ಬೆಳಗಾವಿ:ದೇಶದಲ್ಲಿ 18ನೇ ಲೋಕಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣೆ ನಿಮಿತ್ತ ಬೆಳಗಾವಿಯಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್​ ಸರ್ಕಾವು ಔರಂಗಜೇಬ್​ ಬೆಂಗಲಿಗರ ಜೊತೆ ದೋಸ್ತಿ ಮಾಡಿಕೊಂಡಿದೆ. ಹುಬ್ಬಳ್ಳಿಯಲ್ಲಿ ಹೆಣ್ಣು ಮಗಳ ಹತ್ಯೆ, ಜೈನ ಮುನಿಗಳ ಕೊಲೆ, ಬಾಂಬ್​ ಸ್ಫೋಟದಂತಹ ಗಂಭೀರ ಪ್ರಕರಣಗಳು ನಡೆದರೂ ಇಲ್ಲಿನ ಕಾಂಗ್ರೆಸ್​ ಸರ್ಕಾರ ಮಾತ್ರ ತುಷ್ಠೀಕರಣ ಮಾಡುವುದರಲ್ಲಿ ನಿರತವಾಗಿದೆ.
ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ ನಡೆದರೂ ಸಹ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಇದೇ ಬೆಳಗಾವಿಯ ವಂಟಮೂರಿಯ ಬಡ ದಲಿತ ಮಹಿಳೆ ಮೇಲೆ ಆದ ದೌರ್ಜನ್ಯ, ಜೈನ ಮುನಿ ಕೊಲೆ ಪ್ರಕರಣಗಳು ನಡೆದಿವೆ. ಇನ್ನು ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳ ವಿರುದ್ಧ ನಡೆದ ಕೊಲೆ ಪ್ರಕರಣ ಏನನ್ನು ಹೇಳುತ್ತದೆ. ಆ ಹೆಣ್ಣು ಮಗಳ ಪೋಷಕರು ಕಠಿಣ ಕ್ರಮಕ್ಕೆ ಆಗ್ರಹಿಸಿದರೂ ಕಾಂಗ್ರೆಸ್‌ ಸರ್ಕಾರ ತುಷ್ಟೀಕರಣ ಮಾಡಲು ಹೊರಟಿದೆ ನಿಮ್ಮ ನರೇಂದ್ರ ಮೋದಿ ಬದುಕಿರುವವರೆಗೂ ಕಾಂಗ್ರೆಸ್‌ ದುಷ್ಟ ನೀತಿಯನ್ನು ಕೈಗೊಳ್ಳಲು ಬಿಡುವುದಿಲ್ಲ. ನಿಮ್ಮ ಮಂಗಳ ಸೂತ್ರವನ್ನು ರಕ್ಷಣೆ ಮಾಡುವ ಹೊಣೆ ನಮ್ಮದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮುಂದಿನ ದಿನಗಳಲ್ಲಿ ಕಾಲ್​ಸೆಂಟರ್​ ಬಂದ್; ಲಕ್ಷಾಂತರ​ ಉದ್ಯೋಗಿಗಳ ಕೆಲಸವನ್ನು ಕಸಿದುಕೊಳ್ಳಲಿದೆ AI
ಸುಲ್ತಾನರು, ನವಾಬರು ಹಲವಾರು ಜನರನ್ನು ಅತ್ಯಾಚಾರ ಮಾಡಿದರು. ಆದರೆ, ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಇದರ ಬಗ್ಗೆ ಮಾತನಾಡಲು ಧೈರ್ಯವೂ ಅವರಿಗೆ ಇಲ್ಲ. ರಾಜ ಮಹಾರಾಜರ ಸಾಧನೆ ಬಗ್ಗೆ ಕಾಂಗ್ರೆಸ್‌ ಮಾತನಾಡಲ್ಲ. ಸುಲ್ತಾನರ ದುರಾಡಳಿತದ ಬಗ್ಗೆ ಬಾಯಿ ಬಿಡುವುದಿಲ್ಲ. ಗಾಯಕ್‌ವಾಡ್‌ ಮಹಾರಾಜರು ಇಲ್ಲದಿದ್ದರೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ವಿದೇಶ ವ್ಯಾಸಂಗ ಆಗುತ್ತಿತ್ತಾ, ಮಹಾರಾಣಿ ಅಹಲ್ಯಾ ಬಾಯಿ ಇಲ್ಲದಿದ್ದರೆ ದೇಶಗಳಲ್ಲಿ ದೇವಸ್ಥಾನ, ಮಂದಿರಗಳ ನಿರ್ಮಾಣ ಆಗುತ್ತಿತ್ತಾ, ಅಲ್ಲದೆ, ಶಿವಾಜಿ ಮಹಾರಾಜರು, ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಅವಮಾನ ಮಾಡುತ್ತಾ ಬರಲಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನೀವು ಮಾಡಿಟ್ಟ ಮನೆ, ಆಸ್ತಿ, ಚಿನ್ನ ಎಲ್ಲವೂ ಅನ್ಯರ ಪಾಲಾಗಿದೆ. ಕಾಂಗ್ರೆಸ್‌ ಹೇಳುವ ಮಾತು ಕೇಳಿದರೆ ನಿಮ್ಮ ನಿದ್ದೆ ಕೆಡುತ್ತದೆ. ಅವರು ಆಡಳಿತಕ್ಕೆ ಬಂದರೆ ನಿಮ್ಮ ಆಸ್ತಿಯನ್ನು ವಶಕ್ಕೆ ಪಡೆಯುತ್ತದೆ. ನೀವು ನಿಮ್ಮ ಮಕ್ಕಳಿಗಾಗಿ ಪೈಸೆ ಪೈಸೆ ಕೂಡಿಟ್ಟು ಮಾಡಿದ ಆಸ್ತಿಯಲ್ಲಿ ಶೇಕಡಾ 55 ರಷ್ಟು ಕಾಂಗ್ರೆಸ್‌ ವಶಕ್ಕೆ ಪಡೆಯಲಿದೆ. ಈ ಮೂಲಕ ನಿಮ್ಮ ಆಸ್ತಿಯು ನಿಮ್ಮ ಮಕ್ಕಳಿಗೆ ಸಿಗದಂತೆ ಮಾಡುತ್ತದೆ. ಹೀಗಾಗಿ ನಿಮ್ಮ ಆಸ್ತಿಯ ಬಹುದೊಡ್ಡ ಪಾಲು ಕಾಂಗ್ರೆಸ್‌ ಸರ್ಕಾರದ್ದಾಗುತ್ತದೆ ಎಂದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
