ಬೆಂಗಳೂರು:ಅರಣ್ಯ ಸಂರಕ್ಷಿಸುವ ಹಾಗೂ ಬೆಳೆಸುವ ಉದ್ದೇಶದಿಂದ ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿ ಕೋರ್ಸ್​ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಗಿಡ ನೆಟ್ಟು ಪಾಲನೆ – ಪೋಷಣೆ ಮಾಡುವುದನ್ನು ಕಡ್ಡಾಯ ಮಾಡಿದೆ. ಪರಿಣಾಮ, ವಿವಿ ಆವರಣ ಮತ್ತಷ್ಟು ಹಚ್ಚಹಸಿರಿನಿಂದ ಕಂಗೊಳಿಸುವ ಕಾಲ ಹತ್ತಿರವಾಗಿದೆ.
ಬೆಂವಿವಿಯಲ್ಲಿ 45ಕ್ಕೂ ಹೆಚ್ಚಿನ ಸ್ನಾಕೋತ್ತರ ಪದವಿ ವಿಭಾಗಗಳಿವೆ. ಇದರಲ್ಲಿ ಸುಮಾರು 2,500 ವಿದ್ಯಾರ್ಥಿಗಳು ಪ್ರತಿವರ್ಷ ಪ್ರವೇಶ ಪಡೆಯುತ್ತಾರೆ. ಈ ವೇಳೆ ಗಿಡ ನೀಡಿ ಬೆಳೆಸಲು ಸೂಚಿಸಬೇಕು ಎಂದು ಸಿಂಡಿಕೇಟ್ ಸಭೆಯಲ್ಲಿ ಕೆಲವು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಸಭೆ ಸಮ್ಮತಿ ಸೂಚಿಸಿದ್ದರಿಂದ 2020-21ನೇ ಸಾಲಿನಿಂದಲೇ ಜಾರಿಗೆ ತರಲು ವಿವಿ ತೀರ್ವನಿಸಿದೆ.
1,200 ಎಕರೆ ಪ್ರದೇಶ ಹೊಂದಿದ್ದ ಜ್ಞಾನಭಾರತಿ ಆವರಣ, ಒತ್ತುವರಿ ನಂತರ 945 ಎಕರೆ ಪ್ರದೇಶಕ್ಕೆ ಇಳಿಕೆಯಾಗಿದೆ. ವಿವಿಯಲ್ಲಿರುವ ‘ಜೈವಿಕ ಉದ್ಯಾನವನ’ ಸಾರ್ವಜನಿಕರ ಕಸದ ತೊಟ್ಟಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಿಸುವ ಉದ್ದೇಶದಿಂದ ಗಿಡ ನೆಡುವುದು ಕಡ್ಡಾಯ ಮಾಡಲಾಗುತ್ತಿದೆ. ಗಿಡವನ್ನು ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಬೆಂವಿವಿ ಖರೀದಿಸಿ ವಿದ್ಯಾರ್ಥಿಗಳಿಗೆ ನೀಡಲಿದೆ.
ಗಿಡ ನೆಟ್ಟು ಸುಮ್ಮನಾದಲ್ಲಿ ವಿದ್ಯಾರ್ಥಿಗಳ ಕರ್ತವ್ಯ ಮುಗಿಯುವುದಿಲ್ಲ. ಆಗಾಗ ಅದರ ಪಾಲನೆ- ಪೋಷಣೆ ಕೂಡ ಮಾಡಬೇಕು. ಹಾಲಿ ಕ್ಯಾಂಪಸ್​ನಲ್ಲಿ ನೀಲಗಿರಿ, ಹೊಂಗೆ, ತೇಗ, ಶ್ರೀಗಂಧ, ಹುಣಸೆಹಣ್ಣಿನ ಮರಗಳಿವೆ. ಇದರ ಹೊರತಾಗಿ ನೇರಳೆ, ಮಾವಿನಹಣ್ಣಿನ ಗಿಡಗಳನ್ನು ನೆಡಲಿದೆ. ವಿವಿಯಲ್ಲಿರುವ ಸಾವಿರಾರು ಪಕ್ಷಿ ಸಂತತಿಯನ್ನು ಕಾಪಾಡುವ ಉದ್ದೇಶದಿಂದ ಹೆಚ್ಚು ಹಣ್ಣಿನ ಗಿಡಗಳನ್ನು ನೆಡಲು ತೀರ್ವನಿಸಲಾಗಿದೆ.ಇದನ್ನೂ ಓದಿ:ಪರಿಷತ್ ಚುನಾವಣೆಗೆ ಬಿಜೆಪಿ ಪಟ್ಟಿ ಬಿಡುಗಡೆ: ಮೇಲುಗೈ ಸಾಧಿಸಿದ ಸಿಎಂ ಬಿಎಸ್​ವೈ
ಸಂಸ್ಕರಿದ ನೀರಿನ ಬಳಕೆ:ಈ ಗಿಡಗಳ ಬೆಳವಣಿಗೆಗೆ ನೀರಿನ ಅವಶ್ಯಕತೆ ಇದ್ದೇ ಇದೆ. ಇದಕ್ಕಾಗಿ ವಿವಿ ಆವರಣದಲ್ಲಿ ಹರಿಯುವ ವೃಷಭಾವತಿ ನೀರನ್ನು ಸಂಸ್ಕರಿಸಿ ಬಳಸಲು ತೀರ್ವನಿಸಲಾಗಿದೆ. ಜತೆಗೆ ವಿವಿ ಆವರಣವನ್ನು ಪರಿಸರಸ್ನೇಹಿ ಹಾಗೂ ಪ್ರತಿನಿತ್ಯ ವಾಕಿಂಗ್ ಮಾಡುವವರಿಗೂ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ.
ಸಿದ್ಧಾರ್ಥ ವಿವಿ ಮಾದರಿ
ತುಮಕೂರಿನ ಸಿದ್ಧಾರ್ಥ ವಿವಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರವೇಶ ಪಡೆದಾಗ ಗಿಡ ನೆಟ್ಟಿದ್ದರು. ಘಟಿಕೋತ್ಸವದಲ್ಲಿ ನೀಡಲಾಗುವ ಪ್ರಮಾಣಪತ್ರದಲ್ಲಿ ವಿದ್ಯಾರ್ಥಿ ಭಾವಚಿತ್ರದ ಜತೆಗೆ ಅವರು ನೆಟ್ಟ ಗಿಡದ ಫೋಟೋ ಕೂಡ ಮುದ್ರಿಸಿ ನೀಡಲಾಗಿತ್ತು. ‘ಹಸಿರು ಘಟಿಕೋತ್ಸವ’ ಎಂದು ಕರೆಯಲಾಗಿತ್ತು. ಇದಕ್ಕೆ ಉನ್ನತ ಶಿಕ್ಷಣ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿತ್ತು. ಬೆಂವಿವಿ ಈ ಮಾದರಿ ಅನುಸರಿಸಲು ಮುಂದಾಗಿದೆ.
| ದೇವರಾಜ್ ಎಲ್
ಎರಡು ದಶಕ ಹಿಂದೆ ಸರಿದ ಚಿತ್ರರಂಗ: ನೂರು ಕೋಟಿ ಕನಸಿನ ಮಾತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
