ಬೆಂಗಳೂರು:ಆನ್​ಲೈನ್​ನಲ್ಲಿ ಪಿಜ್ಜಾ ಆರ್ಡರ್​ ಮಾಡಿದ್ದ ದುಷ್ಕರ್ಮಿಗಳು ಡೆಲಿವರಿ ಬಾಯ್​ಗೆ ಹಣ ಕೊಡದೇ ಕಲ್ಲಿನಿಂದ ಹಲ್ಲೆ ನಡೆಸಿ ಪಿಜ್ಜಾ ಸಮೇತ ಪರಾರಿಯಾಗಿದ್ದಾರೆ.
ಜು.28ರಂದು 10 ಗಂಟೆಗೆ ಭರತ್​ ಎಂಬುವವರು ಆನ್​ಲೈನ್​ನಲ್ಲಿ ಮೂರು ಪಿಜ್ಜಾ ಆರ್ಡರ್​ ಮಾಡಿದ್ದರು. 10.30ಕ್ಕೆ ಡೆಲಿವರಿ ಬಾಯ್​ ಹೇಮಂತ್​ ಪಿಜ್ಜಾ ಕೊಡಲು ಬಾಣಸವಾಡಿಯ ಮುನೇಶ್ವರ ದೇವಾಲಯದ ಬಳಿ ಬಂದಿದ್ದರು. ಅಲ್ಲಿಗೆ ಬಂದ ಭರತ್​ ಹಾಗೂ ಇತರರು ಪಿಜ್ಜಾ ತೆಗೆದುಕೊಂಡು ಹಣ ಕೊಡದೇ ಹೋಗಲು ಮುಂದಾದರು. ಹೇಮಂತ್​ ಹಣ ಕೇಳಿದಾಗ ಆರೋಪಿಗಳು ರಸ್ತೆಯಲ್ಲಿ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಇದನ್ನೂ ಓದಿರಿಕುಖ್ಯಾತ ಬೈಕ್​ ಕಳ್ಳನ ಸೆರೆ, ಕದ್ದ ವಾಹನಗಳ ಮಾರಾಟ ವಿಧಾನ ಕೇಳಿದ್ರೆ ಶಾಕ್​ ಆಗ್ತೀರಿ
ಪಿಜ್ಜಾದ ಹಣ ಕೊಡದೆ ಹಲ್ಲೆ ಮಾಡಿ ಪರಾರಿಯಾದ ಭರತ್​ ಮತ್ತು ಇತರರ ವಿರುದ್ಧ ಮಹದೇವಪುರ ನಿವಾಸಿ ಹೇಮಂತ್,​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆರೋಪಿಗಳು ಆನ್​ಲೈನ್​ನಲ್ಲಿ ಪಿಜ್ಜಾ ತರಿಸಿಕೊಂಡು ಹಲವು ಜನರಿಗೆ ವಂಚನೆ ಮಾಡಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ.
ಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 10 =
Remember me
