ಬೆಂಗಳೂರು: ಪೊಲೀಸರ ಎಫ್​ಐಆರ್​ ಕಾಪಿ, ದಾಖಲಾದ ದೂರಿನ ಪ್ರತಿಗಳನ್ನು ನೋಡಿದವರಿಗೆ ಅವರು ಬಳಸುವ ಭಾಷೆಯ ಏಕತಾನತೆಯ ಅರಿವು ಚೆನ್ನಾಗಿ ಗೊತ್ತಿರುತ್ತದೆ. ಅದಾಗ್ಯೂ ಇತ್ತೀಚೆಗೆ ಪೊಲೀಸರಲ್ಲೂ ಕ್ರಿಯೇಟಿವಿಟಿ ಕಂಡು ಬರುತ್ತಿದೆ.
ಅರ್ಥಾತ್ ಪೊಲೀಸರು ಬಳಸುವ ಭಾಷೆ-ಬರವಣಿಗೆಯಲ್ಲೂ ಸೃಜನಶೀಲತೆ ಕಾಣಿಸಲಾರಂಭಿಸಿದೆ. ಇದು ಪೊಲೀಸ್ ಇಲಾಖೆಯ ಕೆಲವು ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್​ಗಳ ಪ್ರಕಟಣೆ ಮೂಲಕ ಬಹಿರಂಗಗೊಳ್ಳುತ್ತಿದೆ.
ಇದನ್ನೂ ಓದಿ:ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!
ವೃತ್ತಿಪರ ಕಂಟೆಂಟ್​ ಎಕ್ಸ್​ಪರ್ಟ್​ಗಳ ರೀತಿಯಲ್ಲಿ ಪೊಲೀಸರ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಪ್ರಕಟಣೆಗಳು ಕಂಡುಬರುತ್ತಿವೆ. ಆ ಮೂಲಕ ಪೊಲೀಸರು ಕೂಡ ಯುವ ಮನಸುಗಳಿಗೆ, ಸೃಜನಶೀಲತೆಗೆ, ಬದಲಾಗುತ್ತಿರುವ ಟ್ರೆಂಡ್​ಗೆ ತಕ್ಕಂತೆ ತೆರೆದುಕೊಳ್ಳಲಾರಂಭಿಸಿದ್ದಾರೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಇದಕ್ಕೆ ತಾಜಾ ಉದಾಹರಣೆ ಸೈಬರ್ ಕ್ರೈಂ ಜಾಗೃತಿಗಾಗಿ ಬೆಂಗಳೂರು ಪೊಲೀಸರ ಎಕ್ಸ್​ ಹ್ಯಾಂಡಲ್​ನಿಂದ ಪೋಸ್ಟ್ ಆಗಿರುವ ಒಂದು ಜಾಗೃತಿಯ ಬರಹ. ಪಾಸ್​ವರ್ಡ್​ ಹೇಗಿರಬೇಕು ಎಂಬುದನ್ನೂ ಪೊಲೀಸರು ಓಣಂ ಹಬ್ಬದ ಭೋಜನದ ಮೂಲಕ ವಿವರಿಸಿದ್ದಾರೆ.
ಇದನ್ನೂ ಓದಿ:ಮೆಟ್ರೋ ರೈಲುಗಳಲ್ಲಿ ರೀಲ್ಸ್ ಮಾಡುವಂತಿಲ್ಲ: ಕ್ರಿಯೇಟಿವ್ ಆಗಿಯೇ ಸೂಚನೆ ಕೊಟ್ಟ ಡಿಎಂಆರ್​ಸಿ
“ನಿಮ್ಮ ಪಾಸ್‌ವರ್ಡ್‌ ಹೇಗಿರಬೇಕು? ‘ಓಣಂ ಸದ್ಯ’ ಭೋಜನದಲ್ಲಿರುವ ವೈವಿಧ್ಯತೆ ಗಮನಿಸಿದ್ದೀರಾ? ನಿಮ್ಮ ಪಾಸ್‌ವರ್ಡ್‌ಗಳನ್ನು ಹಾಕುವಾಗಲೂ ಅದನ್ನು ವೈವಿಧ್ಯಮಯವಾಗಿ ಮಾಡುವ ಮೂಲಕ ಯಾರೂ ಊಹಿಸಿ ವಂಚನೆ ಮಾಡದಂತೆ ಸದೃಢಪಡಿಸಿಕೊಳ್ಳಿ. ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು!” ಎಂದಿರುವ ಪೊಲೀಸರು ಪಾಸ್​​ವರ್ಡ್​ ರಚನೆ ಹೇಗಿರಬೇಕು ಎಂದು ತಿಳಿಸಿದ್ದಾರೆ.
