ಅಕ್ಕಿಆಲೂರ (ಹಾವೇರಿ):‘ವೃದ್ಧಾಪ್ಯ ಸಮೀಪಿಸುತ್ತಿದೆ, ನಮ್ಮ ಜಾತಿಯಲ್ಲಿ ಕನ್ಯೆ ಸಿಗುತ್ತಿಲ್ಲ, ನನಗೆ ನೀವೆ ಮದುವೆ ಮಾಡಿಸಬೇಕು’ ಎಂದು 63 ವರ್ಷದ ವೃದ್ಧರೊಬ್ಬರು ಶುಕ್ರವಾರ ನರೇಗಲ್ಲ ಗ್ರಾಪಂಗೆ ಮನವಿಪತ್ರ ಸಲ್ಲಿಸಿದ್ದಾರೆ!
ನರೇಗಲ್ಲದ ಗ್ರಾಮದೇವತೆ ಪೂಜಾರಿ ದ್ಯಾಮಣ್ಣ ಕಮ್ಮಾರ ಮನವಿ ನೀಡಿದವ. 37 ವರ್ಷದಿಂದ ಸ್ವಜಾತಿಯ ಕನ್ಯೆಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಇದುವರೆಗೂ ಕನ್ಯೆ ಸಿಕ್ಕಿಲ್ಲ. ಬೇಸರಗೊಂಡ ದ್ಯಾಮಣ್ಣ, ‘ನಾನು ಹಲವು ವರ್ಷಗಳಿಂದ ಒಂಟಿಯಾಗಿ ಬದುಕುತ್ತಿದ್ದೇನೆ. ದಯವಿಟ್ಟು ಬೇಗ ಕನ್ಯೆ ಹುಡುಕಿ ಮದುವೆ ಮಾಡಿಕೊಡಿ’ ಎಂದು ಗ್ರಾಪಂಗೆ ಕೋರಿದ್ದಾರೆ.
ಪ್ರತಿಕ್ರಿಯಿಸಿದ ಪಿಡಿಒ ಉಮೇಶ ಹುಕ್ಕೇರಿ, ನಮ್ಮ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಇದೆಯೇ ಎಂಬ ಬಗ್ಗೆ ಪರಿಶೀಲಿಸಿ, ಮದುವೆ ಮಾಡಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − twelve =
Remember me
