ಬೆಂಗಳೂರು: ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿಗೆ ಒಳಗಾದ ದೇಶದ ಮೊದಲ ಕರೊನಾ ಸೋಂಕಿತ ವ್ಯಕ್ತಿ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಕರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ದಕ್ಷಿಣ ದೆಹಲಿಯಲ್ಲಿರುವ 49 ವಯಸ್ಸಿನ ರೋಗಿಗೆ ಪ್ಲಾಸ್ಮಾ ಥೆರಪಿ ನೀಡಲಾಗುತ್ತಿದೆ. ಈ ಚಿಕಿತ್ಸೆ ನೀಡಿದ ಮೇಲೆ ಕರೊನಾ ಪರೀಕ್ಷೆ ಮಾಡಿದ್ದು, ವೈರಸ್ ಇರುವುದು ಪತ್ತೆಯಾಗಿಲ್ಲ. ಇದರಿಂದ ಈ ಚಿಕಿತ್ಸೆ ಪರಿಣಾಮಕಾರಿ ಪ್ರಭಾವ ಬೀರುತ್ತಿರುವುದು ತಿಳಿದು ಬಂದಿದೆ. ಕರ್ನಾಟಕದಲ್ಲೂ ಈ ಚಿಕಿತ್ಸೆಗೆ ಅನುಮತಿ ನೀಡುವಂತೆ ಬೆಂಗಳೂರಿನ ಎಚ್​ಸಿಜಿ ಆಸ್ಪತ್ರೆ ವೈದ್ಯ ಡಾ. ವಿಶಾಲ್ ರಾವ್ ತಂಡ ಕಳುಹಿಸಿದ್ದ ಪ್ರೋಟೋಕಾಲ್​ಗೆ ಅನುಮತಿ ಸಿಕ್ಕಿದೆ.
ಸಂಗ್ರಹಿಸುವುದು ಹೇಗೆ?
ರಕ್ತದಾನದ ಪ್ರಕ್ರಿಯೆಯಂತೆಯೇ ಪ್ಲಾಸ್ಮಾ ದಾನ ಪ್ರಕ್ರಿಯೆ ಇರುತ್ತದೆ. ಪ್ಲಾಸ್ಮಾ ಪಡೆಯಲು 1 ಗಂಟೆ ಬೇಕಾಗುತ್ತದೆ. ಸಣ್ಣ ಉಪಕರಣ ಮೂಲಕ ರಕ್ತಕಣಗಳಿಂದ ಪ್ಲಾಸ್ಮಾ ಬೇರ್ಪಡಿಸಲಾಗುತ್ತದೆ. ಒಬ್ಬ ವ್ಯಕ್ತಿ ವಾರದಲ್ಲಿ 2 ಬಾರಿ ಪ್ಲಾಸ್ಮಾ ದಾನ ಮಾಡಬಹುದಾಗಿದೆ.
ಏನಿದು ಪ್ಲಾಸ್ಮಾ ಥೆರಪಿ?
ಕರೊನಾ ವೈರಸ್​ನಿಂದ ಗುಣಮುಖರಾಗಿರುವ ವ್ಯಕ್ತಿಯ ದೇಹದಲ್ಲಿರುವ ಪ್ಲಾಸ್ಮಾದಲ್ಲಿ ಹೆಚ್ಚು ರೋಗನಿರೋಧಕ ಗುಣವಿರುತ್ತದೆ. ಅಂತಹವರ ದೇಹದಿಂದ ಪ್ಲಾಸ್ಮಾ ಸಂಗ್ರಹಿಸಿ ಅದನ್ನು ಕರೊನಾ ವೈರಸ್​ನಿಂದ ಬಳಲುತ್ತಿರುವವರ ದೇಹಕ್ಕೆ ಕೊಡಲಾಗುತ್ತದೆ. ಅದರಿಂದ ಸೋಂಕಿತ ವ್ಯಕ್ತಿಯಲ್ಲಿನ ರೋಗನಿರೋಧಕ ಶಕ್ತಿ ದುಪ್ಪಟಾಗಿ ವೈರಸ್ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಪ್ಲಾಸ್ಮಾ ಚಿಕಿತ್ಸೆಯಿಂದ 12 ರಿಂದ 14 ಗಂಟೆಯಲ್ಲಿ ವೈರಸ್ ಪ್ರಮಾಣ ಕಡಿಮೆಯಾಗುತ್ತದೆ.
