ಬೆಂಗಳೂರು:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಭಾರತದಲ್ಲಿ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಹೇಳಿದರು. ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ 2ನೇ ಆವೃತ್ತಿಯ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅಮಿತ್​ ಷಾ, 2014ಕ್ಕೂ ಮೊದಲು ದೇಶದಲ್ಲಿ ಕ್ರಿಕೆಟ್​ ಬಿಟ್ಟರೆ ಬೇರೆ ಕ್ರೀಡೆಗಳಿಗೆ ಪ್ರೋತ್ಸಾಹ ಇರಲಿಲ್ಲ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ಕ್ರೀಡೆಗಳನ್ನು ಸಮವಾಗಿ ಕಾಣುತ್ತಿದ್ದಾರೆ. ದೇಶದಲ್ಲಿ ಕ್ರೀಡಾ ಕ್ರಾಂತಿಯಾಗುತ್ತಿದೆ ಎಂದು ತಿಳಿಸಿದರು. ಭಾರತೀಯ ಕ್ರೀಡೆಗಳನ್ನು ಬೆಳೆಸಬೇಕು ಎಂಬುದೇ ಮೋದಿ ಅವರ ಕಲ್ಪನೆ ಎಂದರು.
2036ಕ್ಕೆ ಅಗ್ರ 5 ಗುರಿ: ಭಾರತದಲ್ಲಿ ಜನಸಂಖ್ಯೆಗೆ ಲೆಕ್ಕಾಚಾರದಲ್ಲಿ ಹೋಲಿಸಿದರೆ ಕ್ರೀಡೆಯಲ್ಲಿ ಇನ್ನು ಸಾಧನೆ ಮಾಡಬಹುದು. 2036ರ ಒಲಿಂಪಿಕ್ಸ್​ ಪದಕ ಪಟ್ಟಿಯಲ್ಲಿ ಭಾರತ ಅಗ್ರ 5ರೊಳಗೆ ಸ್ಥಾನ ಪಡೆಯಬೇಕು. ಇದಕ್ಕೆ ಈಗಿನಿಂದಲೇ ತಯಾರಿ ಅಗತ್ಯವಿದೆ ಎಂದು ಅಮಿತ್​ ಷಾ ತಿಳಿಸಿದರು. ದೇಶ 100ನೇ ಸ್ವಾತಂತ್ರೊ$್ಯತ್ಸವ ಸಂಭ್ರಮದ ವೇಳೆ ಈ ಸಾಧನೆ ಮಾಡಬೇಕಿದೆ. ಮೋದಿ ಅಧಿಕಾರಕ್ಕೆ ಬಂದಮೇಲೆ ಖೇಲೋ ಇಂಡಿಯಾ, ಫಿಟ್​ ಇಂಡಿಯಾ ಕಲ್ಪನೆಯಲ್ಲಿ ದೇಶ ಸಾಗುತ್ತಿದೆ ಎಂದರು. ಮುಂದಿನ 25 ವರ್ಷಕ್ಕೆ ದೇಶ ಕ್ರೀಡಾಕ್ಷೇತ್ರಕ್ಕೆ ಬೇಕಾಗಿರುವ ನೀಲಿನೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಕ್ರೀಡಾಕ್ಷೇತ್ರದಲ್ಲೂ ಮತ್ತಷ್ಟು ಮಿಂಚಲಿದ್ದು, ಇದಕ್ಕೆ ಖೇಲೋ ಇಂಡಿಯಾ ಕಲ್ಪನೆಯೇ ವೇದಿಕೆಯಾಗಿದೆ.
