ಬೆಂಗಳೂರು:ರಾಜಕೀಯ ಪಕ್ಷವೆಂದರೆ ಗುಂಪುಗಾರಿಕೆ, ಬಣ ರಾಜಕೀಯ ಸಹಜ ಸಾಮಾನ್ಯ ಸಂಗತಿ. ಈ ವಿಚಾರ ಕಾಂಗ್ರೆಸ್​ನಲ್ಲಿ ಸ್ವಲ್ಪ ಹೆಚ್ಚೇ. ರಾಜ್ಯ ಕಾಂಗ್ರೆಸ್ ವಿಚಾರಕ್ಕೆ ಬಂದರೆ ಇಲ್ಲೂ ದೊಡ್ಡ-ಸಣ್ಣ ಗುಂಪುಗಳು ಹತ್ತು ಹಲವು. ಇದೀಗ ಕೆಪಿಸಿಸಿ ಅಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮದ ಮೂಲಕ ಬಣ ರಾಜಕೀಯದ ಅಬ್ಬರ ತಗ್ಗಿಸುವ ಪ್ರಯತ್ನ ನಡೆದಿದೆ.
ಜುಲೈ 2ರಂದು ‘ಪ್ರತಿಜ್ಞಾ ದಿನ’ ಹೆಸರಿನ ಕಾರ್ಯಕ್ರಮದಲ್ಲಿ ಅಧ್ಯಕ್ಷ-ಕಾರ್ಯಾಧ್ಯಕ್ಷರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಮೂಲಕ ಕಾರ್ಯಕರ್ತರು, ಸಮಾಜಕ್ಕೆ ಸಾಮೂಹಿಕ ನಾಯಕತ್ವ ಬಿಂಬಿಸá-ವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ.
ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್ ಸೇರಿ ಹಲವು ನಾಯಕರು ಕಾರ್ಯಕರ್ತರಿಗೆ ವಿಡಿಯೋ ಸಂದೇಶದ ಮೂಲಕ ಕರೆ ನೀಡಿದ್ದಾರೆ. ಈ ಸಮಾರಂಭದ ಮೂಲಕ ಪಕ್ಷದಲ್ಲಿ ನವಚೈತನ್ಯ ಬರಲಿ ಎಂದು ಹಾರೈಸಿದ್ದಾರೆ. ಈ ನಾಯಕರ ವಿಡಿಯೋ ಸಂದೇಶ ಈಗಾಗಲೇ ದಟ್ಟವಾಗಿ ಹರಿದಾಡುತ್ತಿದೆ. ಜುಲೈ 2ರಂದು ಮುಖ್ಯ 30 ನಾಯಕರ ಸಾಮಾಜಿಕ ಜಾಲತಾಣದ ಪುಟದಲ್ಲಿ ಪದಗ್ರಹಣ ಕಾರ್ಯಕ್ರಮದ ನೇರ ಪ್ರಸಾರವಾಗಲಿದೆ.
ಇದಿಷ್ಟಲ್ಲದೆ ಉದ್ಘಾಟನೆ ದೀಪ ಬೆಳಗಿಸುವಿಕೆಗೆ ಬೇರೆ ರೂಪ ಕೊಡಲಾಗಿದೆ. ಮುಂಚೂಣಿ ಘಟಕಗಳಾದ ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್​ಎಸ್​ಯುುಐ, ಸೇವಾದಳದ ಹಾಲಿ ಮತ್ತು ಮಾಜಿ ಅಧ್ಯಕ್ಷರು ಗುಂಪಾಗಿ ಬಂದು ಒಟ್ಟಿಗೆ ದೀಪ ಬೆಳಗಿಸುವರು. ಬಳಿಕ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಖರ್ಗೆ ದೀಪ ಹಚ್ಚಲಿದ್ದಾರೆ. ಸರಿಸುಮಾರು 40ಕ್ಕೂ ಹೆಚ್ಚು ಮಂದಿ ಅಂದು ದೀಪ ಪ್ರಜ್ವಲಿಸಲಿದ್ದಾರೆ.
