ಬೆಂಗಳೂರು:ಹಳೆ ಮೈಸೂರು ಭಾಗದಲ್ಲಿ ಕಮಲ ಕಳೆ ಹೆಚ್ಚಿಸಲು ಬಿಜೆಪಿ ನಾಯಕರು ರೂಪಿಸಿರುವ ಪ್ಲಾ್ಯನ್ ಅನುಷ್ಠಾನಕ್ಕೆ ತರಲು ಉತ್ಸುಕರಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್​ನ ಮಾಜಿ ಶಾಸಕರು ಸೇರಿ ಹಲವರನ್ನು ಕಮಲ ಪಡೆ ಸೆಳೆದಿದೆ. ಇದೀಗ ಪಕ್ಷದ ಪರ ಅಲೆ ಎಬ್ಬಿಸುವುದಕ್ಕಾಗಿ ಸಮಾವೇಶ ಆಯೋಜಿಸಲು ತಯಾರಾಗಿದೆ.
ಷಾ ಸಮಕ್ಷಮ ಸಮಾವೇಶ:ಖೇಲೋ ಇಂಡಿಯಾ ವಿವಿಗಳ ಕ್ರೀಡಾಕೂಟ ಸಮಾರೋಪದಲ್ಲಿ ಪಾಲ್ಗೊಳ್ಳಲೆಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮೇ 3ರಂದು ಆಗಮಿಸಲಿದ್ದಾರೆ. ಈ ಭೇಟಿ ಅವಕಾಶವನ್ನು ಬಳಸಿಕೊಂಡು ಅವರ ಸಮಕ್ಷಮವೇ ಮಂಡ್ಯದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ಆಯೋಜಿಸಲು ತಯಾರಿ ನಡೆದಿದೆ. ಸಂಘಟನೆ ಬಲಪಡಿಸಲು ಹಾಗೂ ಕಾರ್ಯಕರ್ತರಲ್ಲಿ ಹುರುಪು ತುಂಬುವ ಕ್ರಮಗಳಿಗೆ ಷಾ ಪ್ರವಾಸ ವರದಾನವಾಗಲಿದೆ ಎನ್ನುವುದು ರಾಜ್ಯ ನಾಯಕರ ವಿಶ್ವಾಸ. ಈ ಸಮಾವೇಶದ ಮೂಲಕ ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸುವ ಇರಾದೆ ಹೊಂದಿದ್ದು, ಕೆಲ ಪ್ರಮುಖರು ಪಕ್ಷಕ್ಕೆ ಸೇರ್ಪಡೆಯಾಗುವ ಸಂಭವವಿದೆ. ಪಕ್ಷದ ಪ್ರಬಲ ಹಿಡಿತ, ಗೆಲ್ಲುವ ಸಾಮರ್ಥ್ಯವುಳ್ಳ ಅಭ್ಯರ್ಥಿಳಿರುವ ಕ್ಷೇತ್ರಗಳು ಹೊರತುಪಡಿಸಿ ಉಳಿದ ಕ್ಷೇತ್ರಗಳತ್ತ ಕಮಲ ಪಾಳೆಯ ಕಣ್ಣಿಟ್ಟಿದೆ. ಮಿಷನ್ 150 ಪ್ಲಸ್ ಎಂದು ಹೇಳಿಕೆ ನೀಡಿದರೆ ಸಾಲದು. ಪರಿಣಾಮಕಾರಿ ಅನುಷ್ಠಾನ, ನಿಗದಿತ ಗುರಿ ಸಾಧಿಸಲು ಅಪಾರ ಶ್ರಮ ಅಗತ್ಯವಿದೆ ಎನ್ನುವುದು ರಾಜ್ಯ ನಾಯಕರಿಗೆ ಮನವರಿಕೆಯಾಗಿದೆ. ಹೊಸಪೇಟೆಯಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಮಾದರಿ ಸಲಹೆಗಳನ್ನು ನೀಡಿದ್ದಾರೆ.