ರಾಜ್ಯ ಸರ್ಕಾರ, ಜೈನ್​ ವಿವಿಗೆ ಮೆಚ್ಚುಗೆ: ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಕರ್ನಾಟಕ ಸರ್ಕಾರ ಹಾಗೂ ಸಹ ಆಯೋಜಕರಾದ ಜೈನ್​ ವಿಶ್ವವಿದ್ಯಾಲಯದ ಕಾರ್ಯವೈಖರಿಗೆ ಅಮಿತ್​ ಷಾ ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್​ನಿಂದ ಮುಂದೂಡಿಕೆಯಾಗಿದ್ದ ಕ್ರೀಡಾಕೂಟ ಆಯೋಜಕರ ಪರಿಶ್ರಮದಿಂದ ಅದ್ಭುತವಾಗಿ ಮೂಡಿ ಬಂತು, ಇದೊಂದು ಯಶಸ್ವಿ ಕ್ರೀಡಾಕೂಟವಾಗಿ ಹೊರಹೊಮ್ಮಿದೆ ಎಂದು ಷಾ ತಿಳಿಸಿದರು. ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳನ್ನು ಅಭಿನಂದಿಸಿದ ಷಾ, ಎಲ್ಲರೂ ಪದಕ ಗೆದ್ದಷ್ಟೇ ಸಂಭ್ರಮಪಡಬೇಕು ಎಂದರು.ಮನಸೂರೆಗೊಂಡ ಸಾಂಸತಿಕ ಕಾರ್ಯಕ್ರಮ: ಆತಿಥೇಯ ಜೈನ್​ ವಿವಿ ತಂಡದ ವಿದ್ಯಾರ್ಥಿಗಳು ನಡೆಸಿಕೊಟ್ಟ ಹಲವು ಸಾಂಸತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡಿತು. ಜೈನ್​ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ನಡೆಸಿಕೊಟ್ಟರೆ, ಸರಿಗಪಮ ಖ್ಯಾತಿ ಸಾನ್ವಿ ಕಾವೇರಪ್ಪ ಕನ್ನಡ ಹಾಡುಗಳನ್ನು ಹಾಡಿ ರಂಜಿಸಿದರು.
ಗಣ್ಯರ ಉಪಸ್ಥಿತಿ:ಕೇಂದ್ರ ಕ್ರೀಡಾಸಚಿವ ಅನುರಾಗ್​ ಠಾಕೂರ್​, ಕೇಂದ್ರದ ಕ್ರೀಡಾ ಖಾತೆಯ ರಾಜ್ಯ ಸಚಿವ ನಿಶಿತ್​ ಪ್ರಾಮಾಣಿಕ್​, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಕ್ರೀಡಾ ಸಚಿವ ಕೆ.ನಾರಾಯಣಗೌಡ, ರಾಜ್ಯ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್​, ಸಂಸದರಾದ ಪಿಸಿ ಮೋಹನ್​, ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.
10 ಮಂದಿ ಒಲಿಂಪಿಕ್ಸ್​ಗೆ ಎಂದ ಸಿಎಂಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರವೂ ಕ್ರೀಡಾಭಿವೃದ್ಧಿಗೆ ಹೆಚ್ಚಿಗೆ ಪ್ರೋತ್ಸಾಹ ನೀಡುತ್ತಿದೆ. ಮುಂದಿನ ಒಲಿಂಪಿಕ್ಸ್​ನಲ್ಲಿ ರಾಜ್ಯದಿಂದ ಕನಿಷ್ಠ 10 ಮಂದಿ ಸ್ಪರ್ಧಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕರ್ನಾಟಕದ ಕಬಡ್ಡಿ ಹಾಗೂ ಬಾಸ್ಕೆಟ್​ಬಾಲ್​ ತಂಡಗಳು ರಾಷ್ಟ್ರಮಟ್ಟದಲ್ಲಿ ಉತ್ತಮ ತಂಡಗಳಾಗಿವೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ಕ್ರೀಡೆ ಕ್ರಿಯಾಶೀಲ ಚಟುವಟಿಕೆ, ಕ್ರೀಡೆಯಿಂದ ಶಿಸ್ತು ಬರುತ್ತದೆ. ಜತೆಗೆ ಜೀವನವೂ ಕ್ರೀಡಾಸ್ಪೂರ್ತಿಯಾಗಿರುತ್ತದೆ ಎಂದು ತಿಳಿಸಿದರು. ಕ್ರೀಡೆಯಲ್ಲಿ ಯಾವಾಗಲೂ ಸಕಾರಾತ್ಮಕವಾಗಿ ಸ್ವೀಕರಿಸಬೇಕು, ಸೋಲಿಗೆ ಎದೆಗುಂದಬಾರದು, ಮೋದಿ ಆಶಯದಂತೆ ಖೇಲೋ ಇಂಡಿಯಾ, ಫಿಟ್​ ಇಂಡಿಯಾ ಹಾಗೂ ಜೀತೋ ಇಂಡಿಯಾ ಕಾರ್ಯರೂಪಕ್ಕೆ ಬರುತ್ತಿದೆ ಎಂದರು.
