ಮಂಡ್ಯ:ಸಾವಿರಾರು ಕೋಟಿ ರೂ. ವೆಚ್ಚಗಳಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಮಾ.12) ಲೋಕಾರ್ಪಣೆಗೊಳಿಸಿದರು.
ಸುಮಾರು 1.8 ಕಿ.ಮೀ ರೋಡ್​ ಶೋ ಮೂಲಕ ಹನಕೆರೆ ಹೆದ್ದಾರಿಯ ಸೇತುವೆಗೆ ತೆರಳಿ ದಶಪಥ ಹೆದ್ದಾರಿಯನ್ನು ಮೋದಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಪ್ರಧಾನಿಗೆ ರೆಡ್ ಕಾರ್ಪಟ್ ಹಾಕಿ ಸ್ವಾಗತಿಸಲಾಯಿತು. ಜಾನಪದ ಕಲಾತಂಡವು ಮೋದಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡವು. ಈ ವೇಳೆ ಜಾನಪದ ಕಲಾತಂಡದತ್ತ ಪ್ರಧಾನಿ ಮೋದಿ ಕೈ ಬೀಸಿದರು. ಕೆಲ ಹೊತ್ತು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಒಂಟಿಯಾಗಿ ಹೆಜ್ಜೆ ಹಾಕಿದರು. ಸಿಎಂ ಬಸವರಾಜ ಬೊಮ್ಮಾಯಿಯನ್ನು ಬಿಟ್ಟು ಒಬ್ಬರೆ ಕೈ ಬೀಸುತ್ತಾ ಸಾಗಿದರು.
ಇದನ್ನೂ ಓದಿ:ಮೈ-ಬೆಂ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ಪಾಲಿಟಿಕ್ಸ್ ವಿಚಾರ: ಜ್ಯೋತಿಷಿ ಕತೆ ಹೇಳಿ ಸುಮಲತಾ ತಿರುಗೇಟು
ಎಕ್ಸ್‌ಪ್ರೆಸ್ ವೇ ವಿಶೇಷತೆ ಏನು?ಈ ಎಕ್ಸ್‌ಪ್ರೆಸ್ ವೇ ರಾಜ್ಯದಲ್ಲೇ ಮೊದಲು. 118 ಕಿ.ಮೀ. ಉದ್ದದ ರಸ್ತೆ ಇದಾಗಿದೆ. 8,480 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಪ್ರಯಾಣ ಅವಧಿ 3 ತಾಸಿನಿಂದ 75 ನಿಮಿಷಕ್ಕೆ ಇಳಿಕೆಯಾಗಲಿದೆ. 4 ರೈಲ್ವೆ ಸೇತುವೆಗಳು, 49 ಅಂಡರ್​ಪಾಸ್​ ಮತ್ತು 13 ಮೇಲ್ಸುತುವೆ, 69 ಬಸ್​ ಬೇ ಗಳು ಇವೆ.
ಲೋಕಾರ್ಪಣೆ ಬಳಿಕ ವೇದಿಕೆ ಕಾರ್ಯಕ್ರಮದತ್ತ ಪ್ರಧಾನಿ ತೆರಳಿದರು. ಮದ್ದೂರಿನ ಗೆಜ್ಜಲಗೆರೆ ಕಾಲನಿ ಬಳಿ ಅದ್ಧೂರಿ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆ ಕಾರ್ಯಕ್ರಮ ಮುಗಿಸಿ ಗಜ್ಜಲೆಗೆರೆ ಬಳಿ‌ ನಿರ್ಮಾಣವಾಗಿರುವ ಹೆಲಿಪ್ಯಾಡ್​ನಿಂದ ಧಾರವಾಡಕ್ಕೆ ಪ್ರಧಾನಿ ಮೋದಿ ತೆರಳಲಿದ್ದಾರೆ.
ಮಂಡ್ಯಕ್ಕೆ ಭೇಟಿ ಕೊಟ್ಟ ಮೊದಲ ಪ್ರಧಾನಿ ನೆಹರು: ಮೋದಿ 4ನೇ ಪ್ರಧಾನಿ, ರಾಜಕೀಯವಾಗಿ 2ನೇ ಭೇಟಿ

ದುಬೈನಲ್ಲಿ ನರೇಶ್​-ಪವಿತ್ರಾ ಲೋಕೇಶ್​ ಮೋಜು ಮಸ್ತಿ: ಹನಿಮೂನ್ ಮುಗಿಸಿ ಬಂದ್ರಾ ಸ್ಟಾರ್​ ಜೋಡಿ​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + six =
Remember me
