|ರುದ್ರಣ್ಣ ಹರ್ತಿಕೋಟೆಬೆಂಗಳೂರು
‘ಬಿದಿರು ನೀನ್ಯಾರಿಗಲ್ಲದವಳು’- ಈ ಹಾಡಿಗೆ ಅನ್ವರ್ಥವಾಗುವ ರೀತಿಯಲ್ಲಿ ಸರ್ಕಾರ ರೈತರ ಆದಾಯ ಹೆಚ್ಚಳಕ್ಕಾಗಿ ಬಿದಿರಿಗೆ ಮೊರೆ ಹೋಗುತ್ತಿದ್ದು, ಬಿದಿರು ಅಭಿವೃದ್ಧಿ ಮಂಡಳಿ ರಚನೆಗೂ ನಿರ್ಧರಿಸಿದೆ. ಬಿದಿರು ಮೊದಲು ಅರಣ್ಯ ವ್ಯಾಪ್ತಿಯಲ್ಲಿತ್ತು, ಆಗ ಕೆಲವು ನಿರ್ಬಂಧಗಳಿದ್ದವು, ಅದನ್ನು 2017 ರಲ್ಲಿ ಕೃಷಿ ವ್ಯಾಪ್ತಿಗೆ ತರಲಾಗಿದೆ. ಬಿದಿರು ಬೆಳೆಯಲು ಹಾಗೂ ಕತ್ತರಿಸಿ ಮಾರಾಟ ಮಾಡಲು ಕಾನೂನಿನ ಅಡ್ಡಿ ತೆರವಾಗಿರುವುದರಿಂದ ಕೃಷಿ ಇಲಾಖೆ ಬಿದಿರು ಅಭಿವೃದ್ಧಿಗೆ ನಿರ್ಧರಿಸಿದೆ.
ನಿಯಮಗಳ ಪ್ರಕಾರ ಶೇ.33 ಅರಣ್ಯ ಇರಬೇಕು. ಆದರೆ ರಾಜ್ಯದಲ್ಲಿ ಶೇ.21 ಅರಣ್ಯವಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೇ.10 ರಿಂದ 11 ಮಾತ್ರ ಇದೆ. ಬಿದಿರು ಬೆಳೆಸುವುದರಿಂದ ಹಸಿರು ಪ್ರದೇಶವೂ ಹೆಚ್ಚಾಗುತ್ತದೆ. ಹವಾಮಾನ ವೈಪರೀತ್ಯ ತಡೆಗೆ ಸಹಕಾರಿ ಎಂದು ಲೆಕ್ಕ ಹಾಕಲಾಗಿದೆ.
ಎಲ್ಲಿವೆ ಮಂಡಳಿ?:ಕೇಂದ್ರ ಸರ್ಕಾರ ಬಿದಿರು ಮಿಷನ್ ಮಾಡಿದೆ. ಉತ್ತರಾಖಂಡ, ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಮಂಡಳಿಗಳಿವೆ. ಸಾಕಷ್ಟು ಉತ್ಪನ್ನ ತಯಾರಿಸಲಾಗುತ್ತದೆ. ಕೇರಳದಲ್ಲಿ ಅಲ್ಲಿನ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿಯೇ ಎರಡು ಕಾರ್ಖಾನೆಗಳು ಇವೆ.
ಜಲಾನಯನ ಯೋಜನೆಯಲ್ಲಿ ರಾಜ್ಯದಲ್ಲಿ ವಿಶ್ವಬ್ಯಾಂಕ್​ನ 600 ಕೋಟಿ ರೂ.ನೆರವು ಸೇರಿ ಬೃಹತ್ ಜಲಾನಯನ ಯೋಜನೆ ಜಾರಿಯಾಗುತ್ತಿದೆ. ಇದರ ಹಣ ಬಳಸಿ ಜಮೀನಿನ ಬದುಗಳಲ್ಲಿ ಬಿದಿರು ಬೆಳೆಗೆ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಅಧ್ಯಯನ:ಮಹಾರಾಷ್ಟ್ರ ಸರ್ಕಾರ ಬಿದಿರು ಮಂಡಳಿ ರಚಿಸಿ ಕಾರ್ಯೋನ್ಮುಖವಾಗಿದೆ. ನಾಗಪುರದಲ್ಲಿ ಕೇಂದ್ರ ಕಚೇರಿ ಇದೆ. ಬಿದಿರು ಬೆಳೆ ಪ್ರದೇಶ ಹೆಚ್ಚಿಸುವ ಕೆಲಸ ಆರಂಭಿಸಿದೆ. ಅಲ್ಲಿನ ಮಂಡಳಿ ಕಾರ್ಯ ನಿರ್ವಹಣೆ , ಮಾರುಕಟ್ಟೆ ಹೇಗಿದೆ, ರೈತರ ಸ್ಪಂದನೆ ಯಾವ ರೀತಿಯಲ್ಲಿದೆ ಎಂಬುದರ ಬಗ್ಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಮೇ 24-25 ರಂದು ಅಧಿಕಾರಿಗಳ ತಂಡದೊಂದಿಗೆ ತೆರಳಿ ಅಧ್ಯಯನ ಮಾಡಲಿದ್ದಾರೆ.