ಅಮಿತ್ ಷಾ ಅವರು ಮೇ 3ರಂದು ಆಗಮಿಸುವ ಸಾಧ್ಯತೆಯಿದ್ದು, ಇದೇ ವೇಳೆ ಮಂಡ್ಯದಲ್ಲಿ ಸಮಾವೇಶ ಏರ್ಪಡಿಸುವ ಚಿಂತನೆಯಿದೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಖಾತೆ ನಾನೇ ಆರಂಭಿಸಿದ್ದು, ಪಕ್ಷದ ಸಂಪರ್ಕದಲ್ಲಿರುವ ಇನ್ನೂ ಕೆಲವರು ಸೇರ್ಪಡೆ ಸಾಧ್ಯತೆಗಳಿವೆ.
|ಕೆ.ಸಿ.ನಾರಾಯಣಗೌಡಸಚಿವ
ನಿಯಮ ಬ್ರೇಕ್:ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರನ್ನು ಸೇರಿಸಲು ಮಂಡ್ಯ ಜಿಲ್ಲೆಯಲ್ಲಿ ಕಮಲದ ಹವಾ ಸೃಷ್ಟಿಗೆ ಮುಖಂಡರು ಬಯಸಿದ್ದರೂ ಕರೊನಾ ನಿಯಮ ಬ್ರೇಕ್ ಹಾಕಿದೆ. ನಾಲ್ಕನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಸೋಮವಾರ ಜಾರಿಗೆ ಬಂದಿರುವ ಮಾರ್ಗಸೂಚಿ ಪ್ರಕಾರ ಕನಿಷ್ಠ ಎರಡು ಅಡಿ ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಶಕ್ತಿಪ್ರದರ್ಶನದ ಧಾವಂತದಲ್ಲಿ ನಿಯಮ ಉಲ್ಲಂಘಿಸಿದ ಟೀಕೆ, ಪ್ರತಿಪಕ್ಷಗಳ ವಾಗ್ದಾಳಿಗೆ ಆಹಾರ ಆಗುವ ಬದಲು ಸೀಮಿತ ಪ್ರಮಾಣದಲ್ಲಿ ಜನರನ್ನು ಸೇರಿಸಲು ಚಿಂತನೆ ನಡೆಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅಮಿತ್ ಷಾ ಅವರು ಮೇ 3ರಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ಕ್ರೀಡಾಕೂಟ ಮುಕ್ತಾಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಂಡ್ಯದಲ್ಲಿ ಸಂಜೆ ಸಮಾವೇಶ ಆಯೋಜಿಸಲು ಯೋಚಿಸಲಾಗಿದೆ. ಕಾರ್ಯಕ್ರಮದ ರೂಪರೇಷೆ ಸಿದ್ಧವಾಗುತ್ತಿದ್ದು, ಇನ್ನೂ ಅಂತಿಮವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿಜಯಪುರ:ಗೋವಿನ ಇರಿತದಿಂದ ಸಿಎಂ ಬಸವರಾಜ ಬೊಮ್ಮಾಯಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆಯ ಹಂತ -1 ರ ಪೈಪ್ ವಿತರಣೆ ಜಾಲದ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದ ಆರಂಭದಲ್ಲೇ ಬಂಟನೂರ ಗ್ರಾಮದ ರೈತರು ಬೊಮ್ಮಾಯಿಗೆ ಗೋವು- ಜೋಡೆತ್ತು ಹಾಗೂ ಮಣ್ಣಿನ ಮಡಿಕೆ ಕೊಡಗೆಯಾಗಿ ನೀಡಲು ಮುಂದಾದರು. ಈ ವೇಳೆ ಗೋವಿಗೆ ಪೂಜೆ ಸಲ್ಲಿಸಲು ಮುಂದಾದಾಗ ಬೆದರಿದ ಗೋವು ಏಕಾಏಕಿ ಸಿಎಂ ಬೊಮ್ಮಾಯಿಯತ್ತ ಧಾವಿಸಿತು. ಕೂಡಲೇ ರೈತರು ಮೂಗುದಾರ ಹಿಡಿದು ಹಿಂದೆ ಸರಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಅವರಿಗೆ ಬೆಳ್ಳಿ ಗದೆ ಕಾಣಿಕೆಯಾಗಿ ನೀಡಲಾಯಿತು. ಹೀಗೆ ಕಾಣಿಕೆಯಾಗಿ ಬಂದ ಬೆಳ್ಳಿ ಗದೆ ಹಾಗೂ ಗೋವುಗಳನ್ನು ಯಲಗೂರು ಆಂಜನೇಯನಿಗೆ ಸಮರ್ಪಿಸುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು. ಕಾಣಿಕೆ ರೂಪದಲ್ಲಿ ಬಂದ ಗದೆ ನಾನೆಂದೂ ಮನೆಗೆ ಒಯ್ಯಲ್ಲ, ಗದೆ ಜಗಳ ಹಚ್ಚುತ್ತದೆ ಎಂದರು.
