ಬೆಂಗಳೂರು:ಆಕೆ 19ರ ಹರೆಯದ ಯುವತಿ. 2 ವರ್ಷದ ಹಿಂದೆ ಆಕೆಯ ಬದುಕಲ್ಲಿ ಗೆಳೆಯನಂತೆ ಎಂಟ್ರಿಕೊಟ್ಟ ದುಷ್ಕರ್ಮಿಯೊಬ್ಬ ಬಿರುಗಾಳಿಯನ್ನೇ ಎಬ್ಬಿಸಿದ್ದಾನೆ. ಸ್ನೇಹಿತನ ಸೋಗಿನಲ್ಲಿ ಸಲುಗೆ ಬೆಳೆಸಿಕೊಂಡವ ಆಕೆಯ ನಗ್ನ ಚಿತ್ರಗಳನ್ನು ಇಟ್ಟುಕೊಂಡು ಚಿನ್ನಾಭರಣ ದೋಚಿದ್ದಲ್ಲದೆ, ತನ್ನ ಸ್ನೇಹಿತನ ಮೂಲಕವೂ ಚಿತ್ರಹಿಂಸೆ ಕೊಡಿಸಿದ್ದಾನೆ.
ಕೆ.ಆರ್​.ಪುರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಆರೋಪಿ ಬ್ರಿಜ್​ ಭೂಷಣ್​ ಪರಿಚಯವಾಗಿತ್ತು. ಸಲುಗೆ ಹೆಚ್ಚಾದಂತೆ ಇಬ್ಬರೂ ಸ್ನೇಹಿತರಾಗಿದ್ದರು. 2018ರಲ್ಲಿ ಸ್ನೇಹದ ಸೋಗಿನಲ್ಲಿ ಆಗಾಗ ಯುವತಿ ಮನೆಗೆ ಭೂಷಣ್​ ಬಂದು ಹೋಗುತ್ತಿದ್ದ. ನಂತರ ಆರೋಪಿಯು “ನನ್ನ ಬಳಿ ನಿನ್ನ ಬೆತ್ತಲೆ ಫೋಟೋಗಳಿವೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವೆ’ ಎಂದು ಯುವತಿಗೆ ಬೆದರಿಸಿದ್ದ. ಆತಂಕಗೊಂಡ ಯುವತಿ ತನ್ನ ಮಾವನ ಪತ್ನಿಯ ಬಳಿಯಿದ್ದ 218 ಗ್ರಾಂ ಚಿನ್ನಾಭರಣ ಹಾಗೂ 75 ಸಾವಿರ ರೂ. ನಗದನ್ನು ಹಂತ-ಹಂತವಾಗಿ ಆರೋಪಿಗೆ ನೀಡಿದ್ದಳು. ಇದಾದ ಬಳಿಕ ಆರೋಪಿ ಆಕೆಯನ್ನು ಸಂಪರ್ಕಿಸಿರಲಿಲ್ಲ. ಇದಾದ ಕೆಲವೇ ದಿನದಲ್ಲಿ ಮತ್ತೊಬ್ಬ ಸ್ನೇಹಿತನಿಂದ ಯುವತಿಗೆ ಬೆದರಿಕೆ ಕರೆ ಬರುತ್ತೆ!ಇದನ್ನೂ ಓದಿರಿಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!
ಬ್ರಿಜ್​ ಭೂಷಣ್​ ತನ್ನ ಸ್ನೇಹಿತ ವಿವೇಕ್​ ರೆಡ್ಡಿಗೆ ಯುವತಿಯ ಖಾಸಗಿ ಫೋಟೋ ಕಳುಹಿಸಿದ್ದ. 2019ರಿಂದಲೂ ಫೇಸ್​ಬುಕ್​ನಲ್ಲಿ ಯುವತಿಯೊಂದಿಗೆ ಚಾಟ್​ ಮಾಡುತ್ತಿದ್ದ ವಿವೇಕ್​, ಇತ್ತೀಚಿಗೆ ಯುವತಿಗೆ ಕರೆ ಮಾಡಿ ‘ನಿನ್ನ ಖಾಸಗಿ ಫೋಟೋ ನನ್ನ ಬಳಿ ಇದೆ’ ಎಂದು ಬೆದರಿಸಿ ರಾಚೇನಹಳ್ಳಿ ಪಾರ್ಕ್​ ಬಳಿ ಕರೆಸಿಕೊಂಡಿದ್ದ. ಅಲ್ಲಿ ಆಕೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದ. ‘ಹಣ ಕೊಡದಿದ್ದರೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡುವು’ ಎಂದು ಬೆದರಿಸಿದ್ದ. ನಂತರ ಆಕೆಯಿಂದ ಚಿನ್ನದ ಮಾಂಗಲ್ಯ ಸರ ಪಡೆದಿದ್ದ. ಇದಾದ ಕೆಲ ದಿನಗಳ ಬಳಿಕ ಮತ್ತೆ ಯುವತಿಗೆ ಕರೆ ಮಾಡಿದ ಇಬ್ಬರೂ ಆರೋಪಿಗಳು ಮತ್ತೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ನೊಂದ ಯುವತಿ ಈ ವಿಚಾರವನ್ನು ಮನೆಯವರಿಗೆ ತಿಳಿಸಿ ಅಮೃತಹಳ್ಳಿ‌ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಆಕೆಯ ಸ್ನೇಹಿತರಾದ ದೇವಸಂದ್ರದ ನಿವಾಸಿಗಳಾದ ಬ್ರಿಜ್​ ಭೂಷಣ್​ ಯಾದವ್​ (21) ಮತ್ತು ವಿವೇಕ್​ ರೆಡ್ಡಿ (20) ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 11 ಜನ ಬಲಿ! ಆ ಕ್ಷಣ ಕುರಿತು ಗಾಯಾಳು ಬಿಚ್ಚಿಟ್ಟ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

ನನ್ನನ್ನು ತಳ್ಳಿದ್ರು, ಕೂದಲು ಎಳೆದ್ರು, ಎಲ್ಲಾ ಕಡೆ ಮುಟ್ಟಲು ಬಂದ್ರು: ಶಾಸಕಿ ಸೌಮ್ಯರೆಡ್ಡಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + 13 =
Remember me
