ಮಾಗಡಿ: ಕಳೆದ ಆರು ತಿಂಗಳಿಂದ ಮಾಗಡಿ, ಬಸವನ ಗುಡಿ ಪಾಳ್ಯ, ಕಲ್ಯಾ. ಶ್ರೀಪತಿಹಳ್ಳಿ ಸುತ್ತಮುತ್ತಲ ಹತ್ತಾರು ಗ್ರಾಮಗಳ ರೈತರ ನೆಮ್ಮದಿ ಕೆಡಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಳೆದ ಕೆಲವು ವಾರಗಳ ಅವಧಿಯಲ್ಲಿ ಚಿರತೆ ಹಾಡು ಹಗಲೇ ಗ್ರಾಮಗಳಲ್ಲಿ ಅಲ್ಲಲ್ಲಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತ್ತು.
ಕಳೆದ ಒಂದು ವಾರದಿಂದ ಹಾಡು ಹಗಲೆ ಸಾಕುಪ್ರಾಣಿಗಳ ಮೇಲೆ ಎರಗಿ ಸಾಯಿಸುತ್ತಿರುವುದರಿಂದ ಈ ಬಗ್ಗೆ ಗ್ರಾಮಸ್ಥರು ಮನವಿ ಮಾಡಿದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಬೋನು ಇಡಿಸಿ ಚಿರತೆ ಸೆರೆ ಹಿಡಿಯಲು ಕ್ರಮಕೈಗೊಳ್ಳಲಾಗಿದೆ, ಚಿರತೆ ದಾಳಿಗೆ ಶಾಶ್ವತ ಪರಿಹಾರ ಒದಗಿಸಲು ಸಂಸದ ಡಿ.ಕೆ.ಸುರೇಶ ಅವರಿಗೆ ಮನವಿ ಮಾಡಲಾಗಿದೆ.ನಾರಾಯಣಪ್ಪ,ತಾ.ಪಂ‌ ಅಧ್ಯಕ್ಷ
ನಾಲ್ಕು ವರ್ಷ ಪ್ರಾಯದ ಗಂಡು ಚಿರತೆ ತಾಲೂಕಿನ ಕಲ್ಯಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಸವನಗುಡಿ ಪಾಳ್ಯದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಭಾನುವಾರ ಮುಂಜಾನೆ ಬಿದಿದ್ದೆ. ಇದರಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಈ ಚಿರತೆ ಅಲ್ಲದೆ ಇನ್ನೊಂದು ಚಿರತೆಯೂ ಇದ್ದು, ಅದು ಸಾಕುಪ್ರಾಣಿಗಳ ಮೇಲೆ ಪದೇಪದೆ ದಾಳಿ ಮಾಡಿ ಸಾಯಿಸುತ್ತಿದೆ ಎಂಬ ಆತಂಕವನ್ನು ಗ್ರಾಮಸ್ಥರು ತೋಡಿಕೊಂಡಿದ್ದಾರೆ. ಅದನ್ನು ಸೆರೆ ಹಿಡಿಯಲು ಬೋನು ಇಡಬೇಕು ಎಂದು ಅರಣ್ಯ ಅಧಿಕಾರಿಗಳ ಬಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಭಾನುವಾರ ಬೆಳಗ್ಗೆ ಬೋನಿಗೆ ಬಿದ್ದ ಚಿರತೆಯನ್ನು ನೋಡಲು ನೂರಾರು ಮಂದಿ ಗ್ರಾಮಸ್ಥರು ಮುಗಿಬಿದಿದ್ದರು, ಇದೇ ವೇಳೆ ವಲಯ ಅರಣ್ಯಾಧಿಕಾರಿ ಪುಷ್ವಲತಾ, ಉಪವಲಯ ಅರಣ್ಯಾಧಿಕಾರಿ ಚಿದಾನಂದ್, ಸಿದ್ದರಾಜು ಇತರರು ಇದ್ದರು.
ಈ ಮುದುಕನಿಗೆ ಇದೆಂತಾ ಶಿಕ್ಷೆ!: ಆಸ್ಪತ್ರೆ ಬಿಲ್ ಪಾವತಿಸದಿದ್ರೆ ಈ ರೀತಿ ಹಿಂಸೆ ಕೊಡೋದಾ?!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + seventeen =
Remember me
