ಬೆಂಗಳೂರು:ಚಡ್ಡಿ ಹಾಕಿಕೊಂಡು ಬೈಕ್ ಜೊತೆ ಫೀಲ್ಡಿಗೆ ಇಳಿದು ಕಳ್ಳತನ ಮಾಡ್ತಿದ್ದ ಖತರ್ನಾಕ್​ ಕಳ್ಳರ ಗ್ಯಾಂಗ್​ಅನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
ಚಡ್ಡಿ ಹಾಕುತ್ತಿದ್ದ ಈ ಕಳ್ಳರು ಶರವೇಗದಲ್ಲಿ ಬಂದು ಸರ ಕಿತ್ತು ಪರಾರಿಯಾಗಿ ಸುತ್ತಮುತ್ತಲಿನ ಎಲ್ಲರಲ್ಲೂ ಆತಂಕ ಸೃಷ್ಟಿಸಿದ್ದ ಈ ಚಡ್ಡಿ ಗ್ಯಾಂಗ್​ಅನ್ನು ಪೊಲೀಸರು ಬಂಧಿಸಿ ಸಾರ್ವಜನಿಕರಿಗೆ ಉಸಿರು ಬಿಡುವಂತೆ ಮಾಡಿದ್ದಾರೆ.
ಸುನೀಲ್ ಕುಮಾರ್ ಅಲಿಯಾಸ್​ ಸ್ನ್ಯಾಚರ್ ಸುನೀಲ್(37) ಶ್ರೀನಿವಾಸ್ ಅಲಿಯಾಸ್​ ಚಡ್ಡಿ(25) ಬಂಧಿತ ಆರೋಪಿಗಳಾಗಿದ್ದಾರೆ. ಈ ಚಡ್ಡಿ ಗ್ಯಾಂಗ್​, ಗಿರಿನಗರದ ಅಶೋಕನಗರದಲ್ಲಿ ಚೈನ್ ಸ್ನಾಚಿಂಗ್ ಮಾಡುತ್ತಿದ್ದರು.
ಇವರು ಇತ್ತೀಚೆಗೆ 56 ವರ್ಷದ ಸ್ಕೂಲ್ ಟೀಚರ್ ಕತ್ತಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ದೂರನ್ನು ದಾಖಲಿಸಿಕೊಂಡ ಪೊಲೀಸರು ನಿರಂತರವಾಗಿ 15 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಇದರ ಫಲವಾಗಿ ಕಡೆಗೂ ಈ ಚಡ್ಡಿ ಗ್ಯಾಂಗ್​ ಸೆರೆಯಾಗಿದ್ದಾರೆ.
ಬಂಧಿತರಿಂದ ಬರೋಬ್ಬರಿ ಒಂದೂವರೆ ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನದ ಸರ ವಶಕ್ಕೆ ಪಡೆಯಲಾಗಿದ್ದು ಚಿನ್ನದ ಜೊತೆಗೆ 12 ಬೈಕ್​ಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eleven =
Remember me
