ಮೈಸೂರು:ಮೈಸೂರು ವಿಶ್ವವಿದ್ಯಾಲಯದ ಐತಿಹಾಸಿಕ 100ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘಟಿಕೋತ್ಸವ ಭಾಷಣ ಮಾಡಿದ್ದು, ಅದರ ವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ಕಿಸಬಹುದು. ಪ್ರಧಾನಿ ನರೇಂದ್ರಮೋದಿಯವರ ಭಾಷಣದ ಸಾರ ಇಲ್ಲಿದೆ.
ಎಲ್ಲರಿಗೂ ಮೈಸೂರು ದಸರಾ, ನಾಡಹಬ್ಬದ ಹೃದಯಪೂರ್ವಕ ಶುಭಾಶಯಗಳು. ಕೆಲವೊಂದು ಛಾಯಾಚಿತ್ರಗಳನ್ನು ಗಮನಿಸುತ್ತಿದ್ದೆ. ಕೋವಿಡ್ 19ಗೆ ಸಂಬಂಧಿಸಿದ ನಿರ್ಬಂಧಗಳಿರಬಹುದು. ಆದರೆ, ಸಂಭ್ರಮದ ಉತ್ಸಾಹಕ್ಕೇನೂ ಕೊರತೆ ಇಲ್ಲ. ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ತೊಂದರೆಯಾಗಿದೆ. ಸಂತ್ರಸ್ತರ ಬಗ್ಗೆ ನನ್ನ ಸಹಾನುಭೂತಿ ಇದೆ. ಕೇಂದ್ರ ಹಾಗೂ ರಾಜ್ಯಗಳು ಪರಿಹಾರ ಕಾರ್ಯದ ಪ್ರಯತ್ನದಲ್ಲಿವೆ. ಮುಖತಃ ಭೇಟಿಯಾಗುವ ನಿರೀಕ್ಷೆ ಆಸೆ ಇತ್ತು. ಕರೊನಾ ಕಾರಣ ಅದು ನೆರವೇರಿಲ್ಲ. ಆದಾಗ್ಯೂ, ನಾವು ವರ್ಚುವಲ್ ರೂಪದಲ್ಲಿ ಎಲ್ಲರೂ ಜತೆಯಾಗುತ್ತಿದ್ದೇವೆ.
ಕನ್ನಡದಲ್ಲಿ ಮೋದಿ ಮಾತು
ಘಟಿಕೋತ್ಸವದ ಈ ಸ್ಮರಣೀಯ ಸಮಾರಂಭದ ಸಂದರ್ಭದಲ್ಲಿ ನಿಮಗೆಲ್ಲರಿಗೂ ಅಭಿನಂದನೆಗಳು. ಈ ಸಂದರ್ಭದಲ್ಲಿ ಪದವಿ ಪ್ರಮಾಣ ಪತ್ರ ಪಡೆಯುತ್ತಿರುವ ಎಲ್ಲರಿಗೂ ಶುಭಾಶಯಗಳು. ಬೋಧಕ ಸಿಬ್ಬಂದಿಗೂ ಶುಭಾಶಯಗಳನ್ನು ಕೋರುತ್ತೇನೆ
ಮೈಸೂರು ವಿವಿ ಪ್ರಾಚೀನ ಭಾರತದ ಸಮೃದ್ಧ ಶಿಕ್ಷಣ ವ್ಯವಸ್ಥೆಯ ಹಾಗೂ ಭವಿಷ್ಯ ಶಿಕ್ಷಣಕ್ಕೆ ಮಾರ್ಗದರ್ಶನ ಮಾಡಬಲ್ಲ ಒಂದು ಪ್ರಮುಖ ಕೇಂದ್ರವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮತ್ತು ಸಂಕಲ್ಪಗಳನ್ನು ಸಾಕಾರಗೊಳಿಸಿರುವ ವಿಶ್ವವಿದ್ಯಾಲಯವಿದು. ಇಂದಿನ ಈ ದಿನಕ್ಕೆ ಸರಿಯಾಗಿ 102 ವರ್ಷ ಹಿಂದೆ ಇದೇ ದಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿವಿಯ ಮೊದಲ ಘಟಿಕೋತ್ಸವ ಭಾಷಣ ಮಾಡಿದ್ದರು. ಅಂದಿನಿಂದ ಇಂದಿನ ತನಕ ರಾಷ್ಟ್ರನಿರ್ಮಾಣಕ್ಕೆ ಕೊಡುಗೆ ನೀಡಿದ ಅನೇಕ ರತ್ನಗಳು ಪದವಿ ದೀಕ್ಷೆ ಪಡೆದ ಸಂದರ್ಭಕ್ಕೆ ಈ ರತ್ನಗರ್ಭ ಪ್ರಾಂಗಣವು ಸಾಕ್ಷಿಯಾಗಿದೆ.
