ಬೆಂಗಳೂರು :ಶಾಸಕ ಅರವಿಂದ್​ ಬೆಲ್ಲದ್ ಫೋನ್ ಟ್ಯಾಪಿಂಗ್(ಕದ್ದಾಲಿಕೆ) ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಶಾಸಕರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಯುವರಾಜ್ ಸ್ವಾಮಿ ಕರೆ ಮಾಡಿಲ್ಲ ಎಂಬುದು ತನಿಖೆ ವೇಳೆ ಖಚಿತವಾಗಿದೆ. ಅಷ್ಟೇ ಅಲ್ಲ, ಶಾಸಕರಿಗೆ ಪರಿಚಯವಿರುವವರೇ ಕರೆ ಮಾಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ವಿಭಾಗದ ಅಧಿಕಾರಿಗಳು ನಿನ್ನೆ ಶಾಸಕ ಅರವಿಂದ್ ಬೆಲ್ಲದ್​​ರನ್ನು ಮತ್ತೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕರೆ ಮಾಡಲಾಗಿದ್ದ ನಂಬರ್ ಹಾಗೂ ಹೆಚ್ಚುವರಿ ಮಾಹಿತಿ ಪಡೆದ ಪೊಲೀಸರು, ಈ ಮಾಹಿತಿ ಆಧರಿಸಿ, ಹೈದ್ರಾಬಾದ್​ ಮೂಲದ ಅರ್ಚಕ ಜಿತೇಂದ್ರನಾಥ್​ ಎಂಬುವರ ವಿಚಾರಣೆ ನಡೆಸಿದ್ದಾರೆ. ಈ ಅರ್ಚಕರಿಗೆ ಕರೆ ಮಾಡಿ, ಫೋನ್ ಟ್ಯಾಪಿಂಗ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆತ, ಶಾಸಕ ಬೆಲ್ಲದ್​​ಗೆ ಪರಿಚಯಸ್ಥ ಅನ್ನೋದು ದೃಢವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಜೈಕೋವಿ-ಡಿ : ಮತ್ತೊಂದು ಕರೊನಾ ಲಸಿಕೆಯ ತುರ್ತು ಬಳಕೆಗೆ ಅರ್ಜಿ
ಶಾಸಕರು ನೀಡಿದ ನಂಬರ್ ಆಧರಿಸಿ ತನಿಖೆ ನಡೆಸುತ್ತಿರುವ ಡಿಸಿಪಿ ಅನುಚೇತ್ ನೇತೃತ್ವದ ಪೊಲೀಸ್​ ತಂಡಕ್ಕೆ ಈ ಕರೆಗೂ ಜೈಲಿನಲ್ಲಿರುವ ಯುವರಾಜ್​​ಗೂ ಯಾವುದೇ ಸಂಬಂಧ ಇಲ್ಲ ಎಂಬುದು ಆತನ ವಿಚಾರಣೆಯಿಂದ ಖಚಿತವಾಗಿದೆ. ಹೈದ್ರಾಬಾದ್ ಮೂಲದ ವ್ಯಕ್ತಿಯಿಂದ ಕರೆ ಬಂದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಪ್ರಕರಣದ ತನಿಖೆಯನ್ನು ಮುಗಿಸಿರುವ ಅಧಿಕಾರಿಗಳು, ಇದೇ ಆಧಾರದ ಮೇಲೆ ಪೊಲೀಸ್​ ಆಯುಕ್ತರಿಗೆ ವರದಿ ನೀಡಲಿದ್ದಾರೆ ಎನ್ನಲಾಗಿದೆ.
ವೃಷಭಾವತಿ ಕಣಿವೆ ಮಾಲಿನ್ಯ ತಪಾಸಣೆಗೆ 3 ತುರ್ತು ಸ್ಪಂದನ ವಾಹನ

ಗುಲ್ಶನ್​ ಕುಮಾರ್​ ಹತ್ಯೆ: 16 ಗುಂಡಿಟ್ಟು ಕೊಂದಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆ, ಓರ್ವ ಆರೋಪಿಗೆ ಖುಲಾಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + twenty =
Remember me
