ಬೆಂಗಳೂರು:2020 ನಮಗೆ ಕಲಿಸಿದ ಪ್ರಮುಖ ಪಾಠಗಳಲ್ಲಿ ಆರೋಗ್ಯಕ್ಕೆ ಸೂಕ್ತ ಮಹತ್ವ ನೀಡಬೇಕು ಎಂಬುದೂ ಒಂದು. ಇನ್ನು ಆರೋಗ್ಯ ನೋಡಿಕೊಳ್ಳುವ ವಿಷಯ ಬಂದರೆ ಅದಕ್ಕಾಗಿ ಆಗುವ ಖರ್ಚಿನ ಬಗ್ಗೆಯೂ ಯೋಚಿಸಬೇಕು. ಈ ದೃಷ್ಟಿಯಿಂದ ದುಂದುವೆಚ್ಚಗಳನ್ನು ಕಡಿಮೆ ಮಾಡಿ ತುರ್ತು ವೈದ್ಯಕೀಯ ಅಗತ್ಯಕ್ಕೆಂದೇ ಹಣ ಜೋಡಿಸಿಡುವ ಅಭ್ಯಾಸ ಒಳ್ಳೆಯದು. ಜೊತೆಗೆ ನಮ್ಮ ಆಪತ್ಕಾಲಕ್ಕೆ ಒದಗುವ ಆರೋಗ್ಯ ವಿಮೆ ಮಾಡಿಸುವುದು ಉಪಯುಕ್ತ.
ವರ್ಷಕ್ಕಿಷ್ಟು ಎಂದು ಸಣ್ಣ ಮೊತ್ತದ ಹಣವನ್ನು ಕಟ್ಟಿಸಿಕೊಂಡು ಅನಾರೋಗ್ಯ ಪರಿಸ್ಥಿತಿಗಳುಂಟಾದಾಗ ವಿಮಾದಾರರ ಆಸ್ಪತ್ರೆ ಖರ್ಚಿಗೆ ದೊಡ್ಡ ಪ್ರಮಾಣದ ಹಣ ಒದಗಿಸುವ ಉಪಯುಕ್ತ ವ್ಯವಸ್ಥೆ ಈ ಆರೋಗ್ಯ ವಿಮೆ. ಉತ್ತಮ ಆರೋಗ್ಯ ವಿಮೆ ಪಾಲಿಸಿ ಹೊಂದಿದ್ದರೆ ತುರ್ತು ಪರಿಸ್ಥಿತಿಯಲ್ಲಿ ಉತ್ತಮ ಆಸ್ಪತ್ರೆಯಲ್ಲಿ ದುಡ್ಡಿಗಾಗಿ ಪರದಾಡದೆ ಚಿಕಿತ್ಸೆ ಪಡೆಯಬಹುದು.ಎಲ್ಲ ವಸ್ತುಗಳಿಗೂ ಇರುವಂತೆ ಹಣಕಾಸು ಮಾರುಕಟ್ಟೆಯಲ್ಲಿ ಆರೋಗ್ಯ ವಿಮೆಗೂ ತುಂಬಾ ಆಯ್ಕೆಗಳಿವೆ. ಹಲವಾರು ಕಂಪನಿಗಳು ಬೇರೆ ಬೇರೆ ಹೆಸರಿನಲ್ಲಿ ಹಲವು ಪ್ಲ್ಯಾನ್​ಗಳನ್ನು ಬಿಟ್ಟಿದ್ದಾರೆ. ಹೀಗಿರುವಾಗ ನಿಮ್ಮ ಅವಶ್ಯಕತೆಗೆ ಸೂಕ್ತವಾದ ಆರೋಗ್ಯ ವಿಮೆ ಪಾಲಿಸಿಯನ್ನು ಕೊಳ್ಳುವುದಕ್ಕೆ ಈ ಕೆಳಗಿನ ಅಂಶಗಳ ಬಗ್ಗೆ ಗಮನವಿರಲಿ….