ಕಾರ್ಯಕ್ರಮದ ಪೂರ್ವತಯಾರಿಗೆ ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಲಾಗಿದ್ದು, ಪೂರ್ವಭಾವಿ ಸಭೆಗೂ ಆಹ್ವಾನಿಸಿ ಉದ್ದೇಶ ಸ್ಪಷ್ಟಪಡಿಸಿ ಕಳಿಸಿಕೊಡಲಾಗಿದೆ. ಇನ್ನು ಮುಂದೆ ಪಕ್ಷದ ತೀರ್ವನಗಳು ನಾಯಕರ ಮನೆಗಳಲ್ಲಿ ತೀರ್ಮಾನ ಆಗಬಾರದು, ಪಕ್ಷ ಯಾರೊಬ್ಬರ ಸ್ವತ್ತಲ್ಲ ಎಂದು ಎಚ್ಚರಿಸಲಾಗಿದೆ. ಈಗಾಗಲೇ 416 ಮಂದಿ ಉಸ್ತುವಾರಿಗಳನ್ನು ನೇಮಿಸಲಾಗಿದ್ದು, ಈ ಹಿಂದೆ ಪದಾಧಿಕಾರಿ ಆಗಿದ್ದವರನ್ನೂ ಬಳಸಿಕೊಳ್ಳಲಾಗಿದೆ. ಅವರಿಂದಲೇ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಅನಿವಾರ್ಯ ಸಂದರ್ಭ:ಮುಂದೆ ಪದಾಧಿಕಾರಿ ಆಯ್ಕೆ, ಸಮಿತಿಗಳ ಪುನಾರಚನೆ, ಸ್ಥಳೀಯ ಸಂಸ್ಥೆ ಚುನಾವಣೆ, ಮೂರು ವರ್ಷದ ಬಳಿಕ ವಿಧಾನಸಭೆಗೆ ತಯಾರಿ ಆಗಬೇಕು. ಈ ಸಂದರ್ಭದಲ್ಲಿ ಮೇಲುಗೈ ಸಾಧಿಸಲು ಮುಂಚೂಣಿ ನಾಯಕರೆಲ್ಲ ತಮ್ಮ ಪ್ರಭಾವ ಬಳಸಿ ಪಕ್ಷದೊಳಗೆ ಬಲ ಹೆಚ್ಚಿಸಿಕೊಳ್ಳಲು ತಮ್ಮವರಿಗೆ ಅವಕಾಶ ಮಾಡಿಕೊಡಲು ಪ್ರಯತ್ನಿಸುತ್ತಾರೆ.
ಈ ಸಂದರ್ಭದಲ್ಲಿ ಗುಂಪುಗಾರಿಕೆ ಹೆಚ್ಚಾಗಿ ವೈಮನಸ್ಯ ಬೆಳೆದು ಚುನಾವಣೆ ವೇಳೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ತಾಜಾ ಉದಾಹರಣೆ ಇದೆ. ಮುಂದೆ ಹೀಗಾಗಬಾರದೆಂಬ ದೃಷ್ಟಿಯಿಂದಲೇ ಪಕ್ಷದಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಪ್ರಯತ್ನ ನಡೆಯುತ್ತಿದೆ ಎಂದು ಪದಾಧಿಕಾರಿಯೊಬ್ಬರು ವಿವರಿಸಿದರು.
ಆಹ್ವಾನ ಇದ್ದವರಷ್ಟೇ ಬನ್ನಿ:ಆಹ್ವಾನ ಪತ್ರಿಕೆ ತಲುಪಿರುವವರು ಮಾತ್ರವೆ ಕಾರ್ಯಕ್ರಮಕ್ಕೆ ಆಗಮಿಸಬೇಕು. ಅವರಿಗೆ ಮಾತ್ರ ಪ್ರವೇಶವಿದೆ. ಸಾಮಾಜಿಕ ಅಂತರ ಅನಿವಾರ್ಯ ಹಿನ್ನೆಲೆಯಲ್ಲಿ ಎಲ್ಲರೂ ಸಹಕರಿಸಬೇಕೆಂದು ಡಿಕೆಶಿ ಮನವಿ ಮಾಡಿದ್ದಾರೆ.
ಸಾಮೂಹಿಕ ಪ್ರತಿಜ್ಞೆ
ಪಕ್ಷದ ಅಧ್ಯಕ್ಷರು-ಕಾರ್ಯಾಧ್ಯಕ್ಷರ ಜತೆ ರಾಜ್ಯಾದ್ಯಂತ ಕಾರ್ಯಕರ್ತರು ಮುಖಂಡರಿಂದಲೂ ಪ್ರತಿಜ್ಞೆ ಮಾಡಿಸಲಾಗುತ್ತಿದೆ. ‘ನಾನು ಕಾಂಗ್ರೆಸ್​ನ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ದೇಶದ ಸಂವಿಧಾನಕ್ಕೆ ಸದಾ ಬದ್ಧನಾಗಿರುತ್ತೇನೆ. ಪಕ್ಷ ನನಗೆ ಒಪ್ಪಿಸುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಕೇಡರ್ ಆಧಾರಿತ ಪಕ್ಷವನ್ನಾಗಿ ಪರಿವರ್ತಿಸಲು ಶಕ್ತಿಮೀರಿ ದುಡಿಯುತ್ತೇನೆ’ ಎಂದು ಪ್ರಮಾಣ ಮಾಡಿಸಲಾಗುತ್ತದೆ.
ದೇಗುಲವನ್ನು ಮಸೀದಿಯಾಗಿಸಿದ ತಬ್ಲಿಘಿಗಳು; ಪಾಕ್​ನಲ್ಲಿ 102 ಹಿಂದುಗಳ ಬಲವಂತದ ಮತಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 13 =
Remember me