ನಿಮ್ಮ ಪಾಸ್‌ವರ್ಡ್‌ ಹೇಗಿರಬೇಕು'ಓಣಂ ಸಧ್ಯ' ಭೋಜನದಲ್ಲಿರುವ ವೈವಿಧ್ಯತೆ ಗಮನಿಸಿದ್ದೀರಾ? ನಿಮ್ಮ ಪಾಸ್‌ವರ್ಡ್‌ಗಳನ್ನು ಹಾಕುವಾಗಲೂ ಅದನ್ನು ವೈವಿಧ್ಯಮಯವಾಗಿ ಮಾಡುವ ಮೂಲಕ ಯಾರೂ ಊಹಿಸಿ ವಂಚನೆ ಮಾಡದಂತೆ ಸದೃಢಪಡಿಸಿಕೊಳ್ಳಿ.ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು !#BeCyberSafe#CyberScampic.twitter.com/WEsXEUI46e— ಬೆಂಗಳೂರು ನಗರ ಪೊಲೀಸ್‌ BengaluruCityPolice (@BlrCityPolice)August 29, 2023
ನಿಮ್ಮ ಪಾಸ್‌ವರ್ಡ್‌ ಹೇಗಿರಬೇಕು'ಓಣಂ ಸಧ್ಯ' ಭೋಜನದಲ್ಲಿರುವ ವೈವಿಧ್ಯತೆ ಗಮನಿಸಿದ್ದೀರಾ? ನಿಮ್ಮ ಪಾಸ್‌ವರ್ಡ್‌ಗಳನ್ನು ಹಾಕುವಾಗಲೂ ಅದನ್ನು ವೈವಿಧ್ಯಮಯವಾಗಿ ಮಾಡುವ ಮೂಲಕ ಯಾರೂ ಊಹಿಸಿ ವಂಚನೆ ಮಾಡದಂತೆ ಸದೃಢಪಡಿಸಿಕೊಳ್ಳಿ.ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು !#BeCyberSafe#CyberScampic.twitter.com/WEsXEUI46e
ಹಾಗೆಯೇ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಆದ ದಿನ ವ್ಹೀಲಿಂಗ್ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದನ್ನು ಹುಬ್ಬಳ್ಳಿ ಪೊಲೀಸರು ‘ಕೆಜಿಎಫ್​’ ಸಿನಿಮಾದ ಸಂಭಾಷಣೆ ರೀತಿಯಲ್ಲಿ ಕ್ರಿಯೇಟಿವ್ ಆಗಿ ಪ್ರಕಟಿಸಿದ್ದರು.
“August 23..ಆವತ್ತು ಎರಡು ಘಟನೆಗಳು ನಡೆದವು..👇1. ‘ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ 🚀 ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು’..💐2. ಬೈಕ್​​ನ ಚಕ್ರವನ್ನು ಮೇಲೆತ್ತಿ wheeling ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು..💪🚔 ” ಎಂದು ತಮ್ಮ ಅಧಿಕೃತ ಎಕ್ಸ್​ ಹ್ಯಾಂಡಲ್​ನಲ್ಲಿ ಹುಬ್ಬಳ್ಳಿ ಪೊಲೀಸರು ಪ್ರಕಟಿಸಿದ್ದರು.
August 23ಆವತ್ತು ಎರಡು ಘಟನೆಗಳು ನಡೆದವು..👇1. 'ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ 🚀 ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು'..💐2. ಬೈಕ್ ನ ಚಕ್ರವನ್ನು ಮೇಲೆತ್ತಿ wheeling ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು..💪🚔#Chandrayaan3#VikramLander#IndiaOnMoon#ISROpic.twitter.com/4QfOfeZYnd— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc)August 23, 2023
August 23ಆವತ್ತು ಎರಡು ಘಟನೆಗಳು ನಡೆದವು..👇1. 'ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ 🚀 ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು'..💐2. ಬೈಕ್ ನ ಚಕ್ರವನ್ನು ಮೇಲೆತ್ತಿ wheeling ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು..💪🚔#Chandrayaan3#VikramLander#IndiaOnMoon#ISROpic.twitter.com/4QfOfeZYnd
ಕೋಚಿಂಗ್​ಗೆ ತೆರಳುವ ಮಕ್ಕಳೊಂದಿಗೆ ಮನೆ ಬಿಡುತ್ತಿರುವ ತಂದೆ-ತಾಯಿ, ಅಜ್ಜ-ಅಜ್ಜಿ; ಕಾರಣ ಭಯಾನಕ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