ದೇಹದಲ್ಲಿ ಕಾರ್ಯನಿರ್ವಹಣೆ ಹೇಗೆ?
ಮನುಷ್ಯನ ದೇಹದಲ್ಲಿರುವ ರಕ್ತದಲ್ಲಿ ಪ್ಲಾಸ್ಮಾ ಕಣಗಳಿರುತ್ತವೆ. ರಕ್ತದೊಳಗಿನ ಜೀವರಸವೇ ಪ್ಲಾಸ್ಮಾ. ಇದರಲ್ಲಿ ನೀರಿನ ಅಂಶ ಮತ್ತು ಉಪ್ಪಿನ ಅಂಶ ಸೇರಿರುತ್ತದೆ. ರಕ್ತದೊಳಗಿನ ಪ್ಲಾಸ್ಮಾ ಕಣಗಳು ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ದೇಹದ ಎಲ್ಲ ಭಾಗಗಳನ್ನೂ ತಲುಪುತ್ತವೆ. ಜೀವಕೋಶಗಳು ತಮ್ಮ ತ್ಯಾಜ್ಯ ಉತ್ಪನ್ನಗಳನ್ನು ಪ್ಲಾಸ್ಮಾಕ್ಕೆ ಹಾಕುತ್ತವೆ. ಆ ತ್ಯಾಜ್ಯವನ್ನು ದೇಹದಿಂದ ತೆಗೆದುಹಾಕಲು ಪ್ಲಾಸ್ಮಾ ಸಹಾಯ ಮಾಡುತ್ತದೆ. ಮನುಷ್ಯನನ್ನು ಕಾಡುವ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಪ್ಲಾಸ್ಮಾ ಚಿಕಿತ್ಸೆ ನಿರ್ಣಾಯಕ. ಪ್ಲಾಸ್ಮಾದಲ್ಲಿ ಪ್ರತಿಕಾಯಗಳು, ಹೆಪ್ಪುಗಟ್ಟುವ ಅಂಶ ಮತ್ತು ಅಲ್ಬುಮಿನ್ ಹಾಗೂ ಫೈಬ್ರಿನೊಜೆನ್ ಎನ್ನುವ ಪೋ›ಟೀನ್​ಗಳು ಕೂಡ ಸೇರಿವೆ. ಪ್ಲಾಸ್ಮಾದಲ್ಲಿರುವ ಪೋ›ಟೀನ್​ಗಳು ಮತ್ತು ಪ್ರತಿಕಾಯಗಳನ್ನ ಅಪರೂಪದ ಹಾಗೂ ದೀರ್ಘಕಾಲದ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ. ರಕ್ತ ಕಣಗಳನ್ನು ಬೇರ್ಪಡಿಸಿದಾಗ ಸಿಗುವುದೇ ಪ್ಲಾಸ್ಮಾ. ಒಬ್ಬ ವ್ಯಕ್ತಿಯಿಂದ ತೆಗೆದ ಪ್ಲಾಸ್ಮಾದಿಂದ 3-5 ಮಂದಿಗೆ ಚಿಕಿತ್ಸೆ ನೀಡಬಹುದಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರಿ ನಿವಾಸದ ಬಳಿ ಕರ್ತವ್ಯದಲ್ಲಿದ್ದ ಇಬ್ಬರು ಮಹಿಳಾ ಪೊಲೀಸ್​ ಸಿಬ್ಬಂದಿಗೆ ಕರೊನಾ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 17 =
Remember me
