ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೂ ಟ್ರೀಟ್ಮೆಂಟ್ ಸಿಗ್ತಿಲ್ಲ!
ಜಾಂಡೀಸ್​ನಿಂದ ಬಳಲುತ್ತಿದ್ದ ವಿಜಯನಗರ ಪೊಲೀಸ್​ ಠಾಣೆಯ ಮುಖ್ಯಪೇದೆ ರವಿಕುಮಾರ್​(49) ಚಿಕಿತ್ಸೆಗಾಗಿ ನಿನ್ನೆ (ಗುರವಾರ) ರಾತ್ರಿಯಿಡೀ ಆಸ್ಪತ್ರೆಗಳಿಗೆ ಅಲೆದಿದ್ದಾರೆ. ಆದರೆ, ಕರೊನಾ ಭೀತಿ ಹಿನ್ನೆಲೆಯಲ್ಲಿ ಅವರನ್ನು ಯಾವೊಂದು ಆಸ್ಪತ್ರೆಯಲ್ಲೂ ಅವರನ್ನು ದಾಖಲಿಸಿಕೊಂಡಿಲ್ಲ. ಐಸಿಯು ಖಾಲಿ ಇಲ್ಲ ಎಂದೇಳುತ್ತಿದ್ದ ಆಸ್ಪತ್ರೆ ಸಿಬ್ಬಂದಿ, ಬೆಳಗ್ಗೆವರೆಗೂ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಂತೆ ಮಾಡಿದ್ದಾರೆ. ಬೇರೆ ದಾರಿ ಕಾಣದೆ ಮನೆಗೆ ಮರಳಿದ ರವಿಕುಮಾರ್​ ಬೆಳಗ್ಗೆ 8ರ ಸುಮಾರಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಇದನ್ನೂ ಓದಿರಿಜಿಲ್ಲಾಧಿಕಾರಿಗೂ ಕೋವಿಡ್​ ಸೋಂಕು, ಬೆಚ್ಚಿಬೀಳಿಸುತ್ತೆ ಟ್ರಾವೆಲ್​ ಹಿಸ್ಟರಿ!
ಬ್ಯಾಟರಾಯನಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ರವಿಕುಮಾರ್​ ವಾಸವಿದ್ದರು. 6 ತಿಂಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ನಿನ್ನೆ ತೀವ್ರ ಅಸ್ವಸ್ಥರಾಗಿದ್ದರು. ಅವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭ್ಯವಾಗಿದ್ದರೆ ಬದುಕುಳಿಯುತ್ತಿದ್ದರು, ಆರಕ್ಷಕರಿಗೇ ಇಂತಹ ಸ್ಥಿತಿ ಎದುರಾದರೆ ಇನ್ನು ಸಾಮಾನ್ಯ ಜನರ ಪಾಡೇನು ಎಂಬ ಪ್ರಶ್ನೆ ಕಾಡುತ್ತಿದೆ. ಚಿಕಿತ್ಸೆ ಸಿಗದೆ ರವಿಕುಮಾರ್​ ಮೃತಪಟ್ಟ ಘಟನೆ ಪೊಲೀಸ್ ಇಲಾಖೆಯ ಸಿಬ್ಬಂದಿಯಲ್ಲೂ ಆತಂಕ ಮೂಡಿಸಿದೆ.
ಇತ್ತೀಚಿಗೆ ಕಂಪ್ಲಿ ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್​ಗಾಗಿ 16 ತಾಸು ಕಾಯಬೇಕಾಯಿತು. ಇನ್ನು ಈ ಪೇದೆ ಜತೆಯಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇತರ ಸಿಬ್ಬಂದಿಗೆ ಕೋವಿಡ್​ ಪರೀಕ್ಷೆ ಮಾಡುವಂತೆ ಪೊಲೀಸ್​ ಹಿರಿಯ ಅಧಿಕಾರಿಯೊಬ್ಬರು ಖುದ್ದು ಆಸ್ಪತ್ರೆಗೆ ಹೋಗಿ ಮನವಿ ಮಾಡಿದರೂ ಪರೀಕ್ಷೆ ನಡೆಸಲಿಲ್ಲ. ಆಸ್ಪತ್ರೆಯಲ್ಲಿ ಬೆಡ್​ಗಳಿಲ್ಲದ ಕಾರಣ ಕೋವಿಡ್​ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ ಎಂದು ವೈದ್ಯರೊಬ್ಬರು ಆ ಹಿರಿಯ ಪೊಲೀಸ್​ ಅಧಿಕಾರಿಗೆ ತಿಳಿಸಿದ್ದರಂತೆ. ಕರೊನಾ ವಾರಿಯರ್ಸ್​ ಆದ ಪೊಲೀಸರೇ ಚಿಕಿತ್ಸೆಗಾಗಿ ಪರದಾಡುತ್ತಿರುವ ದುಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಆ ಅಧಿಕಾರಿ, ‘ನಿಮ್ಮ ಜೀವ ನಿಮ್ಮ ಕೈಯಲ್ಲಿ’ ಎಂಬ ಜಾಗ್ರತೆ ಸಂದೇಶವನ್ನು ಜನರಿಗೆ ರವಾನಿಸಿದ್ದನ್ನು ಸ್ಮರಿಸಬಹುದು.
video/ ಆಸ್ಪತ್ರೆಯಿಂದ ಕರೊನಾ ಸೋಂಕಿತ ಎಸ್ಕೇಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + four =
Remember me
