ಸದಲಗಾ (ಬೆಳಗಾವಿ):ಹಳ್ಳಿಗಳಲ್ಲಿ ಮುಖಂಡರ ಹುಟ್ಟುಹಬ್ಬದ ನಿಮಿತ್ತ ಕ್ರಿಕೆಟ್ ಪಂದ್ಯಗಳ ಆಯೋಜನೆ ಸರ್ವೆಸಾಮಾನ್ಯ. ಆದರೆ ಮಹಾರಾಷ್ಟ್ರದ ಕೊಲ್ಲಾಪುರ ಸಮೀಪದ ಗವಶಿ ಪಾಟೀಲವಾಡಿ ಗ್ರಾಮದಲ್ಲಿ ಈಚೆಗೆ ಮುಖಂಡನೊಬ್ಬ ತನ್ನ ಮಗನ ಹುಟ್ಟುಹಬ್ಬ ನಿಮಿತ್ತ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಿಯರ್ ಗರ್ಲ್ಸ್ ಕುಣಿಸಿ ಎಡವಟ್ಟು ಮಾಡಿಕೊಂಡಿದ್ದಾನೆ.
ಕರೊನಾ ಬಿಕ್ಕಟ್ಟಿನ ಸಮಯದಲ್ಲೂ ಸರ್ಕಾರದಿಂದ ಅನುಮತಿ ಪಡೆಯದೆ ರಘುನಾಥ ಪಾಟೀಲ ಎಂಬಾತ ಚಿಯರ್ ಗರ್ಲ್ಸ್ ಕರೆಯಿಸಿದ್ದ. ಆಟ ಆಡಬೇಕಿದ್ದ ಆಟಗಾರರು ಹಾಗೂ ನೋಡಬೇಕಿದ್ದ ಪ್ರೇಕ್ಷಕರು ಎಲ್ಲ ಸೇರಿ ಚಿಯರ್ ಗರ್ಲ್ಸ್ ಜತೆ ಡಾನ್ಸ್ ಮಾಡತೊಡಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರನ್ನು ಕಂಡು ಕುಣಿತದಲ್ಲಿ ಮೈಮರೆತ ಪಡ್ಡೆಗಳು ಕಾಲ್ಕಿತ್ತಿದ್ದಾರೆ. ತಲೆಮರೆಸಿಕೊಂಡಿರುವ ಆಯೋಜಕರು ಹಾಗೂ ಚಿಯರ್ ಗರ್ಲ್ಸ್ ವಿರುದ್ಧ ರಾಧಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − two =
Remember me