1. ಯಾವುದೇ ವಿಮೆ ಪಾಲಿಸಿ ಕೊಳ್ಳುವಾಗ ನೀವು ಮೊದಲು ಪರಿಗಣಿಸಬೇಕಾದ ವಿಷಯ ಅಂದರೆ ‘ಸಮ್ ಅಶ್ಯೂರ್ಡ್’ ಎಷ್ಟು ಎಂಬುದು. ಇದು ವಿಮಾ ಕಂಪನಿಯು ನಿಮಗೆ ವೈದ್ಯಕೀಯ ಶುಶ್ರೂಷೆಯ ಅಗತ್ಯ ಎದುರಾದಲ್ಲಿ ನೀಡಲಿರುವ ಒಟ್ಟು ಹಣದ ಮೊತ್ತವನ್ನು ಸೂಚಿಸುತ್ತದೆ. ಇದಕ್ಕೆ ಮೀರಿದ ಆಸ್ಪತ್ರೆಯ ಖರ್ಚನ್ನು ಕಂಪನಿಯು ಭರಿಸುವುದಿಲ್ಲ. ವೈದ್ಯಕೀಯ ವೆಚ್ಚಗಳು ದುಬಾರಿಯಾಗಿರುವ ಈ ಕಾಲದಲ್ಲಿ ಹೆಚ್ಚಿನ ಸಮ್​ ಅಶ್ಯೂರ್ಡ್ ಇದ್ದಷ್ಟೂ ಒಳ್ಳೆಯದು. ನಿಮ್ಮ ಜೀವನಶೈಲಿಗೆ ಅನುಗುಣವಾಗಿ ಯಾವ ದರ್ಜೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿಚ್ಛಿಸುವಿರಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ಇದನ್ನು ಆಯ್ಕೆ ಮಾಡಿಕೊಳ್ಳಬೇಕು.
2. ಪಾಲಿಸಿಯ ಕವರೇಜ್ ಮತ್ತೊಂದು ನಿರ್ಣಾಯಕ ಅಂಶ. ವಿಮಾ ಕಂಪನಿಗಳು ಬೇರೆ ಬೇರೆ ಅಗತ್ಯಗಳಿಗನುಗುಣವಾಗಿ ಬೇರೆಬೇರೆ ಪ್ಲ್ಯಾನ್​ಗಳನ್ನು ರೂಪಿಸಿರುತ್ತವೆ. ಒಬ್ಬನೇ ವ್ಯಕ್ತಿಗಾದರೆ ಒಂದು ಪ್ಲ್ಯಾನ್ ನೀಡುತ್ತಾರೆ, ಅದೇ ಇಡೀ ಕುಟುಂಬಕ್ಕಾದರೆ ಬೇರೆಯದೇ ಪ್ಲ್ಯಾನ್ ಇರುತ್ತದೆ. ಮಹಿಳೆಯರಿಗಾಗಿ ಮತ್ತು ಹಿರಿಯ ನಾಗರಿಕರಿಗಾಗಿ ವಿಶೇಷ ಪಾಲಿಸಿಗಳಿರುತ್ತವೆ. ಹೆಚ್ಚು ಸಾಮಾನ್ಯವಾದ ರೋಗಗಳನ್ನು ಪರಿಗಣಿಸುವ ಪಾಲಿಸಿ ಕೆಲವಾದರೆ ಮಾರಣಾಂತಿಕ ಕಾಯಿಲೆಗಳಿಗಾಗಿ ಪ್ರತ್ಯೇಕ ಪಾಲಿಸಿಗಳೇ ಇರುತ್ತವೆ. ಹೀಗೆ ಲಭ್ಯವಿರುವ ಪ್ಲ್ಯಾನ್​ಗಳಲ್ಲಿ ನಿಮಗೆ ಯಾವುದು ಸೂಕ್ತ ಎಂದು ನಿರ್ಧರಿಸುವ ಅಗತ್ಯವಿದೆ.
3. ಜೊತೆಗೆ ನೀವು ಕಟ್ಟಬೇಕಾದ ಪ್ರೀಮಿಯಂ ಎಷ್ಟು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಅಗತ್ಯ. ಆರೋಗ್ಯ ವಿಮೆಯ ಪ್ರೀಮಿಯಮನ್ನು ವರ್ಷಕ್ಕೊಮ್ಮೆ ಕಟ್ಟಿಸಿಕೊಳ್ಳುತ್ತಾರೆ ಮತ್ತು ವಿಮೆಯ ಅವಧಿ ಕೂಡ ಒಂದು ವರ್ಷವೇ ಇರುತ್ತದೆ. ಇತ್ತೀಚಿನ ಬೆಳವೆಣಿಗೆಯಲ್ಲಿ ಕೆಲವು ಅರ್ಧವಾರ್ಷಿಕ, ಮಾಸಿಕ ಅಥವಾ ತ್ರೈಮಾಸಿಕ ಪ್ರೀಮಿಯಂ ಪ್ಲ್ಯಾನ್​ಗಳೂ ಲಭ್ಯವಾಗಿವೆ. ಪ್ರೀಮಿಯಂನ ಮೊತ್ತ ನಾವು ಪಡೆಯಲು ಬಯಸುವ ಗರಿಷ್ಠ ಮೊತ್ತಕ್ಕೆ ಅನುಗುಣವಾಗಿರುತ್ತದೆ. ಉದಾಹರಣೆಗೆ ಒಬ್ಬ 35 ವರ್ಷದ ವ್ಯಕ್ತಿ 5 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಪಡೆಯಬೇಕೆಂದರೆ 7 ರಿಂದ 10 ಸಾವಿರ ರೂಪಾಯಿಗಳವರೆಗಿನ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಅದೇ ಆ ವ್ಯಕ್ತಿ ತನ್ನೊಂದಿಗೆ ತನ್ನ ಹೆಂಡತಿ ಇಬ್ಬರು ಮಕ್ಕಳಿಗೆ ಕವರೇಜ್ ಬಯಸಿದರೆ ಪ್ರೀಮಿಯಂನ ಮೊತ್ತ 15 ಸಾವಿರದವರೆಗೆ ಏರಬಹುದು.
