ಬೀದರ್:ನಡೆದಾಡುವ ದೇವರು ಎಂದೇ ಕರೆಯಲ್ಪಡುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳು ಇಹಲೋಕ ತ್ಯಜಿಸಿದ ಕೆಲವೇ ದಿನಗಳಲ್ಲಿ ಅಚ್ಚರಿಯೊಂದು ಕಂಡುಬಂದಿದೆ. ಪಾರಿವಾಳವೊಂದು ಅವರ ಭಾವಚಿತ್ರ ಬಿಟ್ಟು ತೆರಳದ ವಿದ್ಯಮಾನವೊಂದು ನಡೆದಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ ಕಾಲೇಜೊಂದರಲ್ಲಿ ಈ ದೃಶ್ಯ ಕಂಡುಬಂದಿದೆ. ಇಲ್ಲಿನ ಅಥರ್ವ ಕಾಲೇಜಿನಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಭಾವಚಿತ್ರ ಇರಿಸಲಾಗಿದ್ದು, ಅಲ್ಲಿಗೆ ಇಂದು ಪಾರಿವಾಳವೊಂದು ಬಂದು ಆ ಫೋಟೋದ ಪಕ್ಕದಲ್ಲೇ ಕಾಲ ಕಳೆದಿದೆ. ಹತ್ತಿರದಲ್ಲೇ ಬೇರೆ ಫೋಟೋಗಳಿದ್ದರೂ ಸಿದ್ದೇಶ್ವರ ಶ್ರೀಗಳ ಫೋಟೋ ಬಳಿಯೇ ಕಾಯುವ ಮೂಲಕ ಈ ಪಕ್ಷಿ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ:ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!
ಬೆಳಗ್ಗೆಯಿಂದ ಬೇರೆ ಎಲ್ಲ ಫೋಟೋಗಳನ್ನ ಬಿಟ್ಟು ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರದ ಮುಂದೆ ಬಂದು ಕುಳಿತ ಪಾರಿವಾಳವನ್ನು ಕಾಲೇಜು ಸಿಬ್ಬಂದಿ ಓಡಿಸಲು ಪ್ರಯತ್ನಿಸಿದರೂ ಅದು ಫೋಟೋ ಬಿಟ್ಟು ಹೋಗಲಿಲ್ಲ. ಬೆಳಗ್ಗೆ 8.30ರಿಂದ ಸಿದ್ದೇಶ್ವರ ಸ್ವಾಮಿಗಳ ಫೋಟೋ ಮುಂದೆಯೇ ಇರುವ ಪಾರಿವಾಳ ಕೌತುಕ ಉಂಟಾಗಿಸಿದೆ.
ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..

ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

Sign in to your account
Please enter an answer in digits:4 × 4 =
Remember me
