ಕಳೆದ ವರ್ಷ ಕರೊನಾದಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಮಾಡಿ ಎಲ್ಲರನ್ನೂ ಪಾಸ್ ಮಾಡಲಾಗಿದೆ. ಅಲ್ಲದೆ, ಈ ವರ್ಷ ಕರೊನಾದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಧಿ ಕಡಿಮೆ ಸಿಕ್ಕಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಪಾಸ್ ಆಗುವಂತೆ ಪ್ರಶ್ನೆಪತ್ರಿಕೆಯನ್ನು ರೂಪಿಸಲಾಗಿದೆ. ಆಯ್ಕೆ ಮಾದರಿಯ ಪ್ರಶ್ನೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಭಯವಿಲ್ಲದೆ ಪರೀಕ್ಷೆ ಬರೆಯಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಂ. ಗಣಾಚಾರಿ ಧೈರ್ಯ ತುಂಬಿದರು. ವಿದ್ಯಾರ್ಥಿಗಳು ತಮಗೆ ಸುಲಭ ಎನಿಸಿದ ಪ್ರಶ್ನೆಗಳನ್ನು ಮೊದಲಿಗೆ ಆಯ್ಕೆ ಮಾಡಿಕೊಂಡು ಬರೆಯುವುದು ಉತ್ತಮ. ಒಂದು ಭಾಗದಲ್ಲಿ ತಿಳಿಸಿದ್ದಕ್ಕಿಂತ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಿದರೂ, ಮೊದಲು ಬರೆದ ಪ್ರಶ್ನೆಗಳನ್ನು ಅಥವಾ ಹೆಚ್ಚಿನ ಅಂಕ ಗಳಿಸಿರುವ ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನಕ್ಕೆ ಪರಿಗಣಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಬೇಡ. ನೀಡಿರುವ ಎಲ್ಲ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಬರೆಯುವುದಕ್ಕೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಆಯ್ಕೆ ಅವಕಾಶ ಹೆಚ್ಚಳ:ಪ್ರತಿವರ್ಷ 1 ಅಂಕದ ಪ್ರಶ್ನೆಗಳು ಕಡಿಮೆ ಇರುತ್ತಿದ್ದವು. ಇವುಗಳನ್ನು ಈ ಬಾರಿ 10 ಅಂಕಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೆ, ಮೊದಲು ಪ್ರಶ್ನೆಗಳಿಗೆ ಹೆಚ್ಚಿನ ಆಯ್ಕೆ ಸಂಖ್ಯೆಯನ್ನು ಕಡಿಮೆ ನೀಡಲಾಗುತ್ತಿತ್ತು. ಉದಾಹರಣೆಗೆ 1 ಅಂಕದ 10 ಪ್ರಶ್ನೆಗಳಿಗೆ ಕೇವಲ 10 ಪ್ರಶ್ನೆಗಳಿರುತ್ತಿದ್ದವು. ಈ ಬಾರಿ 15 ಪ್ರಶ್ನೆಗಳಿರುತ್ತವೆ. ಮೊದಲು ವಿಜ್ಞಾನ ವಿಷಯದಲ್ಲಿ ಒಂದು ಪ್ರಶ್ನೆಪತ್ರಿಕೆಯಲ್ಲಿ 105 ಪ್ರಶ್ನೆಗಳು ಇರುತ್ತಿದ್ದವು. ಈ ಬಾರಿಯಿಂದ 140 ಪ್ರಶ್ನೆಗಳಿರಲಿವೆ. ಆದರೆ, ವಿದ್ಯಾರ್ಥಿಗಳು 70 ಅಂಕಗಳ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕು.
ಪಠ್ಯಕ್ರಮ ಕಡಿತ:ದ್ವಿತೀಯ ಪಿಯು ಪಠ್ಯಕ್ರಮ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅನ್ವಯಿಸುವುದರಿಂದ ಈ ಬಾರಿ ಭಾಷಾ ವಿಷಯದಲ್ಲಿ ಶೇ.70 ಭಾಗವನ್ನು ಮಾತ್ರ ಪರೀಕ್ಷೆಗೆ ಪರಿಗಣಿಸಲಾಗಿದೆ. ಆದರೆ, ವಿಷಯದಲ್ಲಿ ಶೇ.100 ಪಠ್ಯಕ್ರಮ ಯಥಾರೀತಿ ಮುಂದುವರಿದಿದೆ.
