ಬೆಳಗಾವಿ:ಪೀರನವಾಡಿ ವೃತ್ತದಲ್ಲಿ ಶುಕ್ರವಾರ ಬೆಳಗ್ಗೆ ಸ್ಥಳೀಯ ಕೆಲವರು ಬೃಹತ್ ನಾಮಫಲಕ ಸ್ಥಾಪಿಸಿದ್ದು ವಿವಾದಕ್ಕೀಡಾಯಿತು. ನಾಮಫಲಕದಲ್ಲಿ ದೊಡ್ಡ ದಪ್ಪ ಮರಾಠಿ ಅಕ್ಷರಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜ್​ ಚೌಕ್​ (ಚಿನ್ನಪಟ್ಟಣ) ಎಂದಿದ್ದು, ಕನ್ನಡದ ಹೆಸರು ಕೆಳಗೆ ಇದೆ. ಈ ವಿಚಾರವಾಗಿ ಈಗ ವಿವಾದ ಉಂಟಾಗಿದೆ.
ನಾಮಫಲಕ ಅನಾವರಣ ಕಾರ್ಯಕ್ರಮದ ಬೆನ್ನಿಗೆ ಕನ್ನಡಪರ ಹೋರಾಟಗಾರರು ಈ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡ ನಾಡಿನಲ್ಲಿರುವ ನಾಮಫಲಕಗಳಲ್ಲಿ ಮೊದಲ ಆದ್ಯತೆ ಕನ್ನಡಕ್ಕೇ ಇರಬೇಕು. ನಂತರದ ಸ್ಥಾನ ಬೇರೆ ಭಾಷೆಗೆ ಎಂಬ ನಿಯಮವಿದ್ದರೂ ಎಂಇಎಸ್​ನವರು ಅದನ್ನು ಮೀರಿ ಸಾಮಾಜಿಕ ಅಶಾಂತಿ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಸುಮ್ಮನೆ ನನ್ನನ್ನ ಏಕೆ ಈ ವಿಷ್ಯಕ್ಕೆ ಎಳೆಯುತ್ತೀರಾ? ಸಂಜನಾ ಪ್ರಶ್ನೆ
ಈ ಸಂಬಂಧ ಕನ್ನಡ ಹೋರಾಟಗಾರ ದೀಪಕ್ ಗುಡಗನಟ್ಟಿ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ್ದು, ನಿಯಮ ಪ್ರಕಾರವೇ ನಾಮಫಲಕ ಸ್ಥಾಪನೆಯಾಗಲಿ. ಅದನ್ನೂ ಸರ್ಕಾರವೇ ಮಾಡಲಿ. ಈಗ ಹಾಕಿರುವ ನಾಮಫಲಕ ತೆರವುಗೊಳಿಸಬೇಕು. ಕನ್ನಡದಲ್ಲಿ ವೃತ್ತದ ಹೆಸರು ದಪ್ಪ ಅಕ್ಷರಗಳಲ್ಲಿ ಇರುವ ನಾಮಫಲಕವನ್ನೇ ಇಲ್ಲಿ ಅಳವಡಿಸಬೇಕು. ಇಲ್ಲದೇ ಹೋದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ. (ದಿಗ್ವಿಜಯ ನ್ಯೂಸ್)
‘ರಾಬರ್ಟ್​’ ಸುಂದರಿಯ ಫಸ್ಟ್​ ಲುಕ್​ ಕಣ್ತುಂಬಿಕೊಳ್ಳಲು ನಿಗದಿಯಾಯ್ತು ದಿನಾಂಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − two =
Remember me
