ಬೆಂಗಳೂರು:ಮೋದಿ ಅವರು ಪ್ರಧಾನಿ ಆಗುವವರೆಗೂ ದೇಶದ ಸಾಲ 53 ಲಕ್ಷ ಕೋಟಿ ರೂಪಾಯಿ ಮಾತ್ರ ಇತ್ತು. ಆದರೆ ಈಗ ದೇಶದ ಸಾಲ 170 ಲಕ್ಷ ಕೋಟಿ ರೂ. ಆಗಿದೆ. ಪ್ರಧಾನಿ ಮೋದಿ ಅವಧಿಯಲ್ಲಿ 118 ಲಕ್ಷ ಕೋಟಿ ರೂ. ಸಾಲ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಸಾಲದ ಪ್ರಮಾಣವನ್ನು ಬಿಚ್ಚಿಟ್ಟರು.
ವಿಧಾನ ಪರಿಷತ್​ನಲ್ಲಿ 2023-24 ನೇ ಆಯವ್ಯಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಮೋದಿ ಪ್ರಧಾನಿ ಆಗುವವರೆಗೂ ದೇಶದ ಸಾಲ ಇದ್ದದ್ದು ಕೇವಲ 53 ಲಕ್ಷ ಕೋಟಿ ರೂಪಾಯಿ. ಆದರೆ, ಈ ಸಾಲವನ್ನು 170 ಲಕ್ಷ ಕೋಟಿ ರೂ.ಗೆ ಏರಿಸಿದ್ದೇ ಮೋದಿಯವರ ಸಾಧನೆ.
ಇದನ್ನೂ ಓದಿ:‘ಬೇಬಿ’ ಚಿತ್ರದ ಸಕ್ಸಸ್​ ಮೀಟ್​​ನಲ್ಲಿ ‘ಪುಷ್ಪಾ-2’ ಡೈಲಾಗ್​ ಹೊಡೆದ ಅಲ್ಲು ಅರ್ಜುನ್​; ಸುಳಿವು ಬಿಟ್ಟುಕೊಟ್ಟಿದ್ಯಾಕೆ ಎಂದ ಫ್ಯಾನ್ಸ್?
ಶ್ರೀಮಂತ ಕಾರ್ಪೋರೇಟರ್​ಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿ ಅವರು ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುತ್ತಾರೆ. ಕಚ್ಚಾತೈಲದ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್-ಡೀಸೆಲ್ ಬೆಲೆ ಈ ಮಟ್ಟಕ್ಕೆ ಏರಿಸಿದ್ದಾರೆ. ಹಾಲು-ಮೊಸರು-ಮಜ್ಜಿಗೆ- ಮಂಡಕ್ಕಿ ಮೇಲೂ ಜಿಎಸ್​ಟಿ ಹಾಕಿದರೆ ಬಡವರು, ಮಧ್ಯಮವರ್ಗದವರ ಗತಿ ಏನು ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಎದುರು ಸಾಲಿನಲ್ಲಿ ಜೆಡಿಎಸ್​ನ ಮರಿತಿಬ್ಬೇಗೌಡ ಮತ್ತು ಬಿಜೆಪಿಯ ಹೆಚ್.ವಿಶ್ವನಾಥ್ ಮಾತ್ರ ಕುಳಿತು ಉಳಿದವರೆಲ್ಲಾ ಬಹಿಷ್ಕರಿಸಿದ್ದರು. ಇದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಮರಿತಿಬ್ಬೇಗೌಡರು ಟೆಕ್ನಿಕಲಿ ಜೆಡಿಎಸ್​ನಲ್ಲಿದ್ದಾರೆ ಆದರೆ ವಾಸ್ತವವಾಗಿ ಅವರಿಗೆ ವಿರುದ್ಧವಿದ್ದಾರೆ. ಎಚ್. ವಿಶ್ವನಾಥ್ ಕೂಡ ಟೆಕ್ನಿಕಲಿ ಬಿಜೆಪಿಯಲ್ಲಿದ್ದಾರೆ. ಆದರೆ ಅವರು ಕೂಡ ವಾಸ್ತವವಾಗಿ ಬಿಜೆಪಿಗೆ ವಿರುದ್ಧವಿದ್ದಾರೆ ಎಂದು ಟೀಕಿಸಿದರು.