ಬೆಂಗಳೂರು:ಹಲವು ಬಾರಿ ಸಚಿವರಾದವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಿ, ಚುನಾವಣೆಗೆ ಮುನ್ನ ಸಚಿವ ಸಂಪುಟಕ್ಕೆ ಹೊಸ ಸ್ಪರ್ಶ ನೀಡಲೆಂಬ ಆಕಾಂಕ್ಷಿಗಳ ಬಯಕೆ ಈಡೇರುವ ಲಕ್ಷಣಗಳು ಗೋಚರಿಸಿವೆ. ಕೆಲ ತಿಂಗಳಿಂದ ಮೂಗಿಗೆ ತುಪ್ಪ ಹಚ್ಚಿ ಕಾಲ ತಳ್ಳಲಾಗುತ್ತಿದೆ ಎಂದು ನಿಡುಸುಯ್ಯುತ್ತಿದ್ದವರ ಆಸೆ ಮತ್ತೆ ಚಿಗುರೊಡೆದಿದೆ. ವಿಜಯಪುರ ಜಿಲ್ಲಾ ಪ್ರವಾಸದಲ್ಲಿ ಸಿಎಂ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಜಿಲ್ಲಾವಾರು ಪ್ರಾತಿನಿಧ್ಯದ ಬಗ್ಗೆ ಪ್ರತಿಕ್ರಿಯಿಸಿ, ವರಿಷ್ಠರ ಹಂತದಲ್ಲಿ ನಡೆದಿರುವ ಚಿಂತನೆಯ ಸುಳಿವು ನೀಡಿದ್ದಾರೆ.
ಮೇಜರ್ ಸರ್ಜರಿ ನಿಶ್ಚಿತ?:ಸಚಿವ ಪದವಿಗೆ ಹಂಬಲಿಸುವವರ ಅದೃಷ್ಟ ಫಲಿಸುವ ಬೆಳವಣಿ ಗೆಗಳು ದೆಹಲಿ ಹಂತದಲ್ಲಿ ನಡೆದಿದ್ದು, ಚುನಾವಣೆ ತಯಾರಿ ಭಾಗವಾಗಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಯಾಗುವುದು ನಿಶ್ಚಿತ ಎಂದು ಉನ್ನತ ಮೂಲಗಳು ತಿಳಿಸಿವೆ. ಬೊಮ್ಮಾಯಿಗೆ ಬುಲಾವ್ ನಿರೀಕ್ಷೆ: ಕೇಂದ್ರ ಗೃಹ ಸಚಿವ ಅಮಿತ್ ಷಾ ಮೇ 3ರಂದು ರಾಜ್ಯಕ್ಕೆ ಭೇಟಿ ನೀಡುವುದು ಬಹುತೇಕ ಪಕ್ಕಾ ಆಗಿದ್ದು, ಈ ಭೇಟಿಗೆ ಮುನ್ನ ಅಥವಾ ನಂತರ ಸಿಎಂ ಬೊಮ್ಮಾಯಿಗೆ ದೆಹಲಿ ಬುಲಾವ್ ಬರುವ ನಿರೀಕ್ಷೆಯಿದೆ. ಸಚಿವ ಸಂಪುಟ ಪುನಾರಚನೆ ಮಾತುಕತೆಗೆ ವೇದಿಕೆ ಸಜ್ಜಾಗುತ್ತಿದೆ. ಸಚಿವ ಸಂಪುಟ ಪುನಾರಚನೆಗೆ ಗುಜರಾತ್ ಮಾದರಿ ಬಳಕೆಯಾಗಲಿದೆ ಎಂದು ಹೇಳಲಾಗುತ್ತಿದ್ದರೂ ರಾಜ್ಯ ರಾಜಕೀಯ ನಕ್ಷೆ ವಿಭಿನ್ನವಾಗಿರುವ ಕಾರಣ ಅಂತಹ ಪ್ರಯೋಗಕ್ಕೆ ಕೈಹಾಕುವ ಸುಳಿವುಗಳಿಲ್ಲ ಎನ್ನಲಾಗಿದೆ.
ರಾಜಸ್ಥಾನ ಪೊಲೀಸರ ಮನಗೆದ್ದ ‘ಕೆಜಿಎಫ್​-2’ ‘ವಯಲೆನ್ಸ್​’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
