ಬೆಂಗಳೂರು: ಪೈರಸಿ ಕಾಟ ನಟಿ ರಾಧಿಕಾ ಕುಮಾರಸ್ವಾಮಿಯನ್ನೂ ಕಾಡುತ್ತಿದೆ.ಇವರೇ ನಿರ್ಮಾಪಕಿ ಮತ್ತು ನಾಯಕಿ ಆಗಿರುವ ಸಿನಿಮಾವೊಂದನ್ನು ಯೂಟ್ಯೂಬ್​ನಲ್ಲಿ ಅಕ್ರಮವಾಗಿ ಅಪ್​ಲೋಡ್​ ಮಾಡಲಾಗಿದೆ.
ಈ ಬಗ್ಗೆ ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಕನ್ನಡದ ‘ಸ್ವೀಟಿ’ ಸಿನಿಮಾವನ್ನು ಯೂಟ್ಯೂಬ್​ನಲ್ಲಿ ಅಕ್ರಮವಾಗಿ ಅಪ್​ಲೋಡ್​ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಉತ್ತರ ವಿಭಾಗ ಸಿಇಎನ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿರಿಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ
2013ರಲ್ಲಿ ಬಿಡುಗಡೆಯಾದ ಸ್ವೀಟಿ ಸಿನಿಮಾದಲ್ಲಿ ಆದಿತ್ಯ ನಾಯಕನಾಗಿ, ನಾನು (ರಾಧಿಕಾ) ನಾಯಕಿಯಾಗಿ ಅಭಿನಯಿಸಿದ್ದೇವೆ.ಈ ಸಿನಿಮಾಗೆ ನಾನೇ ನಿರ್ಮಾಪಕಿ. ಆದರೀಗ ನಿರ್ಮಾಪಕರ ಅನುಮತಿ ಪಡೆಯದೆ ಯೂಟ್ಯೂಬ್​ಗೆ ಅಪ್​ಲೋಡ್​ ಮಾಡಲಾಗಿದೆ. 3 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡಿದ್ದೆ. ಯಾರೋ ಚಲನಚಿತ್ರವನ್ನು ಕಾನೂನು ಬಾಹಿರವಾಗಿ ಯೂಟ್ಯೂಬ್​ಗೆ ಅಪ್​ಲೋಡ್​ ಮಾಡಿ ವಂಚಿಸಿದ್ದಾರೆ. ಕಾನೂನು ಕ್ರಮ ಜರುಗಿಸಬೇಕು ಎಂದು ರಾಧಿಕಾ ದೂರಿನಲ್ಲಿ ಒತ್ತಾಯಿಸಿದ್ದಾರೆ. ಇದರ ಅನ್ವಯ ಎಫ್​ಐಆರ್​ ದಾಖಲಿಸಿಕೊಂಡ ಸಿಇಎನ್​ ಠಾಣೆ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಡ್ರಗ್ಸ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ನ 15 ನಟ-ನಟಿಯರು, ಸಿಸಿಬಿಗೆ ಮಾಹಿತಿಕೊಟ್ಟ ಇಂದ್ರಜಿತ್​ ಲಂಕೇಶ್​

‘ಡ್ರಗ್ಸ್​ ಮಾಫಿಯಾಕ್ಕೆ ಸಿಲುಕಿ ನಮ್ಮ ಮಕ್ಕಳು ಹಾಳಾಗಿಬಿಡ್ತವೆ…’ ಎಂದ ಹಿರಿಯ ರಾಜಕಾರಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 6 =
Remember me
