ಬೆಂಗಳೂರು:ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ 7 ತಿಂಗಳಿಂದ ಬಹುತೇಕ ಸ್ಥಗಿತಗೊಂಡಿದ್ದ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳಲ್ಲಿನ ಭೌತಿಕ ಕಲಾಪಗಳನ್ನು ಸೆ.28ರಿಂದ ಹಂತ ಹಂತವಾಗಿ ಪುನರಾರಂಭಿಸಲು ಮುಂದಾಗಿರುವ ಹೈಕೋರ್ಟ್, ಅದಕ್ಕಾಗಿ 42 ಅಂಶಗಳ ವಿಶೇಷ ಎಸ್‌ಒಪಿ ಬಿಡುಗಡೆ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನಿರ್ದೇಶನದ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬದಾಮಿಕರ್ ಎಸ್‌ಒಪಿ ಪ್ರಕಟಿಸಿದ್ದಾರೆ. ಸೆ.28ರಿಂದ 55 ತಾಲೂಕುಗಳಲ್ಲಿ ಕೋರ್ಟ್ ಕಲಾಪ ಆರಂಭವಾಗಲಿದ್ದು, ದಾವಣಗೆರೆ, ಹಾವೇರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ರಾಯಚೂರು, ಬೀದರ್, ರಾಮನಗರ, ಉಡುಪಿ, ಗದಗ, ಕೊಡಗು, ಚಾಮರಾಜನಗರ, ಯಾದಗಿರಿ ಜಿಲ್ಲೆಗಳಲ್ಲಿ ಅ.5ರಿಂದ ಭೌತಿಕ ಕಲಾಪ ಪುನರಾರಂಭಗೊಳ್ಳಲಿದೆ. ಅ.12ರಿಂದ ಎಲ್ಲ ಜಿಲ್ಲೆಗಳಲ್ಲೂ ನೂತನ ಎಸ್‌ಒಪಿ ಅನುಸಾರ ಪೂರ್ಣ ಪ್ರಮಾಣದಲ್ಲಿ ಕಲಾಪ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ತುರ್ತು ಸಂದರ್ಭಗಳಲ್ಲಿ ಯಾವುದಾದರೂ ನ್ಯಾಯಾಲಯಗಳಲ್ಲಿ ಸ್ಯಾನಿಟೈಸ್ ಮಾಡುವ ಅಥವಾ ಕಲಾಪ ಸ್ಥಗಿತಗೊಳಿಸುವ ಅಗತ್ಯವಿದ್ದರೆ ಆ ಕುರಿತು ಮುಖ್ಯ ನ್ಯಾಯಮೂರ್ತಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸಾರ್ವಜನಿಕರ ಪ್ರವೇಶ ನಿರ್ಬಂಧ:ಪ್ರತಿದಿನ ಬೆಳಗ್ಗೆ 15, ಮಧ್ಯಾಹ್ನ 15 ಸೇರಿ ಒಟ್ಟು 30 ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ನ್ಯಾಯಾಲಯಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ಕೋರ್ಟ್ ಹಾಲ್‌ಗಳಲ್ಲಿ ವಕೀಲರು, ಸಿಬ್ಬಂದಿ ಸೇರಿ 20ಕ್ಕೂ ಅಧಿಕ ಜನ ಸೇರುವಂತಿಲ್ಲ. ಸಾಕ್ಷಿಗಳು ಮತ್ತು ಆರೋಪಿಗಳು ಹಾಜರಾಗಬೇಕಿದ್ದರೂ ಅವರಿಗೆ ಕರೊನಾ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಸಮನ್ಸ್ ಇದ್ದ ಸಾಕ್ಷಿಗಳು ಮಾತ್ರ ವಿಚಾರಣೆಗೆ ಹಾಜರಾಗಬೇಕು, ಪ್ರತಿಯೊಬ್ಬ ಸಾಕ್ಷಿಯ ವಿಚಾರಣೆ ನಂತರ ಆ ಜಾಗವನ್ನು ಸ್ಯಾನಿಟೈಸ್ ಮಾಡಬೇಕು. ಕೋರ್ಟ್ ಸಂಕೀರ್ಣದಲ್ಲಿ ವಕೀಲರ ವಾಹನಗಳ ನಿಲುಗಡೆಗೆ ಮಾತ್ರ ಅವಕಾಶವಿದ್ದು, ಅದಕ್ಕಾಗಿ ವೆಹಿಕಲ್ ಪಾಸ್‌ಗಳನ್ನು ಪಡೆಯಬೇಕು ಎಂದು ಎಸ್‌ಒಪಿಯಲ್ಲಿ ತಿಳಿಸಲಾಗಿದೆ.
ಪ್ರತಿದಿನ ಬೆಳಗ್ಗೆ 15, ಮಧ್ಯಾಹ್ನ 15 ಸೇರಿ ಒಟ್ಟು 30 ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ನ್ಯಾಯಾಲಯಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ಕೋರ್ಟ್ ಹಾಲ್‌ಗಳಲ್ಲಿ ವಕೀಲರು, ಸಿಬ್ಬಂದಿ ಸೇರಿ 20ಕ್ಕೂ ಅಧಿಕ ಜನ ಸೇರುವಂತಿಲ್ಲ. ಸಾಕ್ಷಿಗಳು ಮತ್ತು ಆರೋಪಿಗಳು ಹಾಜರಾಗಬೇಕಿದ್ದರೂ ಅವರಿಗೆ ಕರೊನಾ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಸಮನ್ಸ್ ಇದ್ದ ಸಾಕ್ಷಿಗಳು ಮಾತ್ರ ವಿಚಾರಣೆಗೆ ಹಾಜರಾಗಬೇಕು, ಪ್ರತಿಯೊಬ್ಬ ಸಾಕ್ಷಿಯ ವಿಚಾರಣೆ ನಂತರ ಆ ಜಾಗವನ್ನು ಸ್ಯಾನಿಟೈಸ್ ಮಾಡಬೇಕು. ಕೋರ್ಟ್ ಸಂಕೀರ್ಣದಲ್ಲಿ ವಕೀಲರ ವಾಹನಗಳ ನಿಲುಗಡೆಗೆ ಮಾತ್ರ ಅವಕಾಶವಿದ್ದು, ಅದಕ್ಕಾಗಿ ವೆಹಿಕಲ್ ಪಾಸ್‌ಗಳನ್ನು ಪಡೆಯಬೇಕು ಎಂದು ಎಸ್‌ಒಪಿಯಲ್ಲಿ ತಿಳಿಸಲಾಗಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 8 =
Remember me