ಭಾರತ ರತ್ನ ಡಾ.ಸರ್ವಪ್ಪಲ್ಲಿ ರಾಧಾಕೃಷ್ಣನ್ ಅವರು ಈ ವಿಶ್ವವಿದ್ಯಾಲಯದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಹೊಸ ಪ್ರೇರಣೆಯನ್ನು ನೀಡಿದ್ದಾರೆ. ಅದೇ ರೀತಿ ಇಂದು ಇಲ್ಲಿ ನೆರೆದಿರುವ ಎಲ್ಲರ ಬಗ್ಗೆಯೂ ನಮಗೆ ವಿಶ್ವಾಸವಿದೆ. ನಿರೀಕ್ಷೆಯೂ ಹೆಚ್ಚಾಗಿದೆ. ಇಂದು ನಿಮ್ಮ ಪದವಿ ಪ್ರಮಾಣದೊಂದಿಗೆ ವಿಶ್ವವಿದ್ಯಾಲಯ, ಇಲ್ಲಿನ ಪ್ರಾಧ್ಯಾಪಕರು ನಿಮ್ಮ ಮೇಲೆ ಸಮಾಜದ ಹೊಣೆಗಾರಿಕೆಯನ್ನೂ ನಿಮ್ಮ ಮೇಲೆ ಹೊರಿಸಿದ್ದಾರೆ.
ಶಿಕ್ಷಣ ಮತ್ತು ದೀಕ್ಷೆಗಳೆರಡು ವಿದ್ಯಾರ್ಥಿ ಜೀವನದ ಎರಡು ಪ್ರಮುಖ ಘಟ್ಟಗಳು. ಸಾವಿರಾರು ವರ್ಷಗಳನ್ನು ಗಮನಿಸಿದೆ ನಮ್ಮಲ್ಲೊಂದು ಪರಂಪರೆ ಇದೆ. ನಾವು ಯಾವಾಗ ದೀಕ್ಷೆಯ ಮಾತುಗಳನ್ನಾಡುತ್ತೇವೆಯೋ ಅದು ಕೇವಲ ಪದವಿ ಪಡೆಯುತ್ತಿರುವ ಸಂದರ್ಭವಷ್ಟೇ ಅಲ್ಲ. ಇಂದಿನ ಈ ದಿನ ಜೀವನದ ಭವಿಷ್ಯದ ಶಿಕ್ಷಣಕ್ಕಾಗಿ ಹೊಸ ಸಂಕಲ್ಪ ತೆಗೆದುಕೊಳ್ಳಲು ಪ್ರೇರಣೆಯನ್ನು ಕೊಡುತ್ತದೆ. ಇಂದು ನೀವು ಒಂದು ಔಪಚಾರಿಕ ವಿಶ್ವವಿದ್ಯಾಲಯದ ಕ್ಯಾಂಪಸ್​ನಿಂದ ಹೊರಬಿದ್ದು, ಬದುಕೆಂಬ ವಿರಾಟ ವಿಶ್ವವಿದ್ಯಾಲಯದ ಕ್ಯಾಂಪಸ್​ಗೆ ತೆರಳುತ್ತಿದ್ದೀರಿ.
ಈ ಹೊಸ ಕ್ಯಾಂಪಸ್ ಹೇಗಿರಲಿದೆ ಎಂದರೆ ನೀವು ಇದುವರೆಗೆ ಈ ಕ್ಯಾಂಪಸ್​ನಲ್ಲಿ ಏನು ಕಲಿತಿರುವಿರೋ ಅದರ ಅನ್ವಯ ಮಾಡುವುದು ಹೇಗೆಂಬ ಪ್ರಾಯೋಗಿಕ ಅಧ್ಯಯನ ಶುರುವಾಗುತ್ತದೆ. ಮಹಾಲೇಖಕ, ಚಿಂತಕ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು, “ಶಿಕ್ಷಣವೇ ಜೀವನದ ಬೆಳಕು” ಎನ್ನುವ ಮಾತನ್ನು ಹೇಳಿದ್ದಾರೆ. ಇದರ ಅರ್ಥ ಇಷ್ಟೇ- ಬದುಕಿನ ಸಂಕಷ್ಟದ ಸಂದರ್ಭದಲ್ಲಿ ಬೆಳಕು ನೀಡಬಲ್ಲ ಸಾಧನವೇ ಶಿಕ್ಷಣ. ಇಂದು ನಮ್ಮ ದೇಶ ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವಾಗ, ಅವರ ಈ ಮಾತುಗಳು ಹೆಚ್ಚು ಸಕಾಲಿಕವೆನಿಸುತ್ತಿದೆ.
