಪತರು ಮಾವು ಮೇಳಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ
ಪಿಜಿಯಲ್ಲಿಟ್ಟಿದ್ದ ಬಟ್ಟೆ, ಪುಸ್ತಕ ತೆಗೆದುಕೊಂಡು ಹೋಗಲು ನಿರ್ಧರಿಸಿದ ಯುವತಿಯರಿಬ್ಬರು ಮೈಸೂರಿನಿಂದ ಟ್ಯಾಕ್ಸಿಯಲ್ಲಿ ಗುರುವಾರ ಬೆಳಗ್ಗೆ ಹಾಸನಕ್ಕೆ ಬಂದಿದ್ದಾರೆ. ಆದರೆ, ಲಾಕ್​ಡೌನ್​ ಅವಧಿಯ ಎರಡು ತಿಂಗಳ ಬಾಡಿಗೆ ಹಣ ನೀಡುವಂತೆ ತಾಕೀತು ಮಾಡಿದ ಪಿಜಿ ಮಾಲೀಕ, ಹಣ ಕೊಡದೆ ಹೊರ ಹೋಗವಂತಿಲ್ಲ ಎಂದು ಪಿಜಿಗೆ ಬೀಗ ಹಾಕಿದ್ದ.
ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೂ ತಿಂಡಿಯಿಲ್ಲದೆ ಯುವತಿಯರು ಪಿಜಿಯಲ್ಲೇ ಲಾಕ್ ಆಗಿರುವ ವಿಷಯ ತಿಳಿದ ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಯುವತಿಯರನ್ನು ಪಿಜಿಯಿಂದ ಬಿಡುಗಡೆ ಮಾಡಿಸಿ ಕರೆದೊಯ್ದರು.
ಇದನ್ನೂ ಓದಿರಿ14ರ ಬಾಲೆಗೆ ಲೈಂಗಿಕ ಕಿರುಕುಳ ನೀಡಿದ… ಆತ್ಮಹತ್ಯೆ ಮಾಡಿಕೊಂಡಾಕೆಯ ಶವವನ್ನು ಸಂಭೋಗಿಸಲು ಯತ್ನಿಸಿದ..!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + four =
Remember me
