ಬೆಂಗಳೂರು:ಸಬ್​ ಇನ್​ಸ್ಪೆಕ್ಟರ್​ ನೇಮಕಾತಿಯಲ್ಲಿ ಅಭ್ಯರ್ಥಿಗಳ ಮತ್ತು ಅಧಿಕಾರಿಗಳ ನಡುವೆ ಏಜೆಂಟ್​ ಆಗಿದ್ದ ಸೇವಾನಿರತ (ಇನ್​ಸರ್ವಿಸ್​) ಪೊಲೀಸರಿಗೆ ಬಂಧನ ಭೀತಿ ಶುರುವಾಗಿದೆ. ಮಾಹಿತಿ ನೀಡದೆ ವಾರಗಟ್ಟಲೇ ಕರ್ತವ್ಯಕ್ಕೆ ಗೈರಾಗುತ್ತಿದ್ದು, ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ. 545 ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಸಿಐಡಿ ಅಧಿಕಾರಿಗಳು ನೇಮಕಾತಿ ವಿಭಾಗದ ಡಿವೈಎಸ್​ಪಿ ಶಾಂತಕುಮಾರ್​, ಎಫ್​ಡಿಎ ಹರ್ಷ, ಸಶಸ ಮೀಸಲು ಪಡೆ ಎಸ್​ಐ ಲೋಕೇಶ್​, ಹೆಡ್​ ಕಾನ್​ಸ್ಟೇಬಲ್​ ಲೋಕೇಶ್​, ಎಸ್​ಡಿಎ ಶ್ರೀಧರ್​ ಎಂಬುವರನ್ನು ಬಂಧಿಸಿದ್ದಾರೆ.
ಇದಲ್ಲದೆ, ಆರೋಪಿಗಳನ್ನು ಕಸ್ಟಡಿಗೆ ಪಡೆದು ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಸಿಐಡಿ ಅಧಿಕಾರಿಗಳು ಇವರ ಲಾನುಭವಿಗಳು ಮತ್ತು ಸಂಪರ್ಕದಲ್ಲಿ ಇರುವ ದಲ್ಲಾಳಿಗಳು, ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ಪತ್ತೆಗೆ ಬಲೆಬೀಸಿದ್ದಾರೆ. ಅಭ್ಯರ್ಥಿಗಳು ಮತ್ತು ನೇಮಕಾತಿ ವಿಭಾಗದ ಕಿಂಗ್​ಪಿನ್​ಗಳ ನಡುವೆ ದಲ್ಲಾಳಿ ಕೆಲಸ ಮಾಡಿಕೊಂಡು ಕೆಲ ಸೇವಾನಿರತ ಅಧಿಕಾರಿ, ಸಿಬ್ಬಂದಿ ಕಮಿಷನ್​ ಪಡೆದಿದ್ದಾರೆ. ಇದೀಗ ಅಧಿಕಾರಿಗಳೇ ಸಿಐಡಿ ಬಲೆಗೆ ಸಿಕ್ಕಿಬಿದ್ದಿರುವ ಕಾರಣ, ಯಾರ ಕಡೆಯಿಂದ ಸಂಪರ್ಕ ಲಭ್ಯವಾಗಿದೆ ಎಂಬುದು ಬಾಯ್ಬಿಟ್ಟರೆ ತಾವೂ ಬಂಧನಕ್ಕೆ ಒಳಗಾಗುತ್ತೇವೆ ಎಂಬ ಕಾರಣಕ್ಕೆ ಕಚೇರಿಯತ್ತ ಮುಖ ಮಾಡುತ್ತಿಲ್ಲ. ಪಶ್ಚಿಮ ವಿಭಾಗದ ಠಾಣೆಯೊಂದರಲ್ಲಿ ಇಬ್ಬರು ಸಬ್​ಇನ್​ಸ್ಪೆಕ್ಟರ್​ಗಳು ಏಕಾಏಕಿ ಕರ್ತವ್ಯದಿಂದ ದೂರ ಉಳಿದಿದ್ದಾರೆ. ಈ ವಿಚಾರ ಮೇಲಧಿಕಾರಿಗಳ ಗಮನಕ್ಕೂ ಬಂದಿಲ್ಲ. ಸಹೋದ್ಯೋಗಿಗಳ ಸಂಪರ್ಕಕ್ಕೂ ಸಿಗುತ್ತಿಲ್ಲ. ಮತ್ತೊಂದೆಡೆ, ಗೈರಾಗುತ್ತಿರುವ ಪೊಲೀಸರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಗೊಂದಲ ಸೃಷ್ಟಿಯಾಗಿದೆ.