4. ವಿಮೆ ತೆಗೆದುಕೊಳ್ಳುವುದೇ ಅಗತ್ಯ ಬಿದ್ದಾಗ ಹಣ ಸಿಗಲಿ ಎಂದಲ್ಲವೇ… ಆದ್ದರಿಂದ ನೀವು ವಿಮೆ ತೆಗೆದುಕೊಳ್ಳವಾಗ ವಿಮಾ ಕಂಪೆನಿಯ ‘ಕ್ಲೇಮ್​ ಸೆಟಲ್​ಮೆಂಟ್​ ರೇಷಿಯೊ’ ಬಗ್ಗೆ ಗಮನಿಸಿ. ಇದು ಆ ಕಂಪನಿಯು ಒಂದು ವರ್ಷದಲ್ಲಿ ತನ್ನ ಪಾಲಿಸಿದಾರರಿಂದ ಎದುರಾಗುವ ಕ್ಲೇಮ್​ಗಳಲ್ಲಿ ಎಷ್ಟನ್ನು ಇತ್ಯರ್ಥ ಮಾಡಿದೆ ಎಂಬುದನ್ನು ತಿಳಿಸುವ ಅಳತೆಗೋಲು. ಈ ರೇಷಿಯೊ ಹೆಚ್ಚಿದ್ದಷ್ಟೂ ಒಳ್ಳೆಯದು.
5. ಹೆಚ್ಚು ಆಸ್ಪತ್ರೆಗಳಲ್ಲಿ ಕ್ಯಾಷ್​ಲೆಸ್ ಹಾಸ್ಪಿಟಲೈಸೇಷನ್ ಸೌಲಭ್ಯ ಇರುವುದರ ಬಗ್ಗೆ ಕೂಡ ಗಮನ ಅಗತ್ಯ. ಈ ಸೌಲಭ್ಯದಿಂದ ದಿಢೀರಾಗಿ ಆಸ್ಪತ್ರೆಗೆ ಸೇರಬೇಕಾದರೆ ಕೈಯಿಂದ ದುಡ್ಡು ಖರ್ಚು ಮಾಡಬೇಕಾಗಿಲ್ಲ. ನಿಮ್ಮ ಆರೋಗ್ಯ ವಿಮೆ ಪಾಲಿಸಿ ವಿವರ ನೀಡಿದರೆ ಸಾಕು, ಆಸ್ಪತ್ರೆಯವರು ವಿಮಾ ಕಂಪನಿಗೆ ಮಾಹಿತಿ ಕಳುಹಿಸಿ ತಕ್ಷಣ ಅಡ್ಮಿಟ್ ಮಾಡಿಕೊಳ್ಳುತ್ತಾರೆ. ಕಂಪನಿಯು ಎಷ್ಟು ಮತ್ತು ಯಾವ ಆಸ್ಪತ್ರೆಗಳಲ್ಲಿ ಈ ರೀತಿಯ ಸೌಲಭ್ಯ ನೀಡುತ್ತದೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ.
ಫೆ. 8ರಿಂದ ವಾಟ್ಸ್​ಆ್ಯಪ್​ ಸೇವೆ ಸ್ಥಗಿತವಾಗತ್ತಾ? ಇಲ್ಲಿದೆ ಮಾಹಿತಿ..

ಕರೊನಾ ಲಾಕ್​ಡೌನ್​ ಸಮಯದಲ್ಲಿ ಇಡೀ ಜಗತ್ತಿನ ಜನರು ಹೆಚ್ಚು ತಿಂದದ್ದು ಏನು ಗೊತ್ತೆ?

ಸಂಸಾರ ಮಾಡಲು ಗಂಡ ಒಪ್ಪದಿದ್ದರೆ ಏನಾದರೂ ಪರ್ಯಾಯ ಮಾರ್ಗಗಳಿವೆಯೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 18 =
Remember me
