ಬೆಂಗಳೂರು: ಅಂಚೆ ಇಲಾಖೆಯು ವಿದ್ಯಾರ್ಥಿಗಳಲ್ಲಿ ಅಂಚೆಚೀಟಿಗಳ ಸಂಗ್ರಹಣೆಯ ಬಗ್ಗೆ ಆಸಕ್ತಿಯನ್ನು ಬೆಳೆಸಲು 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ‘ದೀನ್ ದಯಾಳ್ ಸ್ಪರ್ಶ್ ಯೋಜನೆ’ ಹೆಸರಿನಲ್ಲಿ ಹೊಸದಾಗಿ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಾರಂಭಿಸಿದೆ.
ಅಂಚೆಚೀಟಿ ಸಂಗ್ರಹಣೆಯನ್ನು ಹವ್ಯಾಸವಾಗಿ ಮುಂದುವರಿಸಲು ಬಯಸುವ 6-9ನೇ ತರಗತಿಯ ವಿದ್ಯಾರ್ಥಿಗಳಿಗೆ ಕರ್ನಾಟಕ ವೃತ್ತ ಮಟ್ಟದಲ್ಲಿ ಅಂಚೆಚೀಟಿಗಳ ರಸಪ್ರಶ್ನೆ ಮತ್ತು ಅಂಚೆಚೀಟಿ ಸಂಗ್ರಹ ಯೋಜನೆ ನಡೆಸಲಿದೆ. ಈ ಸ್ಪರ್ಧೆಯ ಆಧಾರದ ಮೇಲೆ 2023-2024ನೇ ಸಾಲಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ವಿದ್ಯಾರ್ಥಿವೇತನವು ವಾರ್ಷಿಕ 6,000 ರೂ. ಮೊತ್ತ ಒಳಗೊಂಡಿದ್ದು, ಪ್ರತಿ ತಿಂಗಳು 500 ರೂ. ಹಣವನ್ನು ಪಾಲಕರು ಹಾಗೂ ವಿದ್ಯಾರ್ಥಿಗಳ ಜಂಟಿಖಾತೆಗೆ ಜಮೆ ಮಾಡಲಾಗುತ್ತದೆ.
ಈ ಯೋಜನೆಯ ಲಾಭ ಪಡೆಯಲು ಕೆಲವೊಂದು ಷರತ್ತುಗಳನ್ನು ವಿದ್ಯಾರ್ಥಿಗಳು ಪೂರೈಸಬೇಕಿದೆ. ಅಭ್ಯರ್ಥಿಯು ಕರ್ನಾಟಕದ ಮಾನ್ಯತೆ ಪಡೆದ ಶಾಲೆಯ ವಿದ್ಯಾರ್ಥಿಯಾಗಿರಬೇಕು. ಆ ಶಾಲೆಯಲ್ಲಿ ಅಂಚೆಚೀಟಿ ಸಂಗ್ರಹ ಕ್ಲಬ್ ಇದ್ದು, ಅಭ್ಯರ್ಥಿಯು ಕ್ಲಬ್‌ನ ಸದಸ್ಯನಾಗಿರಬೇಕು. ಶಾಲೆಯಲ್ಲಿ ಕ್ಲಬ್ ಇಲ್ಲದಿದಲ್ಲಿ ತನ್ನದೇಯಾದ ಅಂಚೆಚೀಟಿಗಳ ಸಂಗ್ರಹ ಖಾತೆಯನ್ನು ಹೊಂದಿರುವ ವಿದ್ಯಾರ್ಥಿಯನ್ನು ಪರಿಗಣಿಸಲಾಗುತ್ತದೆ. ಸ್ಕಾಲರ್​​​ಶಿಪ್ ಆ​ಯ್ಕೆ ಸಮಯದಲ್ಲಿ ಅಭ್ಯರ್ಥಿಯು 2023ರ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ ಶೇ.60 ಅಂಕ ಅಥವಾ ತತ್ಸಮಾನವಾದ ಗ್ರೇಡ್ ಗಳಿಸಿರಬೇಕು.
ಆಯ್ಕೆ ಪ್ರಕ್ರಿಯೆ ಹೇಗೆ?:
ಈ ಯೋಜನೆಗೆ ಆಯ್ಕೆ ಪ್ರಕ್ರಿಯೆ 2 ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಅಂಚೆಚೀಟಿಗಳ ಕುರಿತ ಲಿಖಿತ ರಸಪ್ರಶ್ನೆ ಹಾಗೂ 2ನೇ ಹಂತದಲ್ಲಿ ಅಂಚೆಚೀಟಿಗಳ ಸಂಗ್ರಹ ಯೋಜನೆ ಕುರಿತದ್ದಾಗಿರುತ್ತದೆ. ಪ್ರಾದೇಶಿಕ ಮಟ್ಟದಲ್ಲಿ ಲಿಖಿತ ರಸಪ್ರಶ್ನೆ ಸೆ.30ರಂದು ನಡೆಯಲಿದ್ದು, ಅರ್ಜಿ ಸಲ್ಲಿಸಲು ಸೆ.15 ಕೊನೆಯ ದಿನವಾಗಿರುತ್ತದೆ. ಎರಡನೇ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳು 4ರಿಂದ 5 ಪುಟ ಮೀರದ ಅಂಚೆಚೀಟಿ ಸಂಗ್ರಹ ಪ್ರಾಜೆಕ್ಟ್‌ಅನ್ನು ನಿಗದಿತ 15 ದಿನಗಳೊಳಗೆ ಸಲ್ಲಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಯನ್ನು ಕರ್ನಾಟಕ ಪೋಸ್ಟಲ್ ಸರ್ಕಲ್ ವೆಬ್‌ಸೈಟ್www.karnatakapost.gov.inನಿಂದ ಪಡೆಯಬಹುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪಠ್ಯಕ್ರಮ ಏನಿರಲಿದೆ?:
ಅಂಚೆಚೀಟಿ ಸಂಗ್ರಹದ ಲಿಖಿತ ರಸಪ್ರಶ್ನೆಯು ಬಹು ಆಯ್ಕೆಯ ಪ್ರಶ್ನೆ ಮಾದರಿಯದ್ದಾಗಿರುತ್ತದೆ. ಪ್ರಸ್ತುತ ವಿದ್ಯಮಾನ, ಇತಿಹಾಸ, ವಿಜ್ಞಾನ, ಕ್ರೀಡೆ, ಸಂಸ್ಕೃತಿ, ಭೂಗೋಳ ಮತ್ತು ಅಂಚೆಚೀಟಿಗಳ ಸಂಗ್ರಹದ ವಿಷಯಗಳಿಂದ 50 ಪ್ರಶ್ನೆಗಳು ಒಳಗೊಂಡಿರುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + nineteen =
Remember me
