ಮಂಡ್ಯ:ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಿರುವ ‘ಗಿಡ ನೆಡು ಮರ ಮಾಡು’ ಸವಾಲನ್ನು ಭಾರತದ ಪರಿಸರ ಅಧ್ಯಯನ ಮಾಡಲು ಬಂದಿರುವ ಸ್ವಿಟ್ಜರ್ಲ್ಯಾಂಡ್ ನಾಗರಿಕರ ಶನಿವಾರ ಸ್ವೀಕರಿಸಿದರು.ತಾಲೂಕಿನ ಹನಿಯಂಬಾಡಿ ಗ್ರಾಮದಲ್ಲಿ ಡಾನ್ ಬಾಸ್ಕೋ ಸಂಸ್ಥೆ ವತಿಯಿಂದ ಸಸಿ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಭಾಗವಹಿಸಿದ ಸ್ವಿಟ್ಜರ್ಲ್ಯಾಂಡ್‌ನ ಮರ್ಲಿನ್ ಇರ್ಲಿನ್ ಹಾಗೂ ಹೆಲನ್ ಅವರು ಗಿಡ ನೆಡು ಮರ ಮಾಡು ಸವಾಲು ಸ್ವೀಕರಿಸಿದರು. ಮಾತ್ರವಲ್ಲದೆ ಗ್ರಾಮದಲ್ಲಿ ಗಿಡ ನೆಟ್ಟು ಅದರ ಮುಂದಿನ ಪೋಷಣೆಯ ಜವಾಬ್ದಾರಿಯನ್ನು ಡಾನ್ ಬಾಸ್ಕೋ ಸಂಸ್ಥೆಯ ಕಾರ್ಯಕರ್ತರಿಗೆ ವಹಿಸಿದರು.ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮತ್ತು ನೆಲದಲ್ಲಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ಮಾತನಾಡಿ, ಜಾಗತಿಕ ತಾಪ ಕಡಿಮೆ ಮಾಡಲು ಗಿಡ ನೆಟ್ಟು ಮರ ಮಾಡುವುದು ತುಂಬ ಅವಶ್ಯಕವಾಗಿದೆ. ಡಾನ್ ಬಾಸ್ಕೋ ಸಂಸ್ಥೆ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ಅತಿ ಹೆಚ್ಚು ಆಕ್ಸಿಜನ್ ನೀಡುವ ಮಹಾಗನಿ ಸಸಿಯನ್ನು ವಿತರಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ನೆಟ್ಟು ಹಾಗೂ ರೈತರಿಗೂ ವಿತರಿಸಿ ಅದನ್ನು ಪೋಷಣೆ ಮಾಡಬೇಕೆನ್ನುವ ಜವಾಬ್ದಾರಿಯನ್ನು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.ಕಳೆದ ಆರು ವರ್ಷದಿಂದ ಸಂಸ್ಥೆಯ ಈವರೆಗೆ ಸುಮಾರು 27 ಸಾವಿರ ಸಸಿ ವಿತರಿಸಿದ್ದಾರೆ. ಹೊಳಲು, ಮಂಗಲ, ತಿಮ್ಮನ ಹೊಸೂರು ಮಾರಸಿಂಗನಹಳ್ಳಿ, ಲೋಕಸರ, ಹೊಸಬೂದನೂರು, ಸಂತೆಕಸಲಗೆರೆ, ಕಾರಸವಾಡಿ ಸೇರಿದಂತೆ ಹಲವು ಗ್ರಾಮದಲ್ಲಿ ಸಸಿ ನೆಡುವ ಮತ್ತು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಮುಂದೆ ಇದೇ ರೀತಿ ರೈತರಿಗೆ ಉಚಿತವಾಗಿ ಸಸಿ ವಿತರಿಸುತ್ತಾರೆ. ಇದರ ಸದುಪಯೋಗವನ್ನು ಜಿಲ್ಲೆಯ ಜನತೆ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್, ಮಾಜಿ ಸದಸ್ಯ ಸತೀಶ್, ಡಾನ್ ಬಾಸ್ಕೋ ಸಂಸ್ಥೆಯ ಫಾದರ್ ಪೀಟರ್, ನಾಗರಾಜು, ರಾಧಿಕಾ, ಆಶಾ ಕಾರ್ಯಕರ್ತೆ ಸರಸ್ವತಿ, ಪ್ರಗತಿಪರ ರೈತ ತಮ್ಮಣ್ಣ, ಮುಖಂಡರಾದ ನಾಗರಾಜು, ಶ್ರೀನಿವಾಸ್, ಸೋಮಣ್ಣ ಇತರರಿದ್ದರು. ಇದೇ ಸಂದರ್ಭದಲ್ಲಿ ರೈತರಿಗೆ ಸಸಿಯನ್ನು ವಿತರಿಸಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 2 =
Remember me