ಕಳೆದ ಆರು ವರ್ಷಗಳ ಅವಧಿಯಲ್ಲಿ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಪ್ರಯತ್ನ ಹೆಚ್ಚಾಗಿ ನಡೆದಿದೆ. ವಿದ್ಯಾರ್ಥಿಗಳಿಗೆ ಈಗಿನ ಅಗತ್ಯವನ್ನು ಪೂರೈಸುವುದಲ್ಲದೆ, ಅವರ ಭವಿಷ್ಯಕ್ಕೆ ಸಂಬಂಧಿಸಿದ ಎಲ್ಲ ರೀತಿ ನೆರವನ್ನು ಒದಗಿಸುವುದಕ್ಕೂ ಪ್ರಯತ್ನ ನಡೆದಿದೆ. ಮೂಲಸೌಕರ್ಯದಿಂದ ಹಿಡಿದು, ರಚನಾತ್ಮಕ ವಿನ್ಯಾಸ ಪರಿಷ್ಕರಿಸುವ ತನಕ ಹಲವು ರೀತಿಯ ಬದಲಾವಣೆ ತರುವ ಪ್ರಯತ್ನ ಮುಂದುವರಿದಿದೆ.
ಭಾರತವನ್ನು ಉನ್ನತ ಶಿಕ್ಷಣದ ಗ್ಲೋಬಲ್ ಹಬ್ ಮಾಡುವುದಕ್ಕಾಗಿ, ನಮ್ಮ ಯುವಜನರನ್ನ ಸ್ಪರ್ಧಾತ್ಮಕರನ್ನಾಗಿಸುವುದಕ್ಕೆ ಗುಣಾತ್ಮಕ, ಸಂಖ್ಯಾತ್ಮಕ ವೃದ್ಧಿಗೆ ಪ್ರಯತ್ನ ನಡೆದಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ 2014ರ ತನಕ 16 ಐಐಟಿಗಳಷ್ಟೇ ಇದ್ದವು. ಈಗ ಕಳೆದ ಆರು ವರ್ಷಗಳ ಅವಧಿಯಲ್ಲಿ ಅವಶ್ಯವಾಗಿ ಪ್ರತಿವರ್ಷ ಒಂದು ಹೊಸ ಐಐಟಿ ಸ್ಥಾಪನೆಯಾಗಿದೆ. ಇದರಲ್ಲಿ ಕರ್ನಾಟಕದ ಧಾರವಾಡದಲ್ಲೂ ಒಂದು ಸ್ಥಾಪನೆಯಾಗಿದೆ. 2014ರ ತನಕ ದೇಶದಲ್ಲಿ 9 ಐಐಐಟಿಗಳಿದ್ದವು. ಅದರ ನಂತರದ 5 ವರ್ಷಗಳ ಅವಧಿಯಲ್ಲಿ 16 ಐಐಐಟಿಗಳನ್ನು ಸ್ಥಾಪಿಸಲಾಗಿದೆ. 7 ಹೊಸ ಐಐಎಂಗಳ ಸ್ಥಾಪನೆಯಾಗಿವೆ. ಐಐಎಂಗಳನ್ನು ಸ್ವಾಯತ್ತೆ ನೀಡುವ ಕೆಲಸ, ಮೆಡಿಕಲ್ ಶಿಕ್ಷಣದಲ್ಲಿ ಪಾರದರ್ಶಕತೆ ತರುವ ಪ್ರಯತ್ನ ಮಾಡಲಾಗಿದೆ. ವೈದ್ಯ ಕ್ಷೇತ್ರದ ಇತರೆ ವೈದ್ಯಪದ್ಧತಿಯ ಅನುಕೂಲಕ್ಕಾಗಿ ಇನ್ನೂ ಎರಡು ಹೊಸ ಕಾನೂನುಗಳನ್ನು ಜಾರಿಗೊಳಿಸಲಾಗುತ್ತದೆ.
ಮೈಸೂರಿನ ಬಿಜೆಪಿ ಶಾಸಕ ಎಸ್​.ಎ.ರಾಮದಾಸ್ ಆರೋಗ್ಯದಲ್ಲಿ ಏರುಪೇರು: ದಿಢೀರ್ ಆಸ್ಪತ್ರೆಗೆ

Sign in to your account
Please enter an answer in digits:ten + 3 =
Remember me