ಎಸ್​ಐ ನೇಮಕಾತಿ ಅಕ್ರಮದಲ್ಲಿ ಇವರ ಕೈವಾಡ ಇರುವ ಬಗ್ಗೆ ಸ್ನೇಹಿತರ ಬಳಗದಲ್ಲಿ ಗುಸುಗುಸು ಚರ್ಚೆಗಳು ನಡೆಯುತ್ತಿವೆ. ಅಡ್ಡದಾರಿಯಲ್ಲಿ ಬಂದವರಿಂದಲೇ ಡೀಲ್​: ಇಲಾಖೆಗೆ ವಾಮಮಾರ್ಗದಲ್ಲಿ ಸೇರ್ಪಡೆಯಾಗಿರುವ ಕಾನ್​ಸ್ಟೇಬಲ್​ ಮತ್ತು ಎಸ್​ಐಗಳು ಅಕ್ರಮದಲ್ಲಿ ತೊಡಗಿರುವ ಶಂಕೆ ವ್ಯಕ್ತವಾಗಿದೆ. ನೇಮಕಾತಿ ವೇಳೆ ತಮಗೆ ಸಹಾಯ ಮಾಡಿದ್ದ ಅಧಿಕಾರಿಗಳನ್ನೇ ಸಂಪರ್ಕ ಮಾಡಿ ದಲ್ಲಾಳಿ ಕೆಲಸ ಮಾಡಿದ್ದಾರೆ. 5ರಿಂದ 10 ಲಕ್ಷ ರೂ. ಕಮಿಷನ್​ ಪಡೆದು ನೌಕರಿ ಕೊಡಿಸಿರುವ ಆರೋಪ ಕೇಳಿ ಬಂದಿವೆ. ಅಕ್ರಮದಲ್ಲಿ ತೊಡಗಿರುವ ಸೇವಾನಿರತ ಪೊಲೀಸ್​ ಅಧಿಕಾರಿ, ಸಿಬ್ಬಂದಿ ನೇಮಕಾತಿ ದಾಖಲೆ ಪರಿಶೀಲನೆ ನಡೆಸಿದರೆ ವಾಮಮಾರ್ಗದಲ್ಲಿಯೇ ಇಲಾಖೆಗೆ ಸೇರಿರುವ ಬಗ್ಗೆ ಸ್ಫೋಟಕ ಮಾಹಿತಿ ಹೊರಬರಬಹುದು. ಇದರಿಂದ ಅಕ್ರಮವನ್ನು ಶಾಶ್ವತವಾಗಿ ತೊಲಗಿಸಲು ಸಾಧ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಎಲ್​ಎ ಆಗುವ ಬಯಕೆಕಲಬುರಗಿ: ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮದ ಕಿಂಗ್​ಪಿನ್​ ಆರ್​.ಡಿ. ಪಾಟೀಲ್​ ಅಲಿಯಾಸ್​ ರುದ್ರಗೌಡ ಜೈಲಿಗೆ ಹೋದ ಕೆಲ ದಿನಗಳಲ್ಲೇ ಹೊರಬರುವುದಾಗಿ ಹೇಳಿ ದೊಡ್ಡ ಮಟ್ಟದಲ್ಲಿ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮ ಆಯೋಜಿಸುವಂತೆ ಬೆಂಬಲಿಗರಿಗೆ ಫರ್ಮಾನು ಹೊರಡಿಸಿರುವ ವಿಷಯ ಹೊರಬಿದ್ದಿದೆ. ಈ ಬಾರಿ ಹೇಗಾದರೂ ಮಾಡಿ ಎಂಎಲ್​ಎ ಚುನಾವಣೆ ಅಖಾಡಕ್ಕೆ ಇಳಿಯಲು ಪ್ಲಾನ್​ ಮಾಡಿಕೊಂಡಿದ್ದ. ಜೈಲಿಗೆ ಹೋದರೆ ಒಂದೆರಡು ದಿನಗಳಲ್ಲಿ ಜಾಮೀನು ಪಡೆದು ಹೊರಗಡೆ ಬರುತ್ತೇನೆ. ನನ್ನನ್ನು ಸ್ವಾಗತಿಸಲು ಬೃಹತ್​ ಪ್ರಮಾಣದಲ್ಲಿ ತಯಾರಿ ಮಾಡಿಕೊಳ್ಳಿ. ಅಲ್ಲದೆ, ಅಫಲಪುರದಲ್ಲಿ ಸನ್ಮಾನ ಸಮಾರಂಭ ಏರ್ಪಸುವ ಮೂಲಕ ರಾಜಕೀಯ ಶಕ್ತಿ ಪ್ರದರ್ಶಿಸುವ ನಿಟ್ಟಿನಲ್ಲಿ ಯೋಚನೆ ಮಾಡಿದ್ದ ಅಂಶ ಬಯಲಿಗೆ ಬಂದಿದೆ.
ಹೆಡ್​ ಮಾಸ್ಟರ್​ ಕಾಶೀನಾಥಗೆ ಫುಲ್​ ಡ್ರಿಲ್​ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆ ಹೆಡ್​ ಮಾಸ್ಟರ್​ ಕಾಶೀನಾಥ ಚಿಲ್​ನನ್ನು ಭಾನುವಾರ ದಿನವಿಡೀ ಅಧಿಕಾರಿಗಳು ಡ್ರಿಲ್​ ಮಾಡುವ ಮೂಲಕ ತೀವ್ರ ವಿಚಾರಣೆಗೆ ಒಳಪಡಿಸಿದರು. ಕಲಬುರಗಿಯಲ್ಲಿರುವ ಸಿಐಡಿ ಕ್ಯಾಂಪ್​ ಕಚೇರಿಗೆ ಕಾಶೀನಾಥ ನನ್ನು ಕರೆತಂದ ಅಧಿಕಾರಿಗಳು, ಎಂಎಸ್​ಐ ಡಿಗ್ರಿ ಕಾಲೇಜಿನಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಶ್ನಾವಳಿ ಮೂಲಕ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದರು. ಹಲವು ವಿಷಯಗಳನ್ನು ಕಾಶೀನಾಥ ಬಾಯ್ಬಿಟ್ಟಿದ್ದು, ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