ಭೀಮ ಬಿದಿರು:ಭೀಮ ಹೆಸರಿನ ಬಿದಿರು ಬಂದಿದೆ. ವೇಗವಾಗಿ ಫಲ ನೀಡುವುದರೊಂದಿಗೆ, ಉಳಿದ ಬಿದಿರಿಗಿಂತ ಹೆಚ್ಚು ಉಪಯೋಗಿಯಾಗಿದೆ. ದಿನಕ್ಕೆ ಒಂದೂವರೆ ಅಡಿ ಎತ್ತರ ಬೆಳೆಯುತ್ತದೆ. ಬೇರೆ ಬಿದಿರು ಹೂ ಬಂದಾಗ ಸತ್ತು ಹೋದರೆ ಭೀಮಾ ಬಿದಿರು ಬಾಡುವುದಿಲ್ಲ. ಆದ್ದರಿಂದ ಭೀಮ ಬಿದಿರನ್ನೇ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದಕ್ಕೆ ಸರ್ಕಾರ ಉದ್ದೇಶಿಸಿದೆ. ಬಿದಿರು ಬೆಳೆಗೆ ಹೆಚ್ಚಿನ ನೀರು ಬೇಕಾಗುತ್ತದೆ. ಆದ್ದರಿಂದ ಹನಿ ನೀರಾವರಿ ಪದ್ಧತಿ ಅಳವಡಿಸಲಾಗುತ್ತದೆ.
ಹುಕ್ಕೇರಿಯಲ್ಲಿ ಬಿದಿರು ಕೃಷಿ:ಅರಣ್ಯ ಸಚಿವ ಉಮೇಶ್ ಕತ್ತಿ ಇತ್ತೀಚೆಗೆ ಅಧಿಕಾರಿಗಳ ತಂಡದ ಜತೆಗೆ ತಮಿಳುನಾಡಿನ ಹೊಸೂರಿಗೆ ಹೋಗಿ ಅಲ್ಲಿರುವ ಸಂಸ್ಥೆಯಲ್ಲಿ ಬಿದಿರು ಕೃಷಿಯ ಬಗ್ಗೆ ಅಧ್ಯಯನ ನಡೆಸಿದ್ದಾರೆ. ತಮ್ಮ ಕ್ಷೇತ್ರ ಹುಕ್ಕೇರಿಯಲ್ಲಿ ಸರ್ಕಾರದ ಬೀಳು ಭೂಮಿ 57 ಸಾವಿರ ಎಕರೆ ಇದ್ದು ಅಲ್ಲಿ ಭೀಮ ಬಿದಿರು ಬೆಳೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
*ಸಕ್ಕರೆ ಕಾರ್ಖಾನೆಗಳಲ್ಲಿ ಬಿದಿರಿನಿಂದ ವರ್ಷ ಪೂರ್ತಿ ವಿದ್ಯುತ್ ಉತ್ಪಾದಿಸಲು ಅನುಕೂಲವಾಗುತ್ತದೆ
*ಕಲ್ಲಿದ್ದಲಿನ ಕೊರತೆ ವ್ಯಾಪಕವಾಗಿದೆ. ಸಿಮೆಂಟ್ ಕಾರ್ಖಾನೆಗಳಲ್ಲಿ ಬಿದಿರನ್ನು ಪರ್ಯಾಯ ಇಂಧನವಾಗಿಯೂ ಬಳಸಬಹುದಾಗಿದೆ
*ಬಿದಿರಿನಲ್ಲಿ ಸಕ್ಕರೆ ಅಂಶ ಸಹ ಇರುವುದರಿಂದ ಎಥೆನಾಲ್ ತಯಾರಿಕೆಗೂ ಅನುಕೂಲವಾಗಿದೆ
*ಖಾಸಗಿ ಪೆಟ್ರೋಲಿಯಂ ಸಂಸ್ಥೆಯೊಂದು ಬಿದಿರಿನಿಂದ ಪೆಟ್ರೋಲ್ ತಯಾರಿಕೆಯ ಪ್ರಯೋಗಾಲಯವನ್ನು 1500 ಕೋಟಿ ರೂ.ಗಳ ಬಂಡವಾಳದೊಂದಿಗೆ ಸ್ಥಾಪಿಸಲು ಸಿದ್ಧತೆ ನಡೆಸಿದೆ. ಪ್ರಯೋಗವೇನಾದರೂ ಯಶಸ್ವಿಯಾದರೆ ಪೆಟ್ರೋಲಿಯಂನಲ್ಲಿ ಸ್ವಾವಲಂಬಿಯಾಗಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶ ಸಾಕಾರವಾಗಲಿದೆ.