ವೆಬ್​ಸೈಟಿನಲ್ಲಿ ಮಾದರಿ ಪ್ರಶ್ನೆಪತ್ರಿಕೆ:ಪದವಿ ಪೂರ್ವ ಶಿಕ್ಷಣ ಇಲಾಖೆಯು ತನ್ನ ವೆಬ್​ಸೈಟ್https://pue.karnataka.gov.in/new-page/II+PU+MODEL+QUESTION+PAPER+2021-22/knನಲ್ಲಿ ಎಲ್ಲ ವಿಷಯದ ಪ್ರಶ್ನೆಪತ್ರಿಕೆಯನ್ನು ಅಪ್​ಲೋಡ್ ಮಾಡಿದ್ದು, ಪ್ರಶ್ನೆಗಳನ್ನು ಅದೇ ಮಾದರಿಯಲ್ಲಿ ಕೇಳಲಾಗುತ್ತದೆ.
ವಿದ್ಯಾರ್ಥಿಸ್ನೇಹಿ ಪರೀಕ್ಷಾ ಕೇಂದ್ರ:ವಿದ್ಯಾರ್ಥಿಗಳು ಬೇರೆ ಕಾಲೇಜುಗಳಲ್ಲಿ ಪರೀಕ್ಷೆ ಬರೆಯಬೇಕಿರುವುದರಿಂದ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೆ ಕೊಂಚ ಆತಂಕ ಇದ್ದೇ ಇರುತ್ತದೆ. ಹೀಗಾಗಿ ಉಪನ್ಯಾಸಕರು, ಮೇಲ್ವಿಚಾರಕರು ಅವರಲ್ಲಿ ಉತ್ಸಾಹ ಮೂಡಿಸುವ ಕೆಲಸ ಮಾಡಲಿದ್ದಾರೆ. ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಸ್ನೇಹಿ ಆಗಿರಲಿವೆ ಎಂದು ಗಣಾಚಾರಿ ಭರವಸೆ ನೀಡಿದರು. ಇದಲ್ಲದೆ, ಕೇಂದ್ರಗಳಿಗೆ ಸಿಸಿ ಕ್ಯಾಮರಾ ಅವಳಡಿಸಲಾಗಿದೆ. ಮೇಲ್ವಿಚಾರಕರಿಗೆ ವಿದ್ಯಾರ್ಥಿಗಳಿಗೆ ಎದುರಾಗುವ ಗೊಂದಲಗಳಿಗೆ ಪರಿಹಾರ ನೀಡುವಂತೆ ಸೂಚಿಸಲಾಗಿದೆ ಎಂದರು.
ಅಧಿಕ ಫಲಿತಾಂಶದ ನಿರೀಕ್ಷೆ:ಕಳೆದ ವರ್ಷ ಕರೊನಾ ಕಾರಣಕ್ಕೆ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಈ ಬಾರಿ ಪ್ರಶ್ನೆಪತ್ರಿಕೆ ಸುಲಭವಾಗಿರುವುದರಿಂದ ಹೆಚ್ಚಿನ ಫಲಿತಾಂಶ ನಿರೀಕ್ಷೆಯಲ್ಲಿ ಪಿಯು ಇಲಾಖೆ ಇದೆ.
ವಾಟ್ಸ್ಆ್ಯಪ್​ ಭಾಷೆ ಬೇಡ:ಆಂಗ್ಲ ಭಾಷಾ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಪದಗಳ ಮೇಲೆ ಹೆಚ್ಚು ನಿಗಾವಹಿಸಬೇಕು. ವಾಟ್ಸ್​ಆ್ಯಪ್​ ಚಾಟ್​ನ ಭಾಷೆಯನ್ನು ಬಳಕೆ ಮಾಡಿದರೆ, ಅಂಕಗಳನ್ನು ಕಡಿತಗೊಳಿಸಲಾಗುತ್ತದೆ ಅನೇಕರಿಗೆ ಪದಗಳಲ್ಲಿ ದೊಡ್ಡಕ್ಷರ ಬರೆಯಬೇಕು, ಚಿಕ್ಕ ಅಕ್ಷರ ಬಳಕೆ ಪರಿಜ್ಞಾನ ಇರುವುದಿಲ್ಲ ಎಂದು ಆಂಗ್ಲ ವಿಷಯತಜ್ಞ ಸದಾನಂದ ಹೇಳಿದರು.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 7 =
Remember me