* ಮಹಾತ್ನಗಾಂಧಿ ಜೀವನ ಸಂದೇಶವೇ ಸತ್ಯ-ಅಹಿಂಸೆ ಆಗಿತ್ತು. ಸದಾ ಸುಳ್ಳು ಹೇಳುವ ಬಿಜೆಪಿಯವರು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಕುಳಿತಿದ್ದಾರೆ.*1949 ನವೆಂಬರ್ 25 ರಂದು ಅಂಬೇಡ್ಕರ್ ಅವರು ತಮ್ಮ ಐತಿಹಾಸಿಕ ಭಾಷಣದಲ್ಲಿ, “ನಮ್ಮ ಸಂವಿಧಾನ ಜನವರಿ 26 ರಿಂದ ಜಾರಿಗೆ ಬರುತ್ತದೆ. ಆದರೆ ಸಾಮಾಜಿಕ-ಆರ್ಥಿಕ‌ ಅಸಮಾನತೆ ದೇಶದಲ್ಲಿದೆ. ಈ ಅಸಮಾನತೆಯನ್ನು ಅಳಿಸದೇ ಹೋದರೆ ಜನರೇ ಈ ಸ್ವಾತಂತ್ರ್ಯ ಸೌಧವನ್ನು ಸುಟ್ಟು ಭಸ್ಮ ಮಾಡುತ್ತಾರೆ” ಎಂದಿದ್ದರು.‌ ಈ ಕಾರಣಕ್ಕೇ ಅಸಮಾನತೆ, ತಾರತಮ್ಯವನ್ನು ಅಳಿಸುವ ದೃಷ್ಟಿಯಿಂದ ಬಜೆಟ್​ನಲ್ಲಿ ಸರ್ವರಿಗೂ ಸಮಾನ ಅವಕಾಶ ಸಿಗುವ ಆಶಯದ ಕಾರ್ಯಕ್ರಮಗಳಿಗೆ ಮಹತ್ವ ನೀಡಿದ್ದೇನೆ.* ಬಸವಣ್ಣನವರ ದಾಸೋಹ ಮತ್ತು ಕಾಯಕ ಸಂಸ್ಕೃತಿಯ ಆಶಯ ನಮ್ಮ ಆಯವ್ಯಯದಲ್ಲಿದೆ. ಬಿಜೆಪಿಯವರು ಬಸವ ವಿರೋಧಿಗಳು.* ಬೆಂಕಿ ಹಚ್ಚುವುದೇ ಬಿಜೆಪಿ ಕೆಲಸ. ಅವರು ಮಣಿಪುರವನ್ನೂ ಬಿಡಲ್ಲ, ಕರ್ನಾಟಕವನ್ನೂ ಬಿಡಲ್ಲ. ಬೆಂಕಿ ಹಚ್ಚುತಾರೆ ಎಂದರು.* ಶ್ರಮಿಕರ, ಬಡವರ ಹಣ ಕಿತ್ತು ಶ್ರೀಮಂತ ಕಾರ್ಪೋರೇಟ್ ಗಳಿಗೆ ಕೊಡುವುದು ಬಿಜೆಪಿಯ ಆರ್ಥಿಕತೆ. ಈ ಕಾರಣಕ್ಕೇ ಹಾಲು, ಮೊಸರು, ಮಂಡಕ್ಕಿ ಮೇಲೂ ತೆರಿಗೆ ಹಾಕಿದ್ದಾರೆ. ಶ್ರೀಮಂತ ಕಾರ್ಪೋರೇಟರ್​ಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ, ರೈತರ ಸಾಲ ಮನ್ನಾ ಮಾಡಿ ಎಂದರೆ ಒಪ್ಪುತ್ತಿಲ್ಲ.
ಬೆತ್ತಲೆ ಮೆರವಣಿಗೆ ಕೇಸ್​: ದೇಶವನ್ನು ರಕ್ಷಿಸಿದ ನನಗೆ ಪತ್ನಿಯನ್ನು ರಕ್ಷಿಸಲಾಗಲಿಲ್ಲ, ನಿವೃತ್ತ ಯೋಧನ ಕಣ್ಣೀರು

ಸೌಜನ್ಯಾ ಪ್ರಕರಣ ಬಳಸಿಕೊಂಡು ಶ್ರೀಕ್ಷೇತ್ರದ ಪಾವಿತ್ರ್ಯತೆ ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ: ಡಾ| ವೀರೇಂದ್ರ ಹೆಗ್ಗಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
