ಬೆಂಗಳೂರುಉನ್ನತ ಶಿಕ್ಷಣ ಇಲಾಖೆಯು 2023-24ನೇ ಸಾಲಿನ ಸ್ನಾತಕೋತ್ತರ ಪದವಿಗಳಾದ ಎಂಬಿಎ, ಎಂಸಿಎ, ಎಂಇ ಮತ್ತು ಎಂಟೆಕ್‌ಗಳ ಶುಲ್ಕ ನಿಗದಿ ಮಾಡಿದ್ದು, ಖಾಸಗಿ ಕಾಲೇಜುಗಳ ಶುಲ್ಕದಲ್ಲಿ 10 ಸಾವಿರ ರೂ.ಗಳನ್ನು ಏರಿಕೆ ಮಾಡಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಶುಲ್ಕದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಎ, ಎಂಸಿಎ, ಎಂಇ ಮತ್ತು ಎಂಟೆಕ್‌ಗೆ 20 ಸಾವಿರ ರೂಗಳ ಬೋಧನ ಶುಲ್ಕ ನಿಗದಿ ಮಾಡಿದೆ. ಇದರ ಜೊತೆಗೆ 10,810 ವಿಶ್ವವಿದ್ಯಾಲಯ ಶುಲ್ಕ ಭರಿಸಬೇಕು. ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿ ಎಂಬಿಎ ಮತ್ತು ಎಂಸಿಎಗೆ ತಲಾ 57,750 ಸಾವಿರ ರೂ ಮತ್ತು ಎಂಇ, ಎಂಟೆಕ್‌ಗೆ 69,300 ಸಾವಿರ ರೂ ನಿಗದಿಮಾಡಿದೆ. 2021-22ನೇ ಸಾಲಿನಲ್ಲಿ 60 ಸಾವಿರ ಶುಲ್ಕವಿತ್ತು. ಈಗ 69,300ಕ್ಕೆ ಹೆಚ್ಚಿಸಲಾಗಿದೆ.
ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿನ ಶೇ.50 ಎಂಬಿಎ ಮತ್ತು ಎಂಸಿಎ ಸೀಟುಗಳನ್ನು ಪಿಜಿಸಿಇಟಿ ಮೂಲಕ ಹಾಗೂ ಉಳಿದ ಶೇ. 50 ಸೀಟುಗಳನ್ನು ಆಡಳಿತ ಮಂಡಳಿಗಳು ನಡೆಸುವ ಪ್ರವೇಶ ಪರೀಕ್ಷೆ ರ‌್ಯಾಂಕ್ ಆಧಾರದಲ್ಲಿ ತುಂಬಲಿವೆ.
ವಿದ್ಯಾರ್ಥಿಗಳು ಬೋಧನಾ ಶುಲ್ಕದ ಜೊತೆಗೆ ವಿವಿಯ ಶುಲ್ಕವನ್ನು ಸಹ ಭರಿಸಬೇಕು. ಒಂದು ವೇಳೆ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡಿದರೆ ಪ್ರವೇಶ ಮೇಲ್ವಿಚಾರಣಾ ಸಮಿತಿಗೆ ದೂರು ನೀಡಬಹುದು. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮಸಂಸ್ಥೆಗೆ ಆಡಳಿತ ಮಂಡಳಿಯ ಕೋಟಾದಿಂದ ಭರ್ತಿ ಮಾಡಿಕೊಳ್ಳುವ ಸೀಟುಗಳನ್ನು ನ್ಯಾಯಯುತ ಮತ್ತು ಪಾರದರ್ಶಕವಾಗಿ ತುಂಬಿಕೊಳ್ಳಬೇಕು ಎಂದು ಇಲಾಖೆ ಹೇಳಿದೆ.
ಪಿಜಿಸಿಇಟಿ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಖಾಸಗಿ ವಿವಿಗಳಿಗೆ ದಾಖಲಾಗುತ್ತಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಪಿಜಿಸಿಇಟಿ ಪರೀಕ್ಷೆಯನ್ನು ಸುಮಾರು 70 ಸಾವಿರ ವಿದ್ಯಾರ್ಥಿಗಳು ಬರೆದು ಕೌನ್ಸೆಲಿಂಗ್‌ಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೆ ಪರೀಕ್ಷಾ ಪ್ರಾಧಿಕಾರಕ್ಕೆ ಸೀಟ್ ಮ್ಯಾಟ್ರಿಕ್ಸ್ ಮಾಹಿತಿ ಸಿಕ್ಕಿದ್ದು ಇದೀಗ ಶುಲ್ಕ ಸಂರಚನೆಯ ಸೂಚನೆಯೂ ಕೈಸೇರಿದೆ. ಸದ್ಯದಲ್ಲೇ ಕೆಇಎ ಕೌನ್ಸೆಲಿಂಗ್ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