*ಚೀನಾದಲ್ಲಿ ಬಿದಿರಿನಿಂದ ಬಟ್ಟೆಗೆ ಬೇಕಾಗುವ ನೂಲು ತೆಗೆಯುವ ಪ್ರಯತ್ನ ನಡೆದಿವೆ
*ಪೀಠೋಪಕರಣಗಳ ತಯಾರಿಗೂ ಬಳಕೆ
*ಉಷ್ಣಾಂಶ ಹೆಚ್ಚಳ ನಿಯಂತ್ರಿಸುತ್ತದೆ
ಆಕ್ಸಿಜನ್ ಬಿಡುಗಡೆ:ಒಂದು ಬಿದಿರಿನ ಗಿಡ ಒಬ್ಬ ಮನುಷ್ಯನಿಗೆ ಬೇಕಾಗುವಷ್ಟು ಅಂದರೆ 300 ಕೆಜಿ ಆಕ್ಸಿಜನ್ ಬಿಡುಗಡೆ ಮಾಡುತ್ತದೆ. ಪರಿಸರದಲ್ಲಿರುವ ಕಾರ್ಬನ್ ಡೈಆಕ್ಸೈಡನ್ನು ಹೀರುತ್ತದೆ.
ಜಲಾನಯನ ಯೋಜನೆಯಲ್ಲಿ ಬಿದಿರು ಬೆಳೆಯಲು ನಿರ್ಧರಿಸಲಾಗಿದೆ. ಅದಕ್ಕಾಗಿ ಮಂಡಳಿ ರಚನೆ ಮಾಡಬೇಕಾಗಿದೆ. ಮಹಾರಾಷ್ಟ್ರದಲ್ಲಿ ಮಂಡಳಿ ರಚನೆ ಮಾಡಿದ್ದು ಮೇ 24-25ರಂದು ಅಲ್ಲಿಗೆ ಹೋಗಿ ಅಧ್ಯಯನ ಮಾಡಲಾಗುತ್ತದೆ. ರೈತರ ಆದಾಯ ದ್ವಿಗುಣಕ್ಕೂ ಇದರಿಂದ ಸಹಕಾರಿಯಾಗಲಿದೆ.
|ಬಿ.ಸಿ. ಪಾಟೀಲ್ಕೃಷಿ ಸಚಿವ
ಉಪ ಉತ್ಪನ್ನಗಳು:ಕೊಳಲು, ಪೆನ್ ಸ್ಟಾ್ಯಂಡ್, ದಿಂಬು, ಶೂ, ಪೇಪರ್, ಚಿಪ್ಸ್, ಟೀ, ಬಿಯರ್, ಉಪು್ಪ, ಸ್ಟೀಕ್, ಹೆಲ್ಮೆಟ್, ಬೈಸಿಕಲ್, ಫೋನ್ ಕೇಸ್, ಅಲಂಕಾರಿಕ ಆಭರಣಗಳು, ಬ್ರಷ್, ಮೌಸ್, ದಿಂಬು, ನೆಲಹಾಸು, ಮನೆ ಗೋಡೆಗಳ ಅಲಂಕಾರ, ಕಾರುಗಳ ಸ್ಟೇರಿಂಗ್.
ಎಷ್ಟು ಲಾಭ?:ಜಮೀನಿನ ಬದುಗಳಲ್ಲಿ ಬೆಳೆದರೂ 40 ಟನ್ ಉತ್ಪಾದನೆ ಮಾಡಬಹು ದಾಗಿದೆ. ಪ್ರತಿ ಟನ್​ಗೆ ಕನಿಷ್ಠ 3 ರಿಂದ 4 ಸಾವಿರ ರೂ.ಸಿಗುತ್ತದೆ.
ಉದ್ಯೋಗ ಅವಕಾಶ:ಉತ್ಪನ್ನಗಳ ತಯಾರಿಕಾ ಘಟಕಗಳ ಸ್ಥಾಪನೆ, ಮಾರಾಟ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಗಳ ಸೃಷ್ಟಿ ಜತೆಗೆ ಆರ್ಥಿಕ ಚಟುವಟಿಕೆಗಳು ನಡೆಯುತ್ತವೆ.
ಮಲಗಿಕೊಂಡೇ ಓದಿ 580 ಅಂಕ ಪಡೆದ ಶ್ರಾವ್ಯಾ!; ಕರುಳು ಕಾಯಿಲೆ ನಡುವೆಯೂ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
