ಬೆಂಗಳೂರು:ಕಾಲುನೋವಿನ ಕಾರಣದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಅಷ್ಟೈಶ್ವರ್ಯ ಒಲಿದಿದೆಯಂತೆ. ಹಾಗಂತ ಇದ್ಯಾವುದೋ ಗಾಸಿಪ್ ಅಲ್ಲ, ಇದನ್ನು ಅವರೇ ಸ್ವತಃ ಹೇಳಿಕೊಂಡಿದ್ದಾರೆ.
ನನಗೆ ಲಘು ಶಸ್ತ್ರ ಚಿಕಿತ್ಸೆಯಾಗಿದ್ದು, ವೈದ್ಯರ ಸಲಹೆ ಮೇರೆಗೆ ಈಗ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದೇನೆ. ಆದಷ್ಟು ಬೇಗ ಸಂಪೂರ್ಣ ಗುಣಮುಖನಾಗಿ ನಿಮ್ಮ ಮುಂದೆ ಬರಲು ಕಾತುರದಿಂದ ಕಾಯುತ್ತಿದ್ದೇನೆ. ಸದ್ಯ ಆಸ್ಪತ್ರೆಯಲ್ಲಿರುವ ಕಾರಣ, ನೀವೆಲ್ಲ ಆಸ್ಪತ್ರೆಗೆ ನನ್ನನ್ನು ನೋಡಲು ಬಂದರೆ, ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ನೀವ್ಯಾರೂ ಆಸ್ಪತ್ರೆಗೆ ಬರಬಾರದೆಂದು ಬಸವರಾಜ ಬೊಮ್ಮಾಯಿ ನಾಲ್ಕು ದಿನಗಳ ಹಿಂದೆ ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ:#NoBindiNoBusiness | ಹಿಂದೂಗಳಿಂದ ಮತ್ತೆ ಅಭಿಯಾನ, ಟ್ರೆಂಡ್ ಆಯ್ತು ಕ್ಯಾಂಪೇನ್..
ಆ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು ಸೇರಿದಂತೆ ಹಲವರು ಬೊಮ್ಮಾಯಿ ಅವರು ಯೋಗಕ್ಷೇಮ ವಿಚಾರಿಸಿದ್ದು, ಶೀಘ್ರ ಚೇತರಿಕೆ ಕಂಡು ಮತ್ತೆ ಜನಸೇವೆಯಲ್ಲಿ ತೊಡಗಿಕೊಳ್ಳುವಂತಾಗಲಿ ಎಂದು ಹಾರೈಸಿದ್ದರು.
ಇದನ್ನೂ ಓದಿ:ಇಸ್ರೇಲ್​-ಪ್ಯಾಲೆಸ್ತೀನ್ ಸಂಘರ್ಷ: ಹಮಾಸ್ ಮಾಸ್ಟರ್​ ಮೈಂಡ್ ಎಲ್ಲಿದ್ದಾನೆ, ಯಾರಾತ?
ಆದರೆ ಇಂದು ಮಾಜಿ ಸಿಎಂ ಬೊಮ್ಮಾಯಿ ನಾನು ಅಷ್ಟೈಶ್ವರ್ಯ ಒಲಿದ ಸಂಭ್ರಮದಲ್ಲಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಅವರು ಹೀಗೊಂದು ಸಂತಸವನ್ನು ಹಂಚಿಕೊಳ್ಳಲು ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ಸರ್ಕಾರದಿಂದ ಹೊಸ ಆದೇಶ
ಶುಭ ಅಷ್ಟಮಿ ದಿನ, ನನಗೆ ಅಷ್ಟೈಶ್ವರ್ಯ ಒಲಿದ ಸಂಭ್ರಮ. ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ನನಗೆ ದೂರವಾಣಿ ಕರೆ ಮಾಡಿ ನನ್ನ ಆರೋಗ್ಯ ಕುಶಲೋಪರಿಯನ್ನು ವಿಚಾರಿಸಿದ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಕಾಳಜಿ ಮತ್ತು ಶುಭ ಹಾರೈಕೆ ನನ್ನ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ್ದು, ಆದಷ್ಟು ಬೇಗ ಸಂಪೂರ್ಣ ಗುಣಮುಖನಾಗಿ ಜನಸೇವೆಗೆ ಮರಳುತ್ತೇನೆ ಎಂಬುದಾಗಿ ಬೊಮ್ಮಾಯಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಚಡ್ಡಿ ಧರಿಸಿ ರಸ್ತೆ ಬದಿ ಕಾಣಿಸಿಕೊಂಡ ‘ರಜಿನಿಕಾಂತ್’!: ವಿಡಿಯೋ ವೈರಲ್; ಅಸಲಿ ವಿಷಯ ಏನು? ಇಲ್ಲಿದೆ ವಿವರ‌
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − twelve =
Remember me
