– ಬೆಂಗಳೂರಿನ ಜಯನಗರ, ಮಹದೇವಪುರ ಸೇರಿ‌ 15 ಸ್ಥಳಗಳಲ್ಲಿ ಸಂವಾದ
ಬೆಂಗಳೂರು:ಡಬಲ್ ಇಂಜಿನ್ ಸರ್ಕಾರಕ್ಕೆ ಬಲ, ಕರ್ನಾಟಕದ ಅಭಿವೃದ್ಧಿ ವೇಗಕ್ಕೆ ಪೂರಕವಾಗಿ ರಾಜ್ಯದಲ್ಲಿ ಸ್ಪಷ್ಟ ಬಹುಮತದ ಸರ್ಕಾರ ಅಗತ್ಯವಿದೆ ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟು, ಹುರಿದುಂಬಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಏ.27ರ ಬೆಳಗ್ಗೆ 9ಕ್ಕೆ ವರ್ಚುವಲ್ ವೇದಿಕೆ ಮೂಲಕ ಭಾಷಣ ಮಾಡಲಿದ್ದಾರೆ ಎಂದು ಕೇಂದ್ರ ಸಚಿವೆ, ಪಕ್ಷದ ಚುನಾವಣೆ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ತಿಳಿಸಿದರು.
ಇದನ್ನೂ ಓದಿ:ಕೇರಳದ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಪ್ರಧಾನಿ ಮೋದಿ ಚಾಲನೆಪಕ್ಷದ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಟಲ್ ವೇದಿಕೆ ಮೂಲಕ 58,112 ಬೂತ್ ಗಳು, 1680 ಜಿ.ಪಂ ವ್ಯಾಪ್ತಿ ( ಮಹಾ ಶಕ್ತಿ ಕೇಂದ್ರ) ಯಲ್ಲಿ ಎಲ್ ಇಡಿ ಪರದೆಯಲ್ಲಿ ಮೋದಿ ಭಾಷಣ ಪ್ರಸಾರವಾಗಲಿದ್ದು, ಈ ಸ್ಥಳಗಳಲ್ಲಿ ಒಂದು ಸಾವಿರ ಜನರು, 200 ಕಾರ್ಯಕರ್ತರು ಸೇರಲಿದ್ದು, ಇದಕ್ಕಾಗಿ 650 ಎಲ್ಇಡಿ ಪರದೆಗಳ ಅಳವಡಿಸಲಾಗುತ್ತಿದೆ. ಜತೆಗೆ 24 ಲಕ್ಷ ಕಾರ್ಯಕರ್ತರಿಗೆ ಮೋದಿ ಆ್ಯಪ್ ನ ಲಿಂಕ್ ಕಳುಹಿಸಲಾಗಿದೆ. ಈ ಆ್ಯಪ್ ಮೂಲಕವೂ ಮೋದಿಯವರ ಸಂವಾದ ವೀಕ್ಷಣೆ ಮಾಡಲಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಜಯನಗರ, ಮಹದೇವಪುರ, ದೊಡ್ಡಬಳ್ಳಾಪುರ ಒಳಗೊಂಡು ರಾಜ್ಯದ 15 ಸ್ಥಳಗಳಲ್ಲಿ ಕಾರ್ಯಕರ್ತರ‌ ಜತೆಗೆ ಡಿಜಿಟಲ್ ವೇದಿಕೆ ಮುಖೇನ ಮೋದಿ ಸಂವಾದ ನಡೆಸಿ, ಡಬಲ್ ಇಂಜಿನ್ ಸರ್ಕಾರದ ಮಹತ್ವದ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಲು ತಿಳಿಸಲಿದ್ದಾರೆ.
ಇದನ್ನೂ ಓದಿ:37.80 ಕೋಟಿ ರೂ. ಬೆಲೆ ಬಾಳುವ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಆಲಿಯಾ ಭಟ್!ಲಭ್ಯ 15 ದಿನಗಳ ಅವಧಿಯಲ್ಲಿ ಅಭ್ಯರ್ಥಿಗಳು ಎಲ್ಲ ಮತದಾರರ ಮನೆಗೆ ಮುಟ್ಟಲಾಗದು. ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳ ಪರ ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ. ಕಾರ್ಯಕರ್ತರ ದೊಡ್ಡ ಪಕ್ಷ ಅಂದರೆ ಅದು ಬಿಜೆಪಿ ನಮ್ಮದು ಕಾರ್ಯಕರ್ತರ ಶ್ರಮದ ಮೇಲೆ ಗೆಲ್ಲುವ ಪಕ್ಷ. ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ, ಡಬಲ್ ಇಂಜಿನ್ ಸರ್ಕಾರ ಬರಬೇಕು ಅನ್ನೋದು ಎಲ್ಲರ ಆಶಯವೆಂದು ಶೋಭಾ ಕರಂದ್ಲಾಜೆ ಹೇಳಿದರು.
ಸುಪ್ರೀಂಗೆ ಮತ್ತೆ ಮೊರೆ:ಸಂವಿಧಾನಬಾಹಿರವಾದ ಮುಸ್ಲಿಮ್ ಮೀಸಲು ಒಪ್ಪಲಾಗದು. ಶೇ4ರಷ್ಟು ಮೀಸಲು ರದ್ದುಪಡಿಸಿದ ರಾಜ್ಯ ಸರ್ಕಾರದ ನಿರ್ಧಾರ ಸರಿಯಾಗಿದೆ. ಸುಪ್ರೀಂ ಕೋರ್ಟ್ ಯಾವ ಭಾವನೆಯಲ್ಲಿ ತಡೆಯಾಜ್ಞೆ ನೀಡಿದೆಯೋ ಗೊತ್ತಿಲ್ಲ. ಆದರೆ, ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಿಗೆ ಅವಕಾಶವಿಲ್ಲ. ಮತ್ತೊಮ್ಮೆ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿ ಮನವರಿಕೆ ಮಾಡಿಕೊಡುತ್ತೇವೆ ಎಂದು ಶೋಭಾ ಕರಂದ್ಲಾಜೆ ಉತ್ತರಿಸಿದರು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇದ್ದರು.
ಭಾರತೀಯ ರೈಲ್ವೆ: ರೈಲು ಬೋಗಿಗಳಲ್ಲಿ ಬರೆಯಲಾದ 5 ಅಂಕಿಗಳ ರಹಸ್ಯವೇನು ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − five =
Remember me
