ಬೆಂಗಳೂರುರಾಜ್ಯದ ವಿಶ್ವವಿದ್ಯಾಲಯಗಳಲ್ಲಿರುವ ಎಂಬಿಎ, ಎಂಸಿಎ, ಎಂಟೆಕ್, ಎಂಇ ಮತ್ತು ಎಂಆರ್ಕ್ ಕೋರ್ಸ್‌ಗಳಿಗೆ ನಡೆಯಲಿರುವ ಪಿಜಿಸಿಇಟಿ-2024-25ರ ಸಿಲೆಬಸ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.
ಯುಜಿಸಿಇಟಿಯಲ್ಲಿ ಸಿಲೇಬಸ್ ಹೊರತಾದ ಪ್ರಶ್ನೆಗಳನ್ನು ಕೇಳಿ ಸೃಷ್ಟಿಯಾಗಿದ್ದ ಗೊಂದಲಗಳಿಂದ ಎಚ್ಚೆತ್ತುಕೊಂಡಿರುವ ಕೆಇಎ ತನ್ನ ವೆಬ್‌ಸೈಟ್‌ನಲ್ಲೇ ಪಿಜಿಸಿಇಟಿ ಪಠ್ಯವನ್ನು ಪ್ರಕಟಿಸಿದೆ.ಜೂನ್ 29 ಮತ್ತು 30ರಂದು ಪಿಜಿಸಿಇಟಿ ನಡೆಯಲಿದೆ ಎಂದು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.ವಿಶ್ವೇಶ್ವರಯ್ಯ ತಾಂತ್ರಿಕ ವಿವಿ (ವಿಟಿಯು)ಯ ಜತೆ ಸಮಾಲೋಚನೆ ನಡೆಸಿ ಸಿಲೆಬಸ್ ಸಿದ್ಧಪಡಿಸಲಾಗಿದೆ. ವಿವಿಗಳು ಹಾಗು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿಯನ್ನು ಗಮನಿಸಿ ಸಿಲೆಬಸ್ ಮತ್ತು ಪ್ರಶ್ನಾ ಪತ್ರಿಕೆ ಮಾದರಿಯನ್ನು ರಚಿಸಲಾಗಿದೆ. ಕೆಇಎಯ ಪ್ರಕಟಿಸಿರುವ ಪರಿಷ್ಕೃತ ಸಿಲೆಬಸ್‌ನ ಆಧಾರದಲ್ಲಿ ಪಿಜಿ ಸಿಇಟಿ ನಡೆಸಲಾಗುತ್ತದೆ ಎಂದು ತಿಳಿಸಿದೆ.
ಒಂದು ಅವಧಿಯಲ್ಲಿ 100 ಅಂಕಗಳಿಗೆ 120 ನಿಮಿಷದಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿ ಪ್ರಶ್ನೆ ಪತ್ರಿಕೆ 100 ಬಹು ಆಯ್ಕೆಯ ಪ್ರಶ್ನೆ ಹೊಂದಿರಲಿದ್ದು ನೆಗೆಟಿವ್ ಅಂಕಗಳಿರುವುದಿಲ್ಲ.ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಕೆಮಿಕಲ್ ಇಂಜಿನಿಯರಿಂಗ್, ಎನ್ವಿರಾನ್‌ಮೆಂಟಲ್ ಇಂಜಿನಿಯರಿಂಗ್, ಟೆಕ್ಸ್‌ಟೈಲ್ ಟೆಕ್ನಾಲಜಿ, ಪಾಲಿಮರ್ ಸೈನ್ಸ್, ಆರ್ಕಿಟೆಕ್ಚರ್, ಬಯೋಟೆಕ್ನಾಲಜಿ, ಇಲೆಕ್ಟ್ರೀಕಲ್ ಸೈನ್ಸ್, ಮೆಕ್ಯಾನಿಕಲ್ ಸೈನ್ಸ್ , ಎಂಬಿಎ ಮತ್ತು ಎಂಸಿಎಯ ಪಠ್ಯಕ್ರಮವನ್ನು ಪ್ರಕಟಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + eleven =
Remember me
