ಬೆಂಗಳೂರು:ಬಿಡಬ್ಲ್ಯೂಎಸ್ಎಸ್​ಬಿ (BWSSB) ನಿರ್ಲಕ್ಷ್ಯಕ್ಕೆ ಬೆಂಗಳೂರಿನ ರಸ್ತೆಯಲ್ಲಿ ಕೃತಕ ಕಾರಂಜಿ ಸೃಷ್ಠಿಯಾಗಿದ್ದು ಅನೇಕ ಕಾರು ಚಾಲಕರು ಸಿಕ್ಕಿದ್ದೇ ಚಾನ್ಸ್​ ಎಂದು ಉಚಿತವಾಗಿ ಕಾರ್​ ವಾಶ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗೆ ಕಾವೇರಿ ನೀರು ಪೂರೈಸುವ ಪಂಪ್​ಹೌಸ್​ಗೆ ನುಗ್ಗಿದ ನೀರು: ಸಿಎಂ ಬೊಮ್ಮಾಯಿ‌ ದೌಡು
ಕಾವೇರಿ ಪೈಪ್ ಒಡೆದು ಕುಡಿಯುವ ನೀರು ಪೋಲಾಗುತ್ತಿದ್ದು ಈ ಘಟನೆ ಯಶವಂತಪುರ ಎಂಇಐ ಬಸ್ ಸ್ಟಾಪ್ ಬಳಿ ನಡೆದಿದೆ. ಕಾವೇರಿ ಪೈಪ್​ಲೈನ್ ಕನೆಕ್ಷನ್ ಬಳಿ ವಾಲ್ವ್​ ಹೋದ ಪರಿಣಾಮ ಸುಮಾರು ಒಂದು ಗಂಟೆಗಳ ಕಾವೇರಿ ನೀರು ಪೋಲಾಗಿದೆ. ಸುಮಾರು 8 ರಿಂದ 10 ಅಡಿ ಎತ್ತರಲ್ಲಿ ನೀರು ಚಿಮ್ಮಿದ್ದು ಕಾವೇರಿ ನೀರಿನಲ್ಲಿ ಜನರು ಬಸ್, ಕಾರು ತೊಳೆಯುತ್ತಿದ್ದ ದೃಷ್ಯ ಕಂಡುಬಂದಿದೆ.
ಇದನ್ನೂ ಓದಿ:ಬೆಂಗಳೂರಿಗೆ ಕಾವೇರಿ ನೀರು ಪೂರೈಸುವ ಪಂಪ್​ಹೌಸ್​ಗೆ ನುಗ್ಗಿದ ನೀರು: ಸಿಎಂ ಬೊಮ್ಮಾಯಿ‌ ದೌಡು
ಬಳಿಕ ಬಂದ BWSSB ವಾಟರ್ ಮ್ಯಾನ್, ಒಡೆದು ಹೋದ ಪೈಪ್ ಮೇಲೆ ಬಂಡೆ ಇಟ್ಟು ನೀರನ್ನು ನಿಯಂತ್ರಿಸಿದ್ದಾರೆ. ಕಾವೇರಿ ನೀರಿನಲ್ಲಿ ವ್ಯತ್ಯಯ ಇದೆ ಎಂದು ಜಲಮಂಡಳಿ ಹೇಳುತ್ತಾ ಮತ್ತೊಂದು ಕಡೆಯಲ್ಲಿ ನೀರು ಪೋಲಾಗುತ್ತಿದ್ದರೂ ನಿಯಂತ್ರಣ ಮಾಡಿಲ್ಲ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × two =
Remember me
