ಬೆಂಗಳೂರು:ಬಿಎಂಆರ್​ಸಿಎಲ್​ನಿಂದ ನಿರ್ಮಾಣವಾಗಿರುವ ನೂತನ ವೈಟ್​ಫೀಲ್ಡ್ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದು (ಮಾ.25) ಹಸಿರು ನಿಶಾನೆ ತೋರಿದರು.
Karnataka | PM Modi inaugurates Whitefield (Kadugodi) to Krishnarajapura line of Bengaluru Metropic.twitter.com/C07MbTMxU7
— ANI (@ANI)March 25, 2023

ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ, ಜನಸಾಮಾನ್ಯರಂತೆ ಮೆಟ್ರೋ ಟಿಕೆಟ್​ ಕೌಂಟರ್​ ಬಳಿ ತೆರಳಿ, ಟಿಕೆಟ್​ ಪಡೆದು ಮೆಟ್ರೋದಲ್ಲಿ ಸಂಚಾರ ಮಾಡಿದರು. ಈ ವೇಳೆ ಮೆಟ್ರೋ ರೈಲಿನ ಒಳಗೆ ವಿದ್ಯಾರ್ಥಿಗಳು ಹಾಗೂ ಬಿಎಂಆರ್​ಸಿಎಲ್​ ಸಿಬ್ಬಂದಿ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಪ್ರಧಾನಿ ಮೆಟ್ರೋ ಸವಾರಿಯ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಥ್​ ನೀಡಿದರು. ವೈಟ್​ಫೀಲ್ಡ್​ನಿಂದ ಸತ್ಯಸಾಯಿ ಆಸ್ಟತ್ರೆ ನಿಲ್ದಾಣದವರೆಗೂ ಒಟ್ಟು ಐದು ನಿಮಿಷಗಳ ಕಾಲ ಪ್ರಧಾನಿ ಮೋದಿ ಸಂಚಾರ ಮಾಡಿದರು.

ಇದನ್ನೂ ಓದಿ:ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ; ಮೆಡಿಕಲ್ ಕಾಲೇಜು ಲೋಕಾರ್ಪಣೆ
ಅಂದಹಾಗೆ ವೈಟ್​ಫೀಲ್ಡ್​ ನೇರಳೆ ಮಾರ್ಗದ ವಿಸ್ತೃತ ಮಾರ್ಗವಾಗಿದೆ. 4,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಕೆ.ಆರ್​.ಪುರಂನಿಂದ ವೈಟ್​ಫೀಲ್ಡ್​ವರೆಗೆ ನೂತನ ಮಾರ್ಗ ಇದಾಗಿದ್ದು, 12 ಮೆಟ್ರೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ.

ಮಧ್ಯಾಹ್ನ 3.20ಕ್ಕೆ ದಾವಣಗೆರೆಗೆ ತೆರಳಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪದ ಮಹಾ ಸಂಗಮದಲ್ಲಿ ಭಾಗವಹಿಸುವರು. ಕಾರ್ಯಕ್ರಮ ಮುಗಿದ ನಂತರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ವಾಪಸಾಗುವರು.(ದಿಗ್ವಿಜಯ ನ್ಯೂಸ್​)
ಬಿಜೆಪಿ ಸರ್ಕಾರ ಬಡವರ ಸೇವೆಯನ್ನು ಸರ್ವೋಚ್ಛ ಸೇವೆಯೆಂದು ಭಾವಿಸಿದೆ: ಪ್ರಧಾನಿ ಮೋದಿ

ನೋಟು ಮುದ್ರಣ ಅವ್ಯವಹಾರಕ್ಕೆ ಕೈ ಹಾಕಿದ್ದ ಇಬ್ಬರ ಬಂಧನ

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ವಿರಾಮ; ಹೋರಾಟ ಸ್ಥಗಿತಗೊಳಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 3 =
Remember me
