ಬೆಂಗಳೂರು:ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಪ್ರಧಾನಿ ಮೋದಿ ಇಂದು ಬೆಂಗಳೂರಿನಲ್ಲಿ 26 ಕಿ.ಮೀ ಉದ್ದದ ಮೆಗಾ ರೋಡ್​ ಶೋ ನಡೆಸುತ್ತಿದ್ದಾರೆ. ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ರೋಡ್​ ಶೋ ಆರಂಭವಾಗಿದ್ದು, ಅದರ ನೇರಪ್ರಸಾರವನ್ನು ಈ ಕೆಳಗಿರುವದಿಗ್ವಿಜಯ ನ್ಯೂಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
https://www.youtube.com/watch?v=0T867pbSmEs
https://www.youtube.com/watch?v=K8otb9mo9V0
ಜೆಪಿ ನಗರದ ಸೋಮೇಶ್ವರ ಭವನದಿಂದ ಮೋದಿ ಬೃಹತ್ ರೋಡ್ ಶೋ ಆರಂಭವಾಯಿತು. ತೆರೆದ ವಾಹನದಲ್ಲಿ ಏರಿರುವ ಪ್ರಧಾನಿ ಮೋದಿ ದಾರಿಯುದ್ದಕ್ಕೂ ಜನರತ್ತ ಕೈ ಬೀಸುತ್ತಾ ಸಾಗುತ್ತಿದ್ದಾರೆ. ರಸ್ತೆಯ ಎರಡು ಬದಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು, ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಲ್ಲದೆ, ಪ್ರಧಾನಿಗೆ ಹೂಮಳೆ ಸುರಿಯುತ್ತಿದ್ದಾರೆ.

ಬೆಳಗ್ಗೆ 10 ಗಂಟೆಗೆ ಆರಂಭವಾಗಿರುವ ರೋಡ್​ ಶೋ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಗಲಿದೆ. ಹೀಗಾಗಿ ಈ ಕೆಳಕಂಡ ರಸ್ತೆಗಳಲ್ಲಿ ಸಂಚರಿಸದೇ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ. ರಾಜಭವನ ರಸ್ತೆ, ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ, ಆರ್​ಬಿಐ ಲೇಔಟ್, ಜೆ.ಪಿ. ನಗರ, ರೋಸ್ ಗಾರ್ಡನ್, ಜೆ.ಪಿ. ನಗರ, ಸಿರ್ಸಿ ಸರ್ಕಲ್, ಜೆ.ಜೆ. ನಗರ, ಬಿನ್ನಿಮಿಲ್ ರಸ್ತೆ, ಶಾಲಿನಿ ಮೈದಾನ, ಸೌತ್ ಎಂಡ್ ರಸ್ತೆ, ಆಮುಗಂ ಸರ್ಕಲ್, ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣಾಶ್ರಮ, ಉಮಾ ಟಾಕೀಸ್, ಟಿ.ಆರ್. ಮಿಲ್, ಚಾಮರಾಜಪೇಟೆ ಮುಖ್ಯ ರಸ್ತೆ, ಬಾಳೇಕಾಯಿ ಮಂಡಿ, ಕೆ.ಪಿ. ಅಗ್ರಹಾರ, ಮಾಗಡಿ ಮುಖ್ಯರಸ್ತೆ, ಚೋಳೂರುಪಾಳ್ಯ, ಎಂ.ಸಿ. ವೃತ್ತ, ಪಶ್ಚಿಮ ಕಾರ್ಡ್ ರಸ್ತೆ, ಎಂ.ಸಿ. ಲೇಔಟ್, ನಾಗರಬಾವಿ ಮುಖ್ಯರಸ್ತೆ, ಬಿಜಿಎಸ್ ಮೈದಾನ, ಹಾವನೂರು ಸರ್ಕಲ್, ಬಸವೇಶ್ವರನಗರ 8ನೇ ಮುಖ್ಯರಸ್ತೆ ಮತ್ತು 15ನೇ ಮುಖ್ಯರಸ್ತೆ, ಶಂಕರಮಠ, ಮೋದಿ ಆಸ್ಪತ್ರೆ ರಸ್ತೆ, ನವರಂಗ್ ವೃತ್ತ, ಎಂಕೆಕೆ ರಸ್ತೆ, ಮಲ್ಲೇಶ್ವರ ಸರ್ಕಲ್, ಸಂಪಿಗೆ ರಸ್ತೆ ಮತ್ತು ಸ್ಯಾಂಕಿ ರಸ್ತೆ ಬಳಸದಂತೆ ಸಂಚಾರ ಪೊಲೀಸರು ತಿಳಿಸಿದ್ದಾರೆ.
* ರೋಡ್ ಶೋ ಮಾರ್ಗದ ಅಕ್ಕಪಕ್ಕದ ಕಟ್ಟಡ, ಮನೆಗಳ ಮಹಡಿ ಮೇಲೆ ನಿಲ್ಲಲು ಅವಕಾಶವಿಲ್ಲ.* ಹೋಟೆಲ್, ಅಂಗಡಿ, ಮಳಿಗೆಗಳ ವಹಿವಾಟು ಬಂದ್.* ಕಟ್ಟಡಗಳ ಬಳಿ, ಒಳಗೆ ಅಪರಿಚಿತರು ಒಳಪ್ರವೇಶಿಸದಂತೆ ನಿರ್ಬಂಧ.* ನಿಗದಿತ ಸ್ಥಳದಲ್ಲಿ ನಿಂತು ರೋಡ್ ಶೋ ವೀಕ್ಷಿಸಬೇಕು.* ಕಟ್ಟಡಗಳ ಒಳಗೆ ಮತ್ತು ಹೊರಗೆ ಅಡ್ಡಾಡಲು ಅವಕಾಶವಿಲ್ಲ
ರೋಡ್​ ಶೋ ವೇಳೆ ಲೋಕಕಲ್ಯಾಣ, ಮೋದಿ ಶ್ರೇಯಸ್ಸಿಗಾಗಿ ಪುರೋಹಿತರಿಂದ ವೇದ ಮಂತ್ರ ಪಠಣ

ಭಾರತದ ಚಿನ್ನದ ಬೇಡಿಕೆ ಶೇ.17 ಇಳಿಕೆ: ವಿಶ್ವ ಚಿನ್ನ ಮಂಡಳಿ ವರದಿ

ಸೆಲ್ಫ್ ಕಿಡ್ನಾಪ್ ಪ್ರಕರಣದ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಮತ್ತೊಂದು ವಂಚನೆ ಬೆಳಕಿಗೆ?

Sign in to your account
Please enter an answer in digits:thirteen − three =
Remember me
