ಚಿತ್ರದುರ್ಗ:ಎರಡು ಸಾವಿರ ಮುಖಬೆಲೆಯ ನೋಟು ಅಮಾನ್ಯೀಕರಣವಾದರೆ ಎಂಬ ಚಿತ್ರದುರ್ಗದ ಉದ್ಯಮಿಯೊಬ್ಬರ ಆತಂಕದ ಲಾಭ ವನ್ನು ಪಡೆಯಲು ಯತ್ನಿಸಿದ್ದ 10 ಜನ ವಂಚಕರನ್ನು ನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರನ್ನು ಹೈದರಬಾದ್, ಸಿಕಂದರಬಾದ್ ಮೂಲದ ಸುಧಾಕರರೆಡ್ಡಿ,ಪ್ರಕಾಶ್,ಮಧು,ವೆಂಕಟೇಶ್,ಪದ್ಮ,ವಿಜಯ,ಮಧು,ಕಿರಣ್,ಭಾಸ್ಕ್ ಹಾಗೂ ಪುಳ್ಳಪ್ಪ ಎಂದು ಗುರುತಿಸಲಾಗಿದೆ.
ಏಕಾಏಕಿ ಮತ್ತೆ ನೋಟು ಅಮಾನ್ಯೀಕರಣವಾದರೆ ಎಂಬ ಭಯದಲ್ಲಿ ನಗರದ ಉದ್ಯಮಿಯೊಬ್ಬರು ತಮ್ಮಲ್ಲಿರುವ 2000 ರೂ.ಮುಖ ಬೆಲೆಯ ಒಂದು ಕೋಟಿ ರೂ.ಮೊತ್ತವನ್ನು 500 ರೂ.ಮುಖ ಬೆಲೆ ನೋಟುಗಳಿಗೆ ಪರಿವರ್ತಿಸಲು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಉದ್ಯಮಿಯನ್ನು ಸಂಪರ್ಕಿಸಿದ್ದ ಮೂರು ಪ್ರತ್ಯೇಕ ಮಧ್ಯವರ್ತಿ ತಂಡಗಳು ನಗರ ಲಾಡ್ಜ್‌ಗಳಲ್ಲಿ ಉಳಿದು ಕಾರ‌್ಯಾ ಚರಣೆಯನ್ನು ಆರಂಭಿಸಿದ್ದವು. ಆದರೆ ಇದರ ಸುಳಿವು ಹಿಡಿದ ಪೊಲೀಸರು ಆರೋಪಿಗಳಿದ್ದ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.
ಮೊದಲು ಒಂದು ಕೋಟಿ ರೂ.ಮೊತ್ತದ 2 ಸಾವಿರ ರೂ.ಮುಖ ಬೆಲೆಯ ನೋಟುಗಳನ್ನು 500 ರೂ.ಗೆ ಬದಲಾಯಿಸಲು ಇಚ್ಛಿಸಿದ್ದ ಉದ್ಯಮಿ ಕೊನೆಗೆ, ಐದು ಕಂತಿನಲ್ಲಿ ತಲಾ 20 ಲಕ್ಷ ರೂ.ಗಳಂತೆ ಪರಿವರ್ತಿಸಲು ಮುಂದಾಗಿದ್ದು, ನೋಟು ಬದಲಾಯಿಸಿಕೊಡುವಂಥವರಿಗೆ ಶೇ.15 ಕಮಿಷನ್ ಕೊಡಲು ಒಪ್ಪಿದ್ದ. ಆದರೆ ಅದ್ಯಾಕೋ ಅನುಮಾನದಿಂದ ಉದ್ಯಮಿ,ಪೋನ್‌ನಲ್ಲಿ ಆರೋಪಿಗಳನ್ನು ಸಂಪರ್ಕಿಸಿದ್ದಾರೆಯೇ ವಿನಾ ಅವರಿದ್ದ ಸ್ಥಳಕ್ಕೆ ಹೋಗಿಲ್ಲ, ಈಗ ಉದ್ಯಮಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿಗಳು ತಮ್ಮ ಕೃತ್ಯಕ್ಕೆ ಫಿಂಕ್ ಟು ಗ್ರೀನ್ ಎಂಬ ಕೋಡ್‌ವರ್ಡ್ ಬಳಸುತ್ತಿದ್ದರು. ಪ್ರಕರಣದ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಈ ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 13 =
Remember me