ಪ್ರಿಯಾ, ಶಿವ ಶ್ರೀಧರ್​ಗೆ ಅಭಿನಂದನೆಕೂಟ ದಾಖಲೆಯೊಂದಿಗೆ 7 ಸ್ವರ್ಣ ಪದಕ ಜಯಿಸಿದ ಈಜು ಪಟು ಶಿವ ಶ್ರೀಧರ್​ ಹಾಗೂ ಒಲಿಂಪಿಯನ್​ ದ್ಯುತಿ ಚಂದ್​ ಅವರನ್ನು ಮಹಿಳೆಯರ 200 ಮೀಟರ್​ ಓಟದಲ್ಲಿ ಹಿಂದಿಕ್ಕಿದ ಜೈನ್​ ವಿವಿ ತಂಡದ ಪ್ರಿಯಾ ಮೋಹನ್​ರನ್ನು ಇದೇ ವೇಳೆ ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಅಭಿನಂದಿಸಿದರು. ಕ್ರೀಡೆಗಳು ಸಾಕಷ್ಟು ಸ್ಪರ್ಧಾತ್ಮಕವಾಗಿದ್ದು, ಅದರಲ್ಲೂ ನಾನು ನೋಡಿದ ಕಬಡ್ಡಿ ತುಂಬಾ ಇಷ್ಟವಾಯಿತು. ಮುಂದಿನ ಪ್ರೊ ಕಬಡ್ಡಿ ಲೀಗ್​ನಲ್ಲಿ ಅವರೇ ಸ್ಟಾರ್​ ಆಟಗಾರರು ಆದರೂ ಅಚ್ಚರಿಯಿಲ್ಲ ಎಂದರು.
ನಟ ಸುದೀಪ್​ ಆಕರ್ಷಣೆಸ್ಯಾಂಡಲ್​ವುಡ್​ ನಟ ಸುದೀಪ್​ ಕಾರ್ಯಕ್ರಮದ ಕೇಂದ್ರ ಬಿಂದುವಾದರು. ಸಂಸದ ತೇಜಸ್ವಿ ಸೂರ್ಯ ಜತೆಗೆ ಸ್ಟೇಡಿಯಂಗೆ ಆಗಮಿಸಿದ ಸುದೀಪ್​, ಪ್ರೇಕ್ಷಕರತ್ತ ಕೈಬಿಸಿದರು. ಹಾಕಿ ಆಟಗಾರರು ಕುಳಿತಿದ್ದ ಗ್ಯಾಲರಿಯತ್ತ ತೆರಳಿ ಆಟಗಾರರಿಗೆ ಹಸ್ತಲಾವ ನೀಡಿದರು. ಇದೇ ವೇಳೆ ಪ್ರೇಕ್ಷಕರು ಕಿಚ್ಚ ಕಿಚ್ಚ ಎಂದು ಕೂಗುತ್ತ ಹುರಿದುಂಬಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + eleven =
Remember me
