ಮೈಸೂರು:ಬೆಂಗಳೂರು, ಮೈಸೂರಿನಲ್ಲಿನ ಕಾರ್ಯಕ್ರಮಗಳ ಬಳಿಕ ತಮ್ಮ ಕರ್ನಾಟಕ ಪ್ರವಾಸದ ಮೊದಲ ದಿನದ ಅಧಿಕೃತ ಷೆಡ್ಯೂಲನ್ನು ತಾಯಿ ಶ್ರೀಚಾಮುಂಡೇಶ್ವರಿ ದರ್ಶನದೊಂದಿಗೆ ಸಮಾಪ್ತಿಗೊಳಿಸಿರುವ ಪ್ರಧಾನಮಂತ್ರಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡರು.
ಸಾಂಪ್ರದಾಯಿಕ ದಿರಿಸಿನೊಂದಿಗೆ ದೇವಳಕ್ಕೆ ಆಗಮಿಸಿದ ಮೋದಿ ಭಕ್ತಿಪೂರ್ವಕವಾಗಿ ಒಂದಷ್ಟು ಕ್ಷಣಗಳನ್ನು ದೇವಸ್ಥಾನದಲ್ಲಿ ಕಳೆದರು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್​​ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಹಳಷ್ಟು ಸಚಿವರು, ಶಾಸಕರು, ಸಂಸದರು ಮತ್ತಿತರರ ಜನಪ್ರತಿನಿಧಿಗಳು ಜೊತೆಗಿದ್ದರು.
ಇದಕ್ಕೂ ಮೊದಲು ಅವರು ಮೈಸೂರಿನ ಸುತ್ತೂರು ಮಠ, ಅದಕ್ಕೂ ಮುನ್ನ ಮೈಸೂರು ಮಹಾರಾಜಾ ಕಾಲೇಜು ಮೈದಾನದಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಕಾನ್ವೆ ಮೂಲಕ ಪ್ರಧಾನಿ ಚಾಮುಂಡಿಬೆಟ್ಟಕ್ಕೆ ಆಗಮಿಸಿದರು. ಇಂದು ಐಷಾರಾಮಿ ಖಾಸಗಿ ಹೋಟೆಲ್​ನಲ್ಲಿ ತಂಗಲಿರುವ ಮೋದಿ, ನಾಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ; ಒಂದು ಮನೆಯಲ್ಲಿ 6, ಇನ್ನೊಂದು ಮನೆಯಲ್ಲಿ 3 ಶವ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
