ಬೆಂಗಳೂರು:ರೌಡಿ, ಗೂಂಡಾಗಳು, ಕ್ರಿಮಿನಲ್‌ಗಳ ಜೊತೆ ಖಾಕಿ ಪಡೆಯ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಬೀಳ್ಕೊಡುಗೆ, ಸ್ವಾಗತ ಸಮಾರಂಭ ಆಚರಣೆಗೆ ರಾಜ್ಯ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ.
ಪೊಲೀಸರು ವರ್ಗಾವಣೆ, ಬಡ್ತಿ, ಮದುವೆ ವಾರ್ಷಿಕೋತ್ಸವ ಮತ್ತು ಹುಟ್ಟುಹಬ್ಬದ ವೇಳೆ ಅಪರಾಧ ಹಿನ್ನೆಲೆಯುಳ್ಳವರ ಅಥವಾ ರೌಡಿಗಳ ಜೊತೆಗೆ ಕೇಕ್ ಕತ್ತರಿಸಿ ಪಾರ್ಟಿ ಮಾಡುತ್ತಿರುವ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಬಗ್ಗೆ ಸಾರ್ವಜನಿಕ ವಲಯಕ್ಕೆ ತಪ್ಪು ಸಂದೇಶ ಹೋಗುತ್ತಿವೆ. ಶಿಸ್ತಿನ ಇಲಾಖೆ ಪೊಲೀಸರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪರಿಣಾಮ ಪೊಲೀಸರ ಕುರಿತು ತಪ್ಪು ಸಂದೇಶ ರವಾನೆಯಾಗುತ್ತಿದೆ. ಸಮಾಜಘಾತುಕ ವ್ಯಕ್ತಿಗಳು ಪೊಲೀಸರಿಗೆ ಆತ್ಮೀಯರು ಎಂದು ಸಾರುವಂತೆ ಬಿಂಬಿತವಾಗುತ್ತಿದೆ. ಇದು ಅತ್ಯಂತ ವಿಷಾದಕರ ಸಂಗತಿಯಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ.
ಈ ರೀತಿಯ ಪರಿಪಾಠಗಳಿಗೆ ಅಂತ್ಯ ಕಾಣಿಸುವ ಹಿತದೃಷ್ಟಿಯಿಂದ ಪೊಲೀಸರಿಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಅಪರಾಧ ಹಿನ್ನೆಲೆಯುಳ್ಳ ಅಥವಾ ಸಮಾಜಘಾತಕ ವ್ಯಕ್ತಿಗಳು, ರೌಡಿಗಳೊಂದಿಗೆ ಯಾವುದೇ ರೀತಿಯ ಸಂಬಂಧ ಹೊಂದಿರತಕ್ಕದ್ದಲ್ಲ. ಠಾಣೆ ಮತ್ತು ಕಚೇರಿಗಳಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಇನ್ನಿತರ ಖಾಸಗಿ ಸಮಾರಂಭ ಆಚರಣೆ ಮಾಡುವಂತಿಲ್ಲ ಎಂದು ಡಿಜಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:‘ಕಪಿಲ್​ದೇವ್’ ವರ್ಗಾವಣೆ, ‘ಬೌಂಡರಿ’ ಮೀರಿದ ಸಂಭ್ರಮ!; ಖಾಕಿ ಖದರಿಗೆ ಮುದುರಿತಾ ಕೋವಿಡ್ ನಿಯಮ?
ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೊದಲು ಆಯೋಜಕ ವ್ಯಕ್ತಿ, ಸಂಘ-ಸಂಸ್ಥೆಯ ಪೂರ್ವಾಪರ ಚರಿತ್ರೆ ಪರಿಶೀಲನೆ ಮಾಡಿದ ನಂತರ ಸೂಕ್ತ ನಿರ್ಧರ ತೆಗೆದುಕೊಳ್ಳಬೇಕು. ಪೊಲೀಸ್ ಇಲಾಖೆಗೆ ಧಕ್ಕೆ ಆಗುವುದಿಲ್ಲ ಎಂಬುದು ಮನವರಿಕೆಯಾದ ಮೇಲೆ ಅಥವಾ ಅಪರಾಧ ತಡೆ-ಸಂಚಾರ ನಿರ್ವಹಣೆ ಉದ್ದೇಶಕ್ಕೆ ಭಾಗವಹಿಸಬಹುದು. ಆ ಕಾರ್ಯಕ್ರಮಗಳು ಸಮಾಜಕ್ಕೆ, ಸಾರ್ವಜನಿಕರಿಗೆ ಅರಿವು ಮೂಡಿಸುವ ತಿಳುವಳಿಕೆ, ಸಾರ್ವಜನಿಕರ ಮತ್ತು ಪೊಲೀಸರ ಸಂಬಂಧ ವೃದ್ಧಿಸುವ ಉದ್ದೇಶ ಹೊಂದಿರಬೇಕು ಎಂದು ಡಿಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.
ಪೊಲೀಸ್ ವೃಂದ ಮತ್ತು ಸಮುದಾಯದಲ್ಲಿ ಮನೋಸ್ಥೈರ್ಯ ಹೆಚ್ಚುವ ಸಲುವಾಗಿ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಆಚರಿಸಬಹುದು. ಅಂತಹ ಕಾರ್ಯಕ್ರಮದ ರೂಪರೇಷೆಗಳನ್ನು ಹಿರಿಯ ಅಧಿಕಾರಿಗಳು ನಿರ್ಧರಿಸಬೇಕು. ಸ್ವಾಗತ, ಬೀಳ್ಕೊಡುಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ವೇಳೆ ಪೊಲೀಸರು ಹೊರತುಪಡಿಸಿ ಖಾಸಗಿ ವ್ಯಕ್ತಿಗಳು ಭಾಗವಹಿಸುವಂತಿಲ್ಲ. ಈ ಎಲ್ಲ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಎಲ್ಲ ಜಿಲ್ಲ ವರಿಷ್ಠಾಧಿಕಾರಿಗಳು ಜಾರಿಗೆ ತರಬೇಕು ಮತ್ತು ನಿಗಾ ವಹಿಸಬೇಕೆಂದು ಡಿಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ.
ಇದನ್ನೂ ಓದಿ:ಸಾವಿಗೆ ವೈದ್ಯರೇ ಕಾರಣ, ಅವರನ್ನು ಬಂಧಿಸಿ; ಹೆರಿಗೆ ವೇಳೆ ಸತ್ತ ಗರ್ಭಿಣಿಯ ಸಂಬಂಧಿಕರ ಆಗ್ರಹ
ಹಿರಿಯ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದ ಯಾವುದೇ ಕಾರ್ಯಕ್ರಮ-ಸಮಾರಂಭಗಳ ಆಚರಣೆಗಾಗಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಸಾರ್ವಜನಿಕರಿಂದ ದೇಣಿಗೆ ವಸೂಲಿ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಡಿಜಿ ಎಚ್ಚರಿಕೆ ನೀಡಿದ್ದಾರೆ.
ರೌಡಿ-ಕ್ರಿಮಿನಲ್‌ಗಳೊಂದಿಗೆ ಬರ್ತ್‌ಡೇ ಪಾರ್ಟಿ, ಬೀಳ್ಕೊಡುಗೆ, ಸ್ವಾಗತ ಸಮಾರಂಭದಲ್ಲಿ ಪೊಲೀಸರು ಭಾಗವಹಿಸಿದರೆ ಅಂಥವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ.|ಪ್ರವೀಣ್ ಸೂದ್ರಾಜ್ಯ ಪೊಲೀಸ್ ಮಹಾನಿರ್ದೇಶಕ
ಪೊಲೀಸ್ ಕೈಗೇ ಕಚ್ಚಿದ ಯುವತಿ; ಚಿಕ್ಕಪೇಟೆಯಲ್ಲಿ ಸಣ್ಣ ವಿಷಯಕ್ಕೇ ನಡೆಯಿತು ದೊಡ್ಡ ರಾದ್ಧಾಂತ!

ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:seven + sixteen =
Remember me
