ರಾಯಚೂರು:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಯನ್ನು ವಿಷ ಸರ್ಪ ಎಂದು ಹೇಳಿದ್ದರು. ಬಳಿಕ ಅವರ ಪುತ್ರ ಪ್ರಿಯಾಂಕ್ ಖರ್ಗೆ ಮೋದಿಯನ್ನು ನಾಲಾಯಕ್ ಎಂದು ಕರೆದಿದ್ದರು. ಟೀಕೆಯ ಭರಾಟೆಯಲ್ಲಿ ಬಂದ ಈ ಎರಡು ಹೇಳಿಕೆಗಳು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಪ್ರಧಾನಿ ಮೋದಿ ರಾಯಚೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆ ಹರಿತವಾದ ಮಾತಿನ ಮೂಲಕವೇ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ:ಕರ್ನಾಟಕವನ್ನು ಸಮೃದ್ಧ, ಸುರಕ್ಷಿತ ರಾಜ್ಯವಾಗಿಸಲು ಮೋದಿಯಿಂದ ಮಾತ್ರ ಸಾಧ್ಯ: ಅಮಿತ್​ ಶಾ ಹೇಳಿಕೆ
ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದೆಹಲಿ ಕುಟುಂಬವನ್ನು ಮೆಚ್ಚಿಸಲು ನನ್ನನ್ನು ನಿರಂತರವಾಗಿ ಟೀಕಿಸುತ್ತಾ ಬರುತ್ತಿದ್ದಾರೆ. ಕಾಂಗ್ರೆಸ್​ನವರ ಬೈಗುಳಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಚುನಾವಣೆಯಲ್ಲಿ ಜನರೇ ಉತ್ತರ ಕೊಡುತ್ತಾರೆ ಎಂದು ಟಾಂಗ್ ಕೊಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಅಹಂಕಾರ ತುಂಬಿ ತುಳುಕುತ್ತಿದ್ದು, ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಈ ಮೂಲಕ ದೊಡ್ಡ ಪರಂಪರೆ ಹೊಂದಿರುವ ಕರ್ನಾಟಕದ ಗೌರವ ಹಾಳು ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನನ್ನನ್ನು ವಿಷ ಸರ್ಪ ಎಂದರೆ, ಅವರ ಪುತ್ರ ಪ್ರಿಯಾಂಕ್ ಖರ್ಗೆ ನಾಲಾಯಕ್ ಎಂದು ಹೇಳಿದ್ದಾರೆ. ಇದಕ್ಕೆಲ್ಲ ಚುನಾವಣೆಯಲ್ಲಿ ಜನರೇ ಉತ್ತರಿಸುತ್ತಾರೆ ಎಂದರು.
ಇದನ್ನೂ ಓದಿ:ಡಿಕೆಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ಗೆ ಬಡಿದ ರಣಹದ್ದು; ಗ್ಲಾಸ್​ ಪುಡಿಪುಡಿ, ತಪ್ಪಿದ ಅನಾಹುತ
ಪ್ರಧಾನಿ ಮೋದಿ ಮಾತನಾಡುತ್ತಾ, ಈ ಬಾರಿ ಕಾಂಗ್ರೆಸ್ ಕರ್ನಾಟಕದ ಮಹಾಪರಂಪರೆಯನ್ನು ಬೆಂಕಿಗೆ ಹಾಕುವ ಪ್ರಯತ್ನ ಮಾಡುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್​ನ ಅವಾಚ್ಯ ಶಬ್ದಗಳು, ನಿಂದನೆ, ಅವರ ಮಾತುಗಳಿಂದ ಕೇವಲ ರಾಜ್ಯವಲ್ಲದೆ, ದೇಶವೇ ರೋಸಿಹೋಗಿದೆ ಎಂದು ಕುಟುಕಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + five =
Remember me
