ಬೆಂಗಳೂರು:ರಾಜ್ಯದ 25 ಬಿಜೆಪಿ ಸಂಸದರು ತಮ್ಮ ಸ್ವಾಭಿಮಾನವನ್ನು ಚಿಪ್ಪಿನೊಳಗೆ ಎಳೆದುಕೊಂಡ ಮೃದ್ವಂಗಿಗಳಂತೆ ಜಡವಾಗಿದ್ದಾರೆ ಎಂದು ಟೀಕಿಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ರಣಭೀಕರ ಮಳೆಯಾಗಿದ್ದು, ಉತ್ತರ ಕರ್ನಾಟಕದಲ್ಲಿ ಜನರ ಬದುಕು ಮೂರಾಬಟ್ಟೆಯಾಗಿದೆ. ಈ ಸಂದರ್ಭದಲ್ಲಿ ಸರಣಿ ಟ್ವೀಟ್​ ಮಾಡಿರುವ ದಿನೇಶ್​ ಗುಂಡೂರಾವ್​, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸರ್ಕಾರ ತೆರೆದಿರುವ ಪರಿಹಾರ ಕೇಂದ್ರಗಳು ನಿರಾಶ್ರಿತರ ಪಾಲಿಗೆ ನರಕ ಕೇಂದ್ರಗಳಾಗಿವೆ. ಸರಿಯಾದ ವ್ಯವಸ್ಥೆಯಿಲ್ಲದೆ, ಊಟ ಉಪಚಾರವಿಲ್ಲದೆ ನೆರೆ ಸಂತ್ರಸ್ತರು ಪರದಾಡುತ್ತಿರುವ ಬಗ್ಗೆ ವರದಿ ಬರುತ್ತಿದೆ. ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ಕರ್ನಾಟಕದ ನೆರವಿಗೆ ಬಂದಿಲ್ಲ ಎಂದು ಜಾಡಿಸಿದ್ದಾರೆ. ನೆರೆಯ ಆಂಧ್ರ ಮತ್ತು ತೆಲಂಗಾಣದಲ್ಲಿ ಸುರಿದ ಮಳೆ ಮಾತ್ರ ಪ್ರಧಾನಿ ಅವರಿಗೆ ಕಾಣಿಸಿದೆ. ನಮ್ಮ ರಾಜ್ಯದ ಮಳೆ ಪ್ರವಾಹದ ಬಗ್ಗೆ ಪರಿಹಾರವಿರಲಿ, ಸೌಜನ್ಯಕ್ಕೂ ಸಾಂತ್ವನ ಹೇಳುವ ಮನಸ್ಸು ಕೂಡ ಪ್ರಧಾನಿಯವರಿಗಿಲ್ಲ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದರೂ ಸೂಕ್ತ ಪರಿಹಾರ ಸಿಗುತ್ತಿಲ್ಲ. ಈ ಸಂಸದರು ಸ್ವಾಭಿಮಾನವನ್ನು ಚಿಪ್ಪಿನೊಳಗೆ ಎಳೆದುಕೊಂಡ ಮೃದ್ವಂಗಿಗಳಂತೆ ಜಡವಾಗಿದ್ದಾರೆ. ಜನರ ಶಾಪ ತಟ್ಟುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಮಾತಿನಲ್ಲೇ ಚಾಟಿ ಬೀಸಿರುವ ದಿನೇಶ್​ ಗುಂಡೂರಾವ್​, ರಾಜ್ಯ ಸರ್ಕಾರಕ್ಕೆ ಪ್ರವಾಹ ಪರಿಸ್ಥಿತಿ ನಿಭಾಯಿಸುವದಕ್ಕಿಂತಲೂ ಉಪ ಚುನಾವಣೆಯೇ ಮುಖ್ಯವಾದಂತಿದೆ ಎಂದು ಲೇವಡಿ ಮಾಡಿದ್ದಾರೆ.
ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸುವ ಕನಿಷ್ಠ ಕಾಳಜಿಯೂ ಸರ್ಕಾರಕ್ಕೆ ಇದ್ದಂತೆ ಕಾಣಿಸುತ್ತಿಲ್ಲ. ತೋರುಗಾಣಿಕೆಯ‌ ಪರಿಹಾರ ಕ್ರಮವನ್ನೇ ದೊಡ್ಡ ಸಾಧನೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದೆ. ಮನೆ ಮಠ ಇಲ್ಲದೆ ನೊಂದ ಸಂತ್ರಸ್ತರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪ್ರಧಾನ ಮಂತ್ರಿಯವರಿಗೆ ನೆರೆಯ ಆಂಧ್ರ ಮತ್ತು ತೆಲಂಗಾಣದಲ್ಲಿ ಸುರಿದ ಮಳೆ ಮಾತ್ರ ಕಾಣಿಸಿದೆ. ನಮ್ಮ ರಾಜ್ಯದ ಮಳೆ ಪ್ರವಾಹದ ಬಗ್ಗೆ ಪರಿಹಾರವಿರಲಿ, ಸೌಜನ್ಯಕ್ಕೂ ಸಾಂತ್ವಾನ ಹೇಳುವ ಮನಸ್ಸು ಪ್ರಧಾನಿಯವರಿಗಿಲ್ಲ.
ಇಷ್ಟಿದ್ದರೂ ರಾಜ್ಯದ 25 ಬಿಜೆಪಿ ಸಂಸದರು ತಮ್ಮ ಸ್ವಾಭಿಮಾನವನ್ನು ಚಿಪ್ಪಿನೊಳಗೆ ಎಳೆದುಕೊಂಡ ಮೃದ್ವಂಗಿಗಳಂತೆ ಜಡವಾಗಿದ್ದಾರೆ.pic.twitter.com/a1DTwSz8C8
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao)October 16, 2020

ಗ್ರಾಪಂ ಚುನಾವಣೆ: ಸರ್ಕಾರಕ್ಕೆ ಬೇಡ, ಆಯೋಗಕ್ಕೆ ಬೇಕು… ಹೈಕೋರ್ಟ್​ ಏನ್​ ಹೇಳುತ್ತೆ?

ನೊಂದ ಹೆಣ್ಣು ಮಗಳ ಮೇಲೆ ಕೇಸ್ ಹಾಕಿದ್ದು ಎಷ್ಟು ಸರಿ? ನಾವು ಬೇಲ್​ ಪಡೆಯಲ್ಲ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + eight =
Remember me
