ಕಲಬುರಗಿ:ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಜನತೆ ಸಂಕಷ್ಟದಲ್ಲಿ ಎದುರಿಸುತ್ತಿರುವಾಗ ಸರ್ಕಾರ ಲೂಟಿಯಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಒಂದು ಕಾಲದ ಸ್ಟಾರ್​ ನಟಿ ಇಂದು ಹೊಟ್ಟೆಪಾಡಿಗಾಗಿ ಸಾಬೂನು ಮಾರುತ್ತಿದ್ದಾರೆ! ಈಕೆ ಕನ್ನಡದಲ್ಲಿ ನಟಿಸಿದ್ದಾರೆ
ಕಲಬುರಗಿ ಎನ್​.ವಿ ಮೈದಾನದಲ್ಲಿ ಬಿಜೆಪಿ ಸಂಕಲ್ಪ ಸಮಾವೇಶದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ಭಾಷಣದುದ್ದಕ್ಕೂ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಈಗ ಕೇಳಿ ಬರುತ್ತಿರುವುದು ಒಂದೇ ಘೋಷಣೆ
'ಅಬ್‌ಕೀ ಬಾರ್ 400 ಪಾರ್'@narendramodi@BJP4India@BJP4Karnataka#AbkiBaar400Paar#PhirEkBaarModiSarkarpic.twitter.com/ZHDief3PCo
— Pralhad Joshi (@JoshiPralhad)March 16, 2024

ಹಲವು ಅವಕಾಶಗಳು ಸಿಕ್ಕಿದ್ದರೂ ಕಾಂಗ್ರೆಸ್ ಸುಧಾರಣೆ ಮಾಡಿಕೊಳ್ಳುವುದಕ್ಕೆ ತಯಾರಿಲ್ಲ. ಸಮಾಜಘಾತುಕ ಶಕ್ತಿಗಳಿಗೆ ರಾಜ್ಯದಲ್ಲಿ ಬಹಿರಂಗವಾಗಿಯೇ ಬೆಂಬಲ ಸಿಗುತ್ತಿದೆ. ಜನರ ಮನಸ್ಸಿನಲ್ಲಿ ಭಯ ಉಂಟುಮಾಡಲಾಗುತ್ತಿದೆ. ಜನರು ಆತಂಕಗೊಂಡಿರುವಾಗ ಕಾಂಗ್ರೆಸ್ ಲೂಟಿಯಲ್ಲಿ ನಿರತವಾಗಿದೆ. ಕಲ್ಲಿದ್ದಲಿನ ಕಪ್ಪುತನವನ್ನು ಹೋಗಲಾಡಿಸಬಹುದು ಆದರೆ ಭ್ರಷ್ಟಾಚಾರವನ್ನು ಕಾಂಗ್ರೆಸ್‌ನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಇಂತಹವರಿಗೆ ಭ್ರಷ್ಟಾಚಾರವೇ ಆಮ್ಲಜನಕ ಎಂದು ಮೋದಿ ಹೇಳಿದ್ದಾರೆ.
ಜನತೆಗೆ ಕಾಂಗ್ರೆಸ್ ಬಗ್ಗೆ ಸತ್ಯ ಅರಿವಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿರುವ ಮೋದಿ, ಕಾಂಗ್ರೆಸ್ ಎಷ್ಟೇ ಬಾರಿ ತಮ್ಮ ಉಡುಪುಗಳನ್ನು ಬದಲಾಯಿಸಿದರೂ ಅವರ ದುಷ್ಕೃತ್ಯಗಳು ಬದಲಾಗುವುದಿಲ್ಲ, ಈ ಬಗ್ಗೆ ಜಾಗೃತರಾಗಿರುವ ಕರ್ನಾಟಕದ ಮಂದಿ ಕಾಂಗ್ರೆಸ್ ನೆಡೆಗೆ ಆಕ್ರೋಶಗೊಂಡಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದರು.
ಜನರಲ್ಲಿರುವ ಉತ್ಸಾಹವನ್ನು ನೋಡಿದರೆ, ಕರ್ನಾಟಕವು ಬಿಜೆಪಿಯನ್ನು ದಾಖಲೆಯ ಸ್ಥಾನಗಳಲ್ಲಿ ಗೆಲ್ಲಲು ನಿರ್ಧರಿಸಿದೆ ಎಂದು ತೋರುತ್ತಿದೆ ಎಂದ ಮೋದಿ ಚುನಾವಣೆ ಫಲಿತಾಂಶ ಘೋಷಣೆಗೂ ಮುನ್ನ ಕರ್ನಾಟಕ ತೀರ್ಪು ಏನೆಂದು ನಿರ್ಧರಿಸಿದೆ ಎಂದು ಹೇಳಿದರು.
ಬೆಂಗ್ಳೂರಿನ ಐಪಿಎಲ್‌ ಪಂದ್ಯ ಸ್ಥಳಾಂತರ ಮಾಡಿದ್ರೆ ಕರ್ನಾಟಕ ಬಂದ್!: ಎಚ್ಚರಿಕೆ ನೀಡಿದ ವಾಟಾಳ್ ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + fifteen =
Remember me
